ಎಚ್ಚರ...ಅಧಿಕ ಬಿಪಿ ಮಾತ್ರೆಗಳಿಂದ ಖಿನ್ನತೆಗೆ ಒಳಗಾಗುವಿರಿ!
ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಹೆಚ್ಚೆಚ್ಚು ಬಿಪಿ ಮಾತ್ರೆಗಳನ್ನು ಸೇವಿಸುವುದರಿಂದ ಖಿನ್ನತೆಗೆ ಒಳಗಾಗಲಿದ್ದಾರೆ ಎಂದು ನೂತನ ವೈದ್ಯಕೀಯ ಸಂಶೋಧನೆಯೊಂದು ಹೇಳಿದೆ.

ಲಂಡನ್: ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಹೆಚ್ಚೆಚ್ಚು ಬಿಪಿ ಮಾತ್ರೆಗಳನ್ನು ಸೇವಿಸುವುದರಿಂದ ಖಿನ್ನತೆಗೆ ಒಳಗಾಗಲಿದ್ದಾರೆ ಎಂದು ನೂತನ ವೈದ್ಯಕೀಯ ಸಂಶೋಧನೆಯೊಂದು ಹೇಳಿದೆ.
ಅಧಿಕ ರಕ್ತದೊತ್ತಡ ನಿವಾರಣೆಗೆ ನಾವು ಸೇವಿಸುವ ಸಾಮಾನ್ಯ ಬಿಪಿ ಮಾತ್ರೆಗಳು ನಮ್ಮನ್ನು ಖಿನ್ನತೆಗೆ ದೂಡುತ್ತವೆ ಎಂದು ನೂತನ ಸಂಶೋಧನೆಯೊಂದು ತಿಳಿಸಿದೆ. ಬಿಪಿ ನಿಯಂತ್ರಣಕ್ಕೆ ಸಾಮಾನ್ಯವಾಗಿ ಸೇವಿಸುವ ನಾಲ್ಕು ಔಷಧಿಗಳು ಮನುಷ್ಯನ ನರಮಂಡಲದ ಮೇಲೆ ಪ್ರಭಾವ ಬೀರಿ ಆತನ ಚಿಂತಾನಶೀಲತೆಯನ್ನೇ ಕುಂದಿಸುತ್ತದೆ. ಆ ಮೂಲಕ ಆತನನ್ನು ಆಲೋಚನಾ ಅಸ್ವಸ್ಥತೆ ಅಥವಾ ಖಿನ್ನತೆಗೆ ದೂಡುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ರಕ್ತದೊತ್ತಡ ನಿವಾರಣೆಗೆ ಸಾಮಾನ್ಯವಾಗಿ ಸೇವಿಸಲಾಗುವ 4 ಬಗೆಯ ಔಷಧಿಗಳು ಮತ್ತು ಅದರಿಂದಾಗುವ ಮನಸ್ಥಿತಿಯ ಬದಲಾವಣೆ ಬಗ್ಗೆ ಅಧ್ಯಯನ ನಡೆಸಲಾಗಿತ್ತು. 5,25,046 ರೋಗಿಗಳ ಮೇಲೆ ಈ ಸಮೀಕ್ಷೆ ನಡೆಸಲಾಗಿದ್ದು, ಬಿಪಿ ಔಷಧ ತೆಗೆದುಕೊಂಡು 90 ದಿನದಲ್ಲಿ 299 ಜನರು ಖಿನ್ನತೆಯಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದರಂತೆ. ಸತತವಾಗಿ 2 ವರ್ಷ ರಕ್ತದೊತ್ತಡ ಔಷಧ ಸೇವಿಸಿದವರಲ್ಲಿ ಖಿನ್ನತೆ ತುಂಬ ಹೆಚ್ಚಾಗಿರುವುದು ಕಂಡು ಬಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಬ್ರಿಟನ್ ನ ಗ್ಲಾಸ್ಕೋ ವಿಶ್ವವಿದ್ಯಾಲಯದ ಪ್ರೊಫೆಸರ್ ಭಾರತ ಮೂಲದ ಸಂತೋಷ್ ಪದ್ಮನಾಭನ್ ಅವರು ಈ ಸಂಶೋಧನೆ ನಡೆಸಿದ್ದು, ರಕ್ತದೊತ್ತಡ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗುವ ಸಾಮಾನ್ಯ ಔಷಧಗಳು ವ್ಯಕ್ತಿಯನ್ನು ಖಿನ್ನತೆಗೆ ದೂಡುತ್ತವೆ ಎಂದು ತಿಳಿಸಿದ್ದಾರೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಈ ವಿಧದ ಔಷಧಿಗಳು ಋಣಾತ್ಮಕ ಪ್ರಭಾವ ಬೀರುವ ಸಾಧ್ಯತೆಗಳಿವೆ ಎಂದು ಅವರು ಎಚ್ಚರಿಸಿದ್ದಾರೆ.
ವೈದ್ಯರು ಔಷಧ ಸೂಚಿಸುವಾಗ ರೋಗಿಯ ಮಾನಸಿಕ ಆರೋಗ್ಯವನ್ನೂ ಪರಿಗಣಿಸಿದ ಬಳಿಕವೇ ಅವರಿಗೆ ಮುಂದಿನ ಚಿಕಿತ್ಸೆ ನೀಡಬೇಕು ಎಂದು ಅವರು ವೈದ್ಯರಿದೆ ಸಲಹೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


