ಫೇಸ್ ಬುಕ್ ನಲ್ಲಿ "ಹಾಯ್ ಶಿಷ್ಯ" ಎ೦ದಿದ್ದಕ್ಕೆ ಕೊಲೆ..!
ಫೇಸ್‍ಬುಕ್‍ನಲ್ಲಿ ಏರ್ಪಟ್ಟ ಯುವಕರ ಕ್ಷುಲ್ಲಕ ಜಗಳವೊಂದು ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ...

ಬೆ೦ಗಳೂರು: ಫೇಸ್‍ಬುಕ್‍ನಲ್ಲಿ ಏರ್ಪಟ್ಟ ಯುವಕರ ಕ್ಷುಲ್ಲಕ ಜಗಳವೊಂದು ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಟ್ಟಹಲಸೂರು ಸಮೀಪದ ಮುನೇಶ್ವರ ಕ್ಯಾ೦ಪ್‍ನ ಅರುಣ್(21) ಕೊಲೆಯಾದ ಯುವಕನಾಗಿದ್ದು, ಈ ಹಿಂದೆ ಈತ ಫೇಸ್ ಬುಕ್ ನಲ್ಲಿ "ಹಾಯ್ ಶಿಷ್ಯ' ಎ೦ದು ಸ೦ದೇಶ ಕಳುಹಿಸಿದ ಕ್ಷುಲ್ಲಕ ವಿಚಾರಕ್ಕೆ ಜಗಳ ಏರ್ಪಟ್ಟಿತ್ತು. ಬಳಿಕ ಈತನನ್ನು ಮಾತನಾಡುವ ನೆಪದಲ್ಲಿ ಅಪಹರಿಸಿದ ದುಷ್ಕರ್ಮಿಗಳ ತ೦ಡ ನಡುರಸ್ತೆಯಲ್ಲೇ ಮನಬ೦ದ೦ತೆ ಚೂರಿ ಇರಿದು ಹತ್ಯೆ ಮಾಡಿದೆ. ಪ್ರಕರಣ ಸಂಬಂಧ ಪ್ರಸ್ತುತ ಮೂವರನ್ನು ಬಂಧಿಸಲಾಗಿದ್ದು, ಬಂಧಿತರನ್ನು ಆರೋಪಿಗಳಾದ ಸ೦ದೀಪ್, ಭರತ್ ಹಾಗೂ ಯೋಗೇಶ್ ಎ೦ದು ಗುರುತಿಸಲಾಗಿದೆ.
ಪಿಯುಸಿ ಓದಿದ್ದ ಅರುಣ್ ಕೆ೦ಪೇಗೌಡ ಅ೦ತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ವಿಭಾಗದಲ್ಲಿ ನೌಕರನಾಗಿದ್ದ. 15 ದಿನಗಳ ಹಿ೦ದೆ ಅರುಣ್ ಫೇಸ್‍ಬುಕ್‍ನಲ್ಲಿ ಸ೦ದೀಪ್ ಖಾತೆಗೆ "ಹಾಯ್ ಶಿಷ್ಯ' ಎ೦ದು ಸ೦ದೇಶ ಹಾಕಿದ್ದ. ಅಜಿತ್ ಎ೦ಬಾತ ಅರುಣ್ ಮೆಸೇಜ್‍ಗೆ ಲ್ಯೆಕ್ ಮಾಡಿದ್ದ. ಪಿಯುಸಿ ಓದುವಾಗ ಕಾಲೇಜಿನಲ್ಲಿ ಸ೦ದೀಪ್ ಹಿರಿಯ ವಿದ್ಯಾರ್ಥಿಯಾಗಿದ್ದ. ತನ್ನ ಜೂನಿಯರ್ ತನಗೆ "ಶಿಷ್ಯ" ಎ೦ದು ಸ೦ದೇಶ ಕಳುಹಿಸಿದ್ದಕ್ಕೆ ಆಕ್ರೋಶಗೊ೦ಡಿದ್ದ ಸಂದೀಪ್, ಅರುಣ್ ಮನೆ ಬಳಿ ಹೋಗಿ ಜಗಳ ಮಾಡಿದ್ದ. ಈ ವೇಳೆ ಅರುಣ್ ಹಾಗೂ ಆತನ ಸ್ನೇಹಿತರು ಸೇರಿಕೊ೦ಡು ಸ೦ದೀಪ್ ಮೇಲೆ ಹಲ್ಲೆ ಮಾಡಿದ್ದರು.
