ಗರ್ಭಪಾತ

ಜನಸೇನಾ ಶಾಸಕನ ಕಾಮಕಾಂಡ: ಅತ್ಯಾಚಾರ, ಬಲವಂತದ ಗರ್ಭಪಾತ; ಮಹಿಳೆ ಆರೋಪ
ಕಳೆದ ವರ್ಷದಲ್ಲಿ ಐದು ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದೇನೆ ಮತ್ತು ಶಾಸಕರು ಪದೇ ಪದೇ ಹಿಂಸೆ ನೀಡಿ ಬೆದರಿಕೆ ಹಾಕಿದ್ದಾರೆ ನನ್ನ ಪತಿಗೆ ವಿಚ್ಛೇದನ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಅವನಿಂದಾಗಿ ನಾನು ಆಕಸ್ಮಿಕವಾಗಿ ಗರ್ಭಿಣಿಯಾದೆ; ಗರ್ಭಪಾತದ ಮೂಲಕ ಸೈಲೆಂಟ್ ಆಗಿ ಕಿತ್ತೆಸೆದೆ: ಬಾಲಿವುಡ್ ನಟಿ
ದಕ್ಷಿಣಕ್ಕೆ ಹೋಲಿಸಿದರೆ ಬಾಲಿವುಡ್‌ನಲ್ಲಿ ಇವು ಸ್ವಲ್ಪ ಹೆಚ್ಚು ಎಂದು ಹೇಳಲೇಬೇಕು. ಬಾಲಿವುಡ್‌ನಲ್ಲಿ ನಟರು ಮತ್ತು ನಟಿಯರ ನಡುವೆ ಸಾಕಷ್ಟು ವದಂತಿಗಳಿವೆ.

ಅವಿವಾಹಿತೆಯರ ಗರ್ಭಪಾತ: ಪುರುಷರಿಗಿಂತ ಮಹಿಳೆಯರಿಂದಲೇ ಹೆಚ್ಚು ಬೆಂಬಲ, ಸಮೀಕ್ಷೆಯಲ್ಲಿ ಬಹಿರಂಗ!
ದೇಶದಲ್ಲಿ ಮೊದಲ ಬಾರಿಗೆ ನಡೆಸಿದ ಈ ಸಮೀಕ್ಷೆಯು, ಹೆಚ್ಚಿನ ಮಹಿಳೆಯರು ಈ ನಿರ್ಧಾರ ತೆಗೆದುಕೊಳ್ಳುವ ವಿಷಯದಲ್ಲಿ ಹೆಣ್ಣುಮಕ್ಕಳನ್ನು ಬೆಂಬಲಿಸಿದರೆ,ತಾವು ಮುಖ್ಯವಾಗಿ ತೀರ್ಮಾನ ತೆಗೆದುಕೊಳ್ಳುವವರು ಎಂದು ಹೇಳಲು ಎರಡೂ ಲಿಂಗಗಳ ಬಹುತೇಕ ಮಂದಿ ಒಪ್ಪುವುದಿಲ್ಲ.

ತೆಲಂಗಾಣ: ಭ್ರೂಣ ಲಿಂಗ ಪತ್ತೆ ಪರೀಕ್ಷೆ, ಗರ್ಭಪಾತದ ನಂತರ ಗರ್ಭಿಣಿ ಸಾವು, ಆರು ಮಂದಿ ಬಂಧನ!
ಸಂತ್ರಸ್ತೆ ಸುಹಾಸಿನಿ, 2019 ರಲ್ಲಿ ರತ್ನಾವತ್ ಹರಿಸಿಂಗ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಮಂಡ್ಯ: ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಹಿಂಭಾಗದಲ್ಲಿಯೇ ಅಕ್ರಮ ಗರ್ಭಪಾತ; ನಾಲ್ವರ ಬಂಧನ
ಮಹಿಳೆಯೊಬ್ಬರಿಗೆ ಗರ್ಭಪಾತ ಮಾಡಿಸಿ ನಾಲ್ವರು ಭಾನುವಾರ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿ ನಡೆದಿದೆ. ವಿಪರ್ಯಾಸವೆಂದರೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಿಂಭಾಗದಲ್ಲಿರುವ ವೈದ್ಯಕೀಯ ಇಲಾಖೆ ಸಿಬ್ಬಂದಿ ವಸತಿ ಗೃಹದಲ್ಲಿಯೇ ಈ ಕೃತ್ಯವನ್ನು ನಡೆಸಲಾಗಿದೆ.

