ಗರ್ಭಿಣಿ ಬಾಲಕಿಯ ಜೀವ ರಕ್ಷಣೆಗಾಗಿ ಗರ್ಭಪಾತ ಬೇಡ ಎಂದ ಹೈಕೋರ್ಟ್!
ಅತ್ಯಾಚಾರಕ್ಕೀಡಾಗಿ ಅಪ್ರಾಪ್ತ ವಯಸ್ಸಿನಲ್ಲೇ ಗರ್ಭಿಣಿಯಾಗಿದ್ದ ಬಾಲಕಿಯೋರ್ವಳ ಜೀವಕ್ಕೆ ಅಪಾಯವಾದ್ದರಿಂದ ಗರ್ಭಪಾತದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.

ಬೆಂಗಳೂರು: ಅತ್ಯಾಚಾರಕ್ಕೀಡಾಗಿ ಅಪ್ರಾಪ್ತ ವಯಸ್ಸಿನಲ್ಲೇ ಗರ್ಭಿಣಿಯಾಗಿದ್ದ ಬಾಲಕಿಯೋರ್ವಳ ಜೀವಕ್ಕೆ ಅಪಾಯವಾದ್ದರಿಂದ ಗರ್ಭಪಾತದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.
2015ರಲ್ಲಿ ತಾಯಿಯೊಬ್ಬಳು ತನ್ನ 15 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ದುಷ್ಕರ್ಮಿಯೋರ್ವ ಸತತ ಅತ್ಯಾಚಾರ ಮಾಡಿದ್ದು, ಪುತ್ರಿ ಈಗ 25 ವಾರಗಳ ಗರ್ಭಿಣಿಯಾಗಿದ್ದಾಳೆ. ಹೀಗಾಗಿ ಅವಳ ಭವಿಷ್ಯದ ಉದ್ದೇಶದಿಂದ ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಎಸ್ ಬೋಪಣ್ಮ ಅವರು, ಅತ್ಯಾಚಾರಕ್ಕೆ ಈಡಾಗಿ ಗರ್ಭ ಧರಿಸಿರುವ 15 ವರ್ಷದ ಬಾಲಕಿಯ ಗರ್ಭಪಾತ ಕಾರ್ಯ ಸಾಧುವೇ ಎಂಬುದನ್ನು ಪರಿಶೀಲಿಸುವಂತೆ ಹೈಕೋರ್ಟ್ ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಯ ವೈದ್ಯರಿಗೆ ಸೂಚಿಸಿತ್ತು.
ಅದರಂತೆ ಕೆಸಿ ಜನರಲ್ ಆಸ್ಪತ್ರೆಯ ವೈದ್ಯರಾದ ಡಾ.ಕೆವಿ ಮಾಲಿನಿ, ಡಾ.ಪಿ.ಕಸ್ತೂರಿ ಮತ್ತು ಡಾ.ರಮೇಶ್ ತಂಬತ್ ಅವರ ನೇತೃತ್ವದ ತಂಡ ಬಾಲಕಿಯ ವೈದ್ಯಕೀಯ ಪರೀಕ್ಷೆ ನಡೆಸಿ ಹೈಕೋರ್ಟ್ ಗೆ ವರದಿ ನೀಡಿದೆ.ವೈದ್ಯರ ವರದಿಯನ್ನಾಧರಿಸಿದ ನ್ಯಾಯಮೂರ್ತಿ ಎಎಸ್ ಬೋಪಣ್ಣ ಅವರು, ಗರ್ಭಪಾತ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿದರು.
2015ರಲ್ಲಿ ಲಗ್ಗೆರೆಯ ನಿವಾಸಿಯಾಗಿರುವ ಮಹಿಳೆ ತನ್ನ 15 ವರ್ಷದ ಮಗಳ ಮೇಲೆ 30 ವರ್ಷದ ಹನುಮಂತಪ್ಪ ಎಂಬ ವ್ಯಕ್ತಿ ಅಪಹರಣ ಮಾಡಿ ಅತ್ಯಾಚಾರ ಗೈದು ಆಕೆ ಗರ್ಭಿಣಿಯಾಗುವಂತೆ ಮಾಡಿದ್ದ ಎಂದು ಆರೋಪಿಸಿದ್ದರು. ಅಲ್ಲದೆ ಮಗಳ ಗರ್ಭಪಾತ ಮಾಡುವಂತೆ ಆಸ್ಪತ್ರೆಗಳಿಗೆ ದಾಖಲಿಸಿದರೆ ವೈದ್ಯರು ಗರ್ಭಪಾತಕ್ಕೆ ನಿರಾಕರಿಸಿದ್ದರು. ಹೀಗಾಗಿ ಮಹಿಳೆ ಹೈಕೋರ್ಟ್ ನಲ್ಲಿ ಗರ್ಭಪಾತಕ್ಕೆ ಅರ್ಜಿ ಸಲ್ಲಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


