ಭಾರತ-ಆಸ್ಟ್ರೇಲಿಯಾ ಮ್ಯಾಚ್ ನೋಡುವ ವೇಳೆ ನಾಯಿ ಬೊಗಳಿದ್ದಕ್ಕೆ ಯುವಕನ ಕೊಲೆ
ಭಾರತ- ಆಸ್ಟ್ರೇಲಿಯಾ ನಡುವೆ ನಡೆಯುತ್ತಿದ್ದ ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದ ವೇಳೆ ನಾಯಿ ಬೊಗಳಿದ್ದಕ್ಕೆ ಯುವಕನನ್ನು ಬಿಯರ್ ಬಾಟಲ್ ನಿಂದ ಇರಿದು ಕೊಲೆ ಮಾಡಿರುವ ಘಟನೆ ...

ಬೆಂಗಳೂರು: ಭಾರತ- ಆಸ್ಟ್ರೇಲಿಯಾ ನಡುವೆ ನಡೆಯುತ್ತಿದ್ದ ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದ ವೇಳೆ ನಾಯಿ ಬೊಗಳಿದ್ದಕ್ಕೆ ಯುವಕನನ್ನು ಬಿಯರ್ ಬಾಟಲ್ ನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಜೆಸಿ ನಗರದಲ್ಲಿ ನಡೆದಿದೆ.
ಜೆಸಿ ನಗರದ ಎಸ್‍ಕೆ ಗಾರ್ಡನ್‍ನಲ್ಲಿ ಈ ದಾರುಣ ಘಟನೆ ನಡೆದಿದ್ದು, ಕೊಲೆಯಾದ ಯುವಕನನ್ನು ತೃತೀಯ ಬಿಕಾಂ ಓದುತ್ತಿದ್ದ ಅವಿನಾಶ್ ಎಂದು ಗುರುತಿಸಲಾಗಿದೆ.
ನಿನ್ನೆ ರಾತ್ರಿ ಜೆಸಿ ನಗರದಲ್ಲಿ ದೊಡ್ಡ ಪ್ರೊಜೆಕ್ಟರ್ ಅಳವಡಿಸಿಕೊಂಡು ಹಲವು ಮಂದಿ ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದರು. ಈ ವೇಳೆ ಅವಿನಾಶ್ ಮನೆಯ ನಾಯಿ ಬೊಗಳಲು ಆರಂಭಿಸಿದೆ. ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದ್ದ ವೇಳೆಯೇ ನಾಯಿ ಬೊಗಳುತ್ತಿರುವುದು ಅಲ್ಲಿದ್ದ ಯುವಕರ ಆಕ್ರೋಶಕ್ಕೆ ಕಾರಣವಾಗಿ ನಾಯಿಯನ್ನು ಒಳಗೆ ಕೂಡಿ ಹಾಕಲು ಯುವಕರ ಗುಂಪೊಂದು ಹೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಅವಿನಾಶ್ ಜೋರಾಗಿ ಸೌಂಡ್ ಇಟ್ಟು ಮ್ಯಾಚ್ ನೋಡುವಂತೆ ಹೇಳಿದ್ದಾನೆ. ಇದರಿಂದ ಕುಪಿತಗೊಂಡ ಕೆನಡಿ ಎಂಬಾತ ತನ್ನ ಬಳಿಯಿದ್ದ ಬಿಯರ್ ಬಾಟಲ್ ನಿಂದ ಅವಿನಾಶ್ ಗೆ ಚುಚ್ಚಿದ್ದಾನೆ. ಈ ವೇಳೆ ಎರಡು ಗುಂಪುಗಳ ನಡುವೆ ಜಗಳ ನಡೆದಿದ್ದು ಹಲವರಿಗೆ ಗಾಯಗಳಾಗಿವೆ. ಇನ್ನು ಅವಿನಾಶ್ ಮೃತಪಟ್ಟಿದ್ದು, ಜೆ ಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೆನಡಿ ಮತ್ತು ಆತನ ಗೆಳೆಯನನ್ನು ಪೊಲೀಸರು ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