ಗರ್ಭಪಾತ ಮಾಡಿಸಿಕೊಳ್ಳುವಂತೆ ಪ್ರೇಮಿಯಿಂದ ಒತ್ತಾಯ; ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಸಂತ್ರಸ್ತೆ!
ತನ್ನ ಸಂಗಾತಿಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ ಆರೋಪದ ಮೇಲೆ ಪ್ರೇಮಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಈ ಕುರಿತು ಸಂತ್ರಸ್ತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಸಿಎಂ, ಉಪಮುಖ್ಯಮಂತ್ರಿ, ಹಾಸನ ಜಿಲ್ಲಾ ಪೊಲೀಸ್, ಬೆಂಗಳೂರು ಪೊಲೀಸ್ ಕಮಿಷನರ್‌ರನ್ನು ಟ್ಯಾಗ್ ಮಾಡಿದ್ದಾರೆ.

26 ವಾರಗಳ ಗರ್ಭಾವಸ್ಥೆಯಲ್ಲಿರುವ ವಿವಾಹಿತ ಮಹಿಳೆಯ ಗರ್ಭಪಾತಕ್ಕೆ ಅನುಮತಿಸುವುದಿಲ್ಲ: ಸುಪ್ರೀಂ ಕೋರ್ಟ್
26 ವಾರಗಳ ಗರ್ಭಾವಸ್ಥೆಯಲ್ಲಿರುವ ವಿವಾಹಿತ ಮಹಿಳೆಯ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿರುವ ಸುಪ್ರೀಂ ಕೋರ್ಟ್, ಭ್ರೂಣದಲ್ಲಿ ಯಾವುದೇ ಅಸಂಗತತೆ ಕಂಡುಬಂದಿಲ್ಲ ಎಂದು ಹೇಳಿದೆ.

ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತೆಯ ಗರ್ಭಪಾತಕ್ಕೆ ಉತ್ತರಾಖಂಡ ಹೈಕೋರ್ಟ್ ಅನುಮತಿ
13 ವರ್ಷದ ಅತ್ಯಾಚಾರ ಸಂತ್ರಸ್ತೆಯ 25 ವಾರಗಳ ಗರ್ಭವನ್ನು ಅಂತ್ಯಗೊಳಿಸಲು ಉತ್ತರಾಖಂಡ ಹೈಕೋರ್ಟ್ ಅನುಮತಿ ನೀಡಿದೆ.

ತಾಯಿಯಾಗುವ ಆಯ್ಕೆಯಲ್ಲಿ ಮಹಿಳೆ ನಿರ್ಧಾರವೇ ಅಂತಿಮ: 33 ವಾರಗಳ ಗರ್ಭಿಣಿಯ ಗರ್ಭಪಾತಕ್ಕೆ ದೆಹಲಿ ಹೈಕೋರ್ಟ್ ಅಸ್ತು
ಭಾರತದ ಕಾನೂನು ಗರ್ಭಪಾತದ ಹಕ್ಕನ್ನು ಮಹಿಳೆಯರಿಗೆ ನೀಡುತ್ತದೆ. ಮಗುವಿಗೆ ಜನ್ಮ ನೀಡುವುದು, ಇನ್ನೂ ಜನ್ಮ ತಾಳದ ಮಗುವಿನ ಘನತೆಯ ಬದುಕಿನ ಸಾಧ್ಯತೆಯ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಹಕ್ಕು ತಾಯಿಯದ್ದೇ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

