ರಾಜ್ಯ

ಅಕ್ಷಯ ತೃತೀಯ: ದಾಖಲೆಯ ಪ್ರಮಾಣದಲ್ಲಿ ಚಿನ್ನ ಮಾರಾಟ

ಅಕ್ಷಯ ತೃತೀಯ ಪ್ರಯುಕ್ತ ಸೋಮವಾರ ಚಿನ್ನದ ಮಳಿಗೆಗಳಲ್ಲಿ ದಾಖಲೆ ಪ್ರಮಾಣದ ವಹಿವಾಟು ನಡೆದಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ದಾಖಲೆಯ...

ಅಕ್ಷಯ ತೃತೀಯ: ದಾಖಲೆಯ ಪ್ರಮಾಣದಲ್ಲಿ ಚಿನ್ನ ಮಾರಾಟ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು : ಅಕ್ಷಯ ತೃತೀಯ ಪ್ರಯುಕ್ತ ಸೋಮವಾರ ಚಿನ್ನದ ಮಳಿಗೆಗಳಲ್ಲಿ ದಾಖಲೆ ಪ್ರಮಾಣದ ವಹಿವಾಟು ನಡೆದಿದೆ.  ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ದಾಖಲೆಯ ಪ್ರಮಾಣದ ವಹಿವಾಟು ನಡೆದಿದೆ.

ಗ್ರಾಹಕರನ್ನು ಸೆಳೆಯಲು ಮಳಿಗೆಗಳು ಕಳೆದೊಂದು ತಿಂಗಳಿಂದಲೇ ವಿವಿಧ ರೀತಿಯ ಆಫರ್​ಗಳನ್ನು ಘೊಷಿಸಿದ್ದವು. ಎಲ್ಲ ಮಳಿಗೆಗಳಲ್ಲಿ ಸೋಮವಾರ ಮುಂಜಾನೆ ನಡೆದ ವಿಶೇಷ ಪೂಜೆ ಗ್ರಾಹಕರನ್ನು ಸೆಳೆಯಿತು.

ಗ್ರಾಹಕರಿಗೆ ಆಭರಣಗಳ ಜತೆಗೆ ಉಚಿತ ಭವಿಷ್ಯ ಹೇಳುವುದು, ದೇವರ ವಿಗ್ರಹಗಳ ಕೊಡುಗೆ ಮತ್ತಿತರ ಕೊಡುಗೆಗಳ ಮೂಲಕ ದಿನಪೂರ್ತಿ ವ್ಯಾಪಾರಿಗಳು ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನದಲ್ಲಿದ್ದರು. ಅನೇಕ ಕಡೆ ಜನರು ಕ್ಯೂ ನಿಂತು ಆಭರಣ ಕೊಂಡರು. ಸಾಮಾನ್ಯ ದಿನಗಳಿಗಿಂತ ನಿನ್ನೆ 10 ಪಟ್ಟು ಹೆಚ್ಚು ಚಿನ್ನದ ವ್ಯಾಪಾರ ನಡೆದಿದೆ ಎಂದು ಧವನಂ ಜ್ಯುವೆಲ್ಲರ್ಸ್ ನ ನಿರ್ದೇಶಕ ರವಿ ತಿಳಿಸಿದ್ದಾರೆ.

ವೈಶಾಖ ಮಾಸದಂದು ಬರುವ ಈ ಅಕ್ಷಯ ತೃತೀಯ ಹಿಂದೂ ಹಾಗೂ ಜೈನರಿಗೆ ಪವಿತ್ರ ದಿನವಾಗಿದೆ. ಈ ಶುಭ ದಿನದಲ್ಲಿ ಚಿನ್ನ ಅಥವಾ ಆಸ್ತಿ ಖರೀದಿಸಿದರೇ ಸಂಪತ್ತು ಅಕ್ಷಯವಾಗುತ್ತದೆ ಎಂಬ ನಂಬಿಕೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.