ಈ ಘಟನೆಯಿ೦ದ ಭಯಗೊಂಡ ಅರುಣ್‍ನನ್ನು ಆತನ ತಾಯಿ ಚೆನ್ನೈನಲ್ಲಿರುವ ಅಕ್ಕನ ಮನೆಗೆ ಕಳುಹಿಸಿದ್ದರು. ಸೋಮವಾರ ಮಧ್ಯಾಹ್ನವಷ್ಟೇ ಅರುಣ್ ನಗರಕ್ಕೆ ವಾಪಸ್ಸಾಗಿದ್ದ. ಈ ವಿಚಾರ ತಿಳಿದ ಸ೦ದೀಪ್ ತನ್ನ ಸ್ನೇಹಿತರ ಜತೆಗೆ ಸೇರಿ ರಾತ್ರಿ ಸುಮಾರು 8.30ರಲ್ಲಿ ಅರುಣ್ ಮನೆ ಬಳಿ ಬ೦ದು ಮಾತನಾಡಿಸುವ ನೆಪದಲ್ಲಿ ಪ್ರಶಾ೦ತ್ ಹೋಟೆಲ್ ಹತ್ತಿರಕ್ಕೆ ಕರೆದೊಯ್ದಿದ್ದ ಸಂದೀಪ್ ಮತ್ತು ಆತನ ಸ್ನೇಹಿತರು ಅರುಣ್‍ನ ಮೇಲೆ ಹಲ್ಲೆ ನಡೆಸಿದ್ದಾರೆ. ಎಷ್ಟೊತ್ತಾದರು ಮಗ ಮನೆಗೆ ವಾಪಸ್ ಬಾರದಿದ್ದಾಗ ಗಾಬರಿಗೊ೦ಡ ಅರುಣ್ ತಾಯಿ ಅಮರಾವತಿ ಹುಡುಕಿಕೊ೦ಡು ಹೋದಾಗ ಈ ಘಟನೆಯನ್ನು ಕಂಡು ನೆರವಿಗೆ ಕೂಗಿಕೊ೦ಡಿದ್ದರು.
ಆಗ ಅರುಣ್‍ನನ್ನು ಕಾರಿನಲ್ಲಿ ಅಪಹರಿಸಿದ ಆರೋಪಿಗಳು, ವಿದ್ಯಾನಗರ ಕ್ರಾಸ್‍ಗೆ ಕರೆದೊಯ್ದು ಹಿಗ್ಗಾಮುಗ್ಗಾ ಥಳಿಸಿ ಅರುಣ್ ಕಾಲಿನ ನರ ಕತ್ತರಿಸಿದ್ದರು. ಬಳಿಕ ಓಡಿ ತಪ್ಪಿಸಿಕೊಳ್ಳುವ೦ತೆ ಸೂಚಿಸಿದ್ದರು. ಕು೦ಟುತ್ತಾ ಓಡುತ್ತಿದ್ದವನ ಬೆನ್ನತ್ತಿ ಮನಬ೦ದ೦ತೆ ಚೂರಿ ಇರಿದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಅರುಣ್‍ನನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದರಾದರೂ ತೀವ್ರ ರಕ್ತಸ್ರಾವವಾಗಿ ಮಾರ್ಗ ಮಧ್ಯದಲ್ಲೆ ಕೊನೆಯುಸಿರೆಳೆದಿದ್ದ ಎ೦ದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


