ಬೆಂಗಳೂರು ಮೂಲದ ಜಿಮ್ ನಲ್ಲಿ ವಿರಾಟ್ ಕೊಹ್ಲಿ ಹೂಡಿಕೆ
ಬೆಂಗಳೂರು ಮೂಲದ ಚಿಸೆಲ್ ಫಿಟ್ನೆಸ್ ಸಹ ದೇಶಾದ್ಯಂತ ತನ್ನ ಶಾಖೆಗಳನ್ನು ವಿಸ್ತರಿಸಲಿದ್ದು, ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಶೇ.30 ಬಂಡವಾಳ ಹೂಡಿಕೆ ಮಾಡಿದ್ದಾರೆ.

ಬೆಂಗಳೂರು: ಅಮೆರಿಕ ಮೂಲದ ಸ್ನ್ಯಾಪ್ ಫಿಟ್ನೆಸ್ ಸಂಸ್ಥೆ ತನ್ನ ಕಾರ್ಯಾಚರಣೆಗಳನ್ನು ವಿಸ್ತರಿಸುತ್ತಿರುವ ಬೆನ್ನಲ್ಲೇ ಬೆಂಗಳೂರು ಮೂಲದ ಚಿಸೆಲ್ ಫಿಟ್ನೆಸ್ ಸಹ ದೇಶಾದ್ಯಂತ ತನ್ನ ಶಾಖೆಗಳನ್ನು ವಿಸ್ತರಿಸಲಿದೆ.
ಚಿಸೆಲ್ ಫಿಟ್ನೆಸ್ ಜಿಮ್ ನಲ್ಲಿ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಶೇ.30 ಬಂಡವಾಳ ಹೂಡಿಕೆ ಮಾಡಿದ್ದು 2018 ರ ವೇಳೆಗೆ ದೇಶಾದ್ಯಂತ 100 ಶಾಖೆಗಳನ್ನು ಪ್ರಾರಂಭಿಸುವ ಗುರಿ ಹೊಂದಿದೆ. ಪ್ರತಿಯೊಂದು ಶಾಖೆಯ ಪ್ರಾರಂಭಕ್ಕೂ ಸುಮಾರು 2 ಕೋಟಿ ರೂಪಾಯಿ ಖರ್ಚು ಮಾಡಲು ಚಿಸೆಲ್ ಫಿಟ್ನೆಸ್ ಜಿಮ್ ನಿರ್ಧರಿಸಿದೆ.
ಬೆಂಗಳೂರು, ಆಂಧ್ರಪ್ರದೇಶಗಳಲ್ಲಿ ಈಗಾಗಲೆ ನಮ್ಮ ಫಿಟ್ನೆಸ್ ಕೇಂದ್ರಗಳಿದ್ದು, ಶೀಘ್ರವೇ ದೆಹಲಿ, ಮುಂಬೈ, ಗುವಾಹಟಿ, ಇಂದೋರ್, ಚೆನ್ನೈ ನಲ್ಲಿ ಫಿಟ್ನೆಸ್ ಕೇಂದ್ರಗಳನ್ನು ಪ್ರಾರಂಭ ಮಾಡಲಿದ್ದೇವೆ, ದೇಶದಲ್ಲಿ ಮಾತ್ರವಲ್ಲದೇ ಶ್ರೀಲಂಕಾ, ಯುಎಇ ಗಳಲ್ಲೂ ಫಿಟ್ನೆಸ್ ಕೇಂದ್ರಗಳನ್ನು ಪ್ರಾರಂಭಿಸಲು ಚಿಂತನೆ ನಡೆಸಿದ್ದೇವೆ ಎಂದು ಚಿಸೆಲ್ ಫಿಟ್ನೆಸ್ ನ ಸಹ ಸಂಸ್ಥಾಪಕ ಸತ್ಯ ಸಿನ್ಹ ತಿಳಿಸಿದ್ದಾರೆ.
ಕ್ಯಾಲಿಫೋರ್ನಿಯಾ ಮೂಲದ ಸಂಸ್ಥೆಯೊಂದಿಗೆ ಚಿಸೆಲ್ ಫಿಟ್ನೆಸ್ ಸಂಸ್ಥೆ ಸಹಯೋಗ ಹೊಂದಿದೆ. ಬ್ಯುಸಿನೆಸ್ ಟು ಬ್ಯುಸಿನೆಸ್ ಮಾದರಿಯಲ್ಲಿ ಪ್ರಾರಂಭವಾದ ಚಿಸೆಲ್ ಫಿಟ್ನೆಸ್ ಕಂಪನಿಗಳಲ್ಲಿ ಜಿಮ್ ಪ್ರಾರಂಭಿಸಿತ್ತು. ಈಗ ದೇಶಾದ್ಯಂತ ಸುಮಾರು 195 ಜಿಮ್ ಗಳನ್ನು ಚಿಸೆಲ್ ಫಿಟ್ನೆಸ್ ನಡೆಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


