ಬೆಂಗಳೂರು: ಕೊನೆಗೂ ಪೊಲೀಸರ ಬಲೆಗೆ ಬಿದ್ದ ನಗರದ ಹಳೇಯ ಕಳ್ಳ!
ಸಿಲಿಕಾನ್ ಸಿಟಿಯ ಹಳೇಯ ಹವ್ಯಾಸಿ ಕಳ್ಳ ಕೊನೆಗೂ ಸೆಂಟ್ರಲ್ ವಿಭಾಗದ ಪೊಲೀಸರ ಬಲೆಗೆ ಬಿದ್ದಿದ್ದಾನೆ....

ಬೆಂಗಳೂರು: ಸಿಲಿಕಾನ್ ಸಿಟಿಯ ಹಳೇಯ ಹವ್ಯಾಸಿ ಕಳ್ಳ ಕೊನೆಗೂ ಸೆಂಟ್ರಲ್ ವಿಭಾಗದ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಇತ್ತೀಚಿನ ಸುಮಾರು 20 ಪ್ರಕರಣಗಳಲ್ಲಿ ಬೇಕಾಗಿದ್ದ ರಾಮಸ್ವಾಮಿ ಪಾಳ್ಯದ ರಾಬರ್ಟ್ ನನ್ನು ಬಂಧಿಸಿರುವ ಪೊಲೀಸರು ಆತನಿಂದ 55 ಲಕ್ಷ ಮೌಲ್ಯ ಬೆಲೆಬಾಳುವ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ 44 ವರ್ಷಗಳಿಂದ ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿರುವ ರಾಬರ್ಟ್ ಗೆ ಪೊಲೀಸರು, ಕೇಸು, ಕೊರ್ಟ್, ಜೈಲು ಕಾಮನ್ ಆಗಿಬಿಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕದ್ದ ಹಣದಲ್ಲೇ ಎರಡು ಅಂತಸ್ತಿನ ಮನೆ ಕಟ್ಟಿಕೊಂಡಿದ್ದಾನೆ. ಅಲ್ಲದೇ ಒಂದು ಮನೆಯನ್ನು ಬಾಡಿಗೆಗೂ ಬಿಟ್ಟಿದ್ದಾನೆ.
ಏಪ್ರಿಲ್ 27ರಂದು ರಾಮನಗರದ ಪಿ.ಎನ್. ಬದ್ರಿನಾಥ್ ಎಂಬುವರು ಕುಟುಂಬ ಸಮೇತ ಓಮ್ನಿ ವ್ಯಾನಿನಲ್ಲಿ ವಿ.ವಿ.ಪುರಕ್ಕೆ ಬಂದಿದ್ದರು. ಸಜ್ಜನ್‌ರಾವ್ ವೃತ್ತದಲ್ಲಿ ವಾಹನ ನಿಲುಗಡೆ ಮಾಡಿ, ದೇವಾಸ್ಥಾನಕ್ಕೆ ತೆರಳಿದ್ದರು.ಆಗ ಅಲ್ಲಿಗೆ ಬಂದಿದ್ದ ರಾಬರ್ಟ್, ಕಿಟಕಿ ಗಾಜು ಸರಿಸಿ 14 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಈ ಸಂಬಂಧ ಬದ್ರಿನಾಥ್ ಅವರು ಸೆಂಟ್ರಲ್ ಠಾಣೆಗೆ ದೂರು ಕೊಟ್ಟಿದ್ದರು.
ಘಟನಾ ಸ್ಥಳದಲ್ಲಿದ್ದ ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಲಾಯಿತು, ಆದರೆ ಅದರಲ್ಲಿ ದೃಶ್ಯಗಳು ಸರಿಯಾಗಿರಲಿಲ್ಲ, ಆದರೆ ಕಳ್ಳನ ವಾಕಿಂಗ್ ಸ್ಟೈಲ್ ಗಮನಿಸಿದಾಗಿ ಅದು ರಾಬರ್ಟ್ ಎಂದು ತಿಳಿದು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂತು ಪೊಲೀಸರು ತಿಳಿಸಿದ್ದಾರೆ.
1.75 ಕೆ.ಜಿ.ಚಿನ್ನಾಭರಣದ ಜತೆಗೆ 12 ಮೊಬೈಲ್‌ಗಳು, 33 ಕೈಗಡಿಯಾರಗಳು, 5 ಕ್ಯಾಮೆರಾಗಳು ಹಾಗೂ ಹ್ಯಾಂಡಿಕ್ಯಾಮ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
1972 ರಿಂದ ಸೈಕಲ್ ಬೆಲ್ ಕಳ್ಳತನ ಆರಂಭಿಸಿದ ನಂತರ ಈತ ಚಿನ್ನಾಭರಣ ಕದಿಯಲು ಪ್ರಾರಂಭಿಸಿದ. ಲಾಕ್ ಮಾಡಿದ್ದ ಕಾರ್ ನಲ್ಲಿ ಸ್ಟಿರಿಯೋಗಳನ್ನು ಕದಿಯುತ್ತಿದ್ದ ಚಾಲಾಕಿ ಈತ. ನಂತರ ಈತನನ್ನು ಸ್ಟೀರಿಯೋ ರಾಬರ್ಟ್ ಎಂದು ಕರೆಯಲಾಗುತ್ತಿತ್ತು. ವಿವಾಹದ ನಂತರ ಹಣದ ಅವಶ್ಯಕತೆಗಾಗಿ ಚಿನ್ನಾಭರಣ ಕದಿಯು ಆರಂಭಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


