ರಾಜ್ಯ

24 ಗಂಟೆಯೊಳಗೆ 1.54 ಲಕ್ಷ ರುಪಾಯಿ ಕಳೆದುಕೊಂಡ ಟೆಕ್ಕಿ

ಎಟಿಎಂನಲ್ಲಿ ಹಣ ಡ್ರಾಮಾಡಲು ಹೋದಂತ ಟೆಕ್ಕಿಯೊಬ್ಬರಿಗೆ ಆಘಾತ ಎದುರಾಗಿದೆ. ತಮ್ಮ ಖಾತೆಯಲ್ಲಿದ್ದ 1.54 ಲಕ್ಷ ರುಪಾಯಿ ಪೈಕಿ ಬರೀ 91 ರುಪಾಯಿ...

24 ಗಂಟೆಯೊಳಗೆ 1.54 ಲಕ್ಷ ರುಪಾಯಿ ಕಳೆದುಕೊಂಡ ಟೆಕ್ಕಿ
ಕಳ್ಳರು
Published On :

ಬೆಂಗಳೂರು: ಎಟಿಎಂನಲ್ಲಿ ಹಣ ಡ್ರಾಮಾಡಲು ಹೋದಂತ ಟೆಕ್ಕಿಯೊಬ್ಬರಿಗೆ ಆಘಾತ ಎದುರಾಗಿದೆ. ತಮ್ಮ ಖಾತೆಯಲ್ಲಿದ್ದ 1.54 ಲಕ್ಷ ರುಪಾಯಿ ಪೈಕಿ ಬರೀ 91 ರುಪಾಯಿ ಬ್ಯಾಲೆನ್ಸ್ ಇರುವುದನ್ನು ಕಂಡು ಗಾಬರಿಗೊಂಡಿದ್ದಾರೆ.

ತೆಲಂಗಾಣ ಮೂಲದ ಪ್ರೀತಂ ಎಕ್ಲಾಸ್ಪುರ್ ಅವರು ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಕಳೆದ ಜನವರಿಯ ವೇತನ ಸೇರಿ ಸುಮಾರು 1.54 ಲಕ್ಷ ರುಪಾಯಿ ಖಾತೆಯಲ್ಲಿತ್ತು. ಆದರೆ ಕಳೆದ ಫೆಬ್ರವರಿ 13 ರಂದು ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋದಾಗ ತಾವು ಮೋಸ ಹೋಗಿರುವ ಪ್ರಮಾದ ತಿಳಿದುಬಂದಿದೆ.

ಕೆಲ ಹ್ಯಾಕರ್ ಗಳು ಸಾಫ್ಟ್ ವೇರ್ ಉದ್ಯೋಗಿಗಳು ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ ಹಣ ಲೂಟಿ ಮಾಡುತ್ತಿರುವುದು ಇತ್ತೀಚೆಗೆ ಹೆಚ್ಚಾಗಿದೆ. ಪ್ರಕರಣ ಕುರಿತು ಸೈಬರ್ ಕ್ರೈಂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪೊಲೀಸರ ಪ್ರಕಾರ, ಕೆಲ ಹ್ಯಾಕರ್ ಗಳು ಎರಡನೇ ಶನಿವಾರ ಅಥವಾ ಬ್ಯಾಂಕ್ ರಜೆ ಇರುವಂತಾ ದಿನಗಳಲ್ಲಿ ನಕಲಿ ಡೇಬಿಟ್ ಕಾರ್ಡ್ ಗಳ್ನು ಬಳಸಿ ಹಣ ದೋಚುತ್ತಾರೆ. ರಜೆ ದಿನಗಳಲ್ಲಿ ಹಣ ಡ್ರಾ ಆಗಿರುವ ಎಸ್ಎಂಎಸ್ ಗಳು ಖಾತೆದಾರರಿಗೆ ತಲುಪದೇ ಇರುವುದರಿಂದ ತಮ್ಮಗೆ ದೋಖಾ ಆಗಿರುವ ವಿಚಾರಗಳು ತಿಳಿಯುವುದು ವಿಳಂಬವಾಗುತ್ತದೆ.

ಪ್ರೀತಂ ಪ್ರಕರಣಕ್ಕೆ ಬಂದರೆ ಅವರ ಖಾತೆಯಲ್ಲಿದ್ದ ಹಣ ದೋಚಿರುವ ವಿಷಯ ಅವರು ಸ್ವತಃ ಎಟಿಎಂ ಸೆಂಟರ್ ಹೋಗಿ 5 ಸಾವಿರ ರುಪಾಯಿ ಹಣ ಡ್ರಾ ಮಾಡಲು ಹೋದಾಗ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎಂಬ ಸಂದೇಶ ಬಂದ ನಂತರ ತಿಳಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೀತಂ ಎಟಿಎಂನಲ್ಲಿ ವ್ಯವಹಾರದ ವಿವರಗಳನ್ನು ಪಡೆದಾಗ ಅದರಲ್ಲಿ ಎಂಟು ಬಾರಿ ಹಣ ಪಡೆಯಲಾಗಿದೆ. ಇದರಲ್ಲಿ ಏಳು ಬಾರಿ 20 ಸಾವಿರ ಹಾಗೂ ಒಂದು ಬಾರಿ 14 ಸಾವಿರ ಡ್ರಾ ಆಗಿದೆ. ಇದು ಕೇವಲ 12 ಗಂಟೆ ಅವಧಿಯಲ್ಲಿ ಖಾತೆಯಲ್ಲಿದ್ದ ಸಂಪೂರ್ಣ ಹಣವನ್ನು ಡ್ರಾ ಮಾಡಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಪೊಲೀಸರು ಡ್ರಾ ಆಗಿರುವ ವಿಮಾನ ನಿಲ್ದಾಣ ಎಟಿಎಂನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದು, ಇವು ಕಳ್ಳರನ್ನು ಹಿಡಿಯವಷ್ಟು ಸಹಕಾರಿಯಾಗಿಲ್ಲ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.