ರಾಜ್ಯ

ಚಿತ್ರಕ್ಕೆ ಬಂಡವಾಳ ಹೂಡಲು ವಿಲ್ಲನ್ ಆದ ಹೀರೋ!

ಬಣ್ಣದ ಗೀಳು ಹೊಂದಿದ್ದ ವ್ಯಕ್ತಿಯೊಬ್ಬ ಚಿತ್ರದಲ್ಲಿ ನಾಯಕನಾಗಬೇಕು ಎಂಬ ಹುಚ್ಚುತನದಿಂದಾಗಿ ಇದೀಗ ಜೈಲು ಕಂಬಿ ಎಣಿಸುವಂತಾಗಿದೆ.

ಚಿತ್ರಕ್ಕೆ ಬಂಡವಾಳ ಹೂಡಲು ವಿಲ್ಲನ್ ಆದ ಹೀರೋ!
ಚಾಲೆಂಜರ್ ಚಿತ್ರದ ಹೀರೋ ಹಾಗೂ ನಿಜ ಜೀವನದ ಕಳ್ಳ ಮುನಿಯಪ್ಪ (ಟಿಎನ್ ಐಇ ಚಿತ್ರ)
Published On :

ಬೆಂಗಳೂರು: ಬಣ್ಣದ ಗೀಳು ಹೊಂದಿದ್ದ ವ್ಯಕ್ತಿಯೊಬ್ಬ ಚಿತ್ರದಲ್ಲಿ ನಾಯಕನಾಗಬೇಕು ಎಂಬ ಹುಚ್ಚುತನದಿಂದಾಗಿ ಇದೀಗ ಜೈಲು ಕಂಬಿ ಎಣಿಸುವಂತಾಗಿದೆ.

ಸಿನಿಮಾ ನಟನಾಗಬೇಕೆಂಬ ಶೋಕಿಗೆ ಬಿದ್ದು, ತಾನೇ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದ ನಾಯಕನಟನೋರ್ವ ಚಿತ್ರಕ್ಕಾಗಿ ಹಣಹೊಂದಿಸಲು ಸರಗಳ್ಳತನಕ್ಕೆ ಇಳಿದಿದ್ದು, ಆದೂ ಸಾಲದೆ  ಶ್ರೀಮಂತ ಯುವಕನೋರ್ವನನ್ನು ಅಪಹರಿಸಿ ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಹಿಂದೆ ಅಪಹರಣಕ್ಕೊಳಗಾಗಿದ್ದ ಕಿರ್ಲೋಸ್ಕರ್ ಸಂಸ್ಥೆಯ ವ್ಯವಸ್ಥಾಪಕರ ನಿರ್ದೇಶಕರ  ಪುತ್ರನ ಅಪಹರಣ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಪ್ರಕರಣ ಸಂಬಂಧ ಮುನಿಯಪ್ಪ ಮತ್ತು ಆತನ ಗ್ಯಾಂಗ್ ಅನ್ನು ಬಂಧಿಸಿದ್ದಾರೆ.

ಅಪಹರಣ ಪ್ರಕರಣ ಸಂಬಂಧ ಮುನಿಯಪ್ಪನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ಎಲ್ಲ ವಿಚಾರವನ್ನು ಬಾಯಿ ಬಿಟ್ಟಿದ್ದು, ತಾನು ನಟನೆ ಮಾಡುತ್ತಿರುವ ಚಾಲೆಂಜರ್ ಚಿತ್ರದ  ನಿರ್ಮಾಣಕ್ಕಾಗಿ ಹಣ ಸಾಲದೆ ಇಂತಹ ಕೃತ್ಯಕ್ಕೆ ಇಳಿದಿದ್ದೆ ಎಂದು ತಪ್ಪೋಪ್ಪಿಕೊಂಡಿದ್ದಾನೆ. ಮೂಲತಃ ಕೆಆರ್ ಪುರಂ ನಿವಾಸಿಯಾಗಿರುವ ಮುನಿಯಪ್ಪ ಬಿಎ ವ್ಯಾಸಂಗ ಅರ್ಧಕ್ಕೆ ಬಿಟ್ಟು ಖಾಸಗಿ  ಚಾನಲ್‌ನ ಕ್ರೈಂ ಧಾರವಾಹಿಯ ಸಹ ನಿರ್ಮಾಪಕನಾಗಿ ದುಡಿಯುತ್ತಿದ್ದ ಮುನಿಯಪ್ಪ, ಹೀರೋ ಆಗುವ ಆಸೆಯಲ್ಲಿ ‘ಬೀರ’ ಎಂಬ ಚಿತ್ರದ ಸಹನಿರ್ಮಾಪಕ ಹಾಗೂ ಚಿತ್ರನಟಿ ಶುಭಾಪೂಂಜ ಅವರ  ಬಳಿ ಈ ಹಿಂದೆ ಆಪ್ತಸಹಾಯಕನಾಗಿದ್ದ ಹಸನ್ ಡೋಂಗ್ರಿ ಎಂಬಾತನನ್ನು ಪರಿಚಯಿಸಿ ಕೊಂಡಿದ್ದ.

ಸಿನಿಮಾ ಮಾಡುವ ಪ್ಲಾನ್ ರೂಪಿಸಿದ್ದ ಈ ಇಬ್ಬರು, ಚಾಲೆಂಜರ್ ಚಿತ್ರದ ಚಿತ್ರೀಕರಣ ಆರಂಭಿಸಿದ್ದರು. ಆರ್ಥಿಕ ಮುಗ್ಗಟ್ಟಿನಿಂದಾಗಿ ಚಿತ್ರ ಅರ್ಧಕ್ಕೆ ನಿಂತಿದ್ದರಿಂದಹಣಕ್ಕಾಗಿ ಚಿನ್ನದ ಸರ ಕಳವು  ಆರಂಭಿಸಿದ್ದ ಈ ಜೋಡಿ, ಹಣ ಸಾಲದೆ ಹೋದಾಗ ಇಷಾನ್‌ನನ್ನು ಅಪಹರಿಸಿತ್ತು. ನಂತರ ಪೊಲೀಸರಿಗೆ ಹೆದರಿ ಇಷಾನ್‌ನನ್ನು ಬಿಟ್ಟಿದ್ದ ಇವರು ಕೊನೆಗೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಮಾಜಿ ಶಾಸಕರ ಪುತ್ರಿಯನ್ನೇ ಅಪಹರಿಸಿ ವಂಚಿಸಿ ಮದುವೆಯಾಗಿದ್ದ ಭೂಪ
 2008-09ರಲ್ಲಿ ಮುನಿಯಪ್ಪ ಮಾಜಿ ಶಾಸಕರೊಬ್ಬರ ಪುತ್ರಿಯನ್ನು ಅಪಹರಿಸಿ ಮದುವೆ ಆಗಿದ್ದನಂತೆ, ಬಳಿಕ ಈತನ ಅಪರಾಧ ಕೃತ್ಯ ತಿಳಿದು ಪತ್ನಿ ವಿಚ್ಛೇದನ ನೀಡಿದ್ದಾರೆ. ಇದಾದ ಬಳಿಕ  2ನೇ  ಮದುವೆ ಆದ ನಂತರ ಮತ್ತಿಕೆರೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನೂರಾರು ಯುವಕರಿಂದ ಹಣ ಪಡೆದು ವಂಚಸಿದ್ದಾನೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.