IRCTC vs RailOne: ರೈಲ್ವೆ ಟಿಕೆಟ್ ಬುಕಿಂಗ್‌ಗೆ ಯಾವ ಆ್ಯಪ್ ಬೆಸ್ಟ್?
ಖಚಿತ ರೈಲು ಟಿಕೆಟ್ ಸಿಗುತ್ತಾ ಎಂದು ಒಂದು ಆ್ಯಪ್ ನೋಡುತ್ತೇವೆ. ಮತ್ತೆ ಇನ್ನೊಂದು ಆ್ಯಪ್ ಟ್ರೈ ಮಾಡುತ್ತೇವೆ. ಇಲ್ಲ ಥರ್ಡ್ ಪಾರ್ಟಿ ಆ್ಯಪ್‌ಗಳ ಸಹವಾಸವೇ ಬೇಡ ಎಂದು ನೇರವಾಗಿ ರೈಲ್ವೆ ಇಲಾಖೆಯ IRCTC ವೆಬ್‌ಸೈಟ್ ಇಲ್ಲ RailOne ಆ್ಯಪ್ ತೆರೆಯುತ್ತೇವೆ. ಹಾಗಾದರೆ ಈ ಎರಡರಲ್ಲಿ ಯಾವುದು ನಿಜವಾಗಿಯೂ ಬೆಸ್ಟ್?

RailOne vs IRCTC: ರೈಲು ಟಿಕೆಟ್ ಖರೀದಿಸಬೇಕು ಎಂದರೆ ಸಾಕು ಬಹುತೇಕ ಜನರಿಗೆ ತಲೆನೋವು ಶುರುವಾಗುತ್ತದೆ. ಖಚಿತ ಟಿಕೆಟ್ ಸಿಗುತ್ತಾ ಎಂದು ಒಂದು ಆ್ಯಪ್ ನೋಡುತ್ತೇವೆ. ಮತ್ತೆ ಇನ್ನೊಂದು ಆ್ಯಪ್ ಟ್ರೈ ಮಾಡುತ್ತೇವೆ. ಇಲ್ಲ ಥರ್ಡ್ ಪಾರ್ಟಿ ಆ್ಯಪ್‌ಗಳ ಸಹವಾಸವೇ ಬೇಡ ಎಂದು ನೇರವಾಗಿ ರೈಲ್ವೆ ಇಲಾಖೆಯ IRCTC ವೆಬ್‌ಸೈಟ್ ತೆರೆಯುತ್ತೇವೆ. ಇತ್ತೀಚೆಗೆ ರೈಲ್ವೆ ಇಲಾಖೆಯ ಹೊಸ RailOne ಆ್ಯಪ್ ಕೂಡ ಬಂದಿದೆ. ಹಾಗಾದರೆ ಈ ಎರಡರಲ್ಲಿ ಯಾವುದು ನಿಜವಾಗಿಯೂ ಬೆಸ್ಟ್.? ಇಲ್ಲಿದೆ ಆ ಕುರಿತ ವರದಿ:
IRCTC ಆ್ಯಪ್‌ನ ವಿಶೇಷತೆ ಏನು?
IRCTC Rail Connect ಭಾರತೀಯ ರೈಲ್ವೆಯ ಅಧಿಕೃತ ಬುಕಿಂಗ್ ಪೋರ್ಟಲ್. ಟಿಕೆಟ್ ಬುಕಿಂಗ್ ಕ್ಯಾನ್ಸಲೇಷನ್ ಚಾರ್ಟ್ ವೀವಿಂಗ್ ಪಿಎನ್‌ಆರ್ ಸ್ಟೇಟಸ್ ಎಲ್ಲವೂ ಇಲ್ಲಿ ಸಿಗುತ್ತದೆ. ಲಕ್ಷಾಂತರ ಬಳಕೆದಾರರಿದ್ದಾರೆ. UPI ಕಾರ್ಡ್ ನೆಟ್ ಬ್ಯಾಂಕಿಂಗ್ IRCTC ವಾಲೆಟ್ ಎಲ್ಲಾ ಪೇಮೆಂಟ್ ಆಯ್ಕೆ ಇದೆ. ತತ್ಕಾಲ್ ಬುಕಿಂಗ್ ಮತ್ತು ರಿಫಂಡ್ ಪ್ರಕ್ರಿಯೆಗೂ ಇದು ಹೆಚ್ಚು ಪರಿಚಿತವಾಗಿದೆ. ಆದರೆ ಪೀಕ್ ಟೈಮ್‌ನಲ್ಲಿ ಸರ್ವರ್ ಸ್ಲೋ ಆಗುವುದು ಕೆಲವರ ದೂರು.
RailOne ಆ್ಯಪ್‌ನಲ್ಲಿ ಏನಿದೆ ಹೊಸದು?
RailOne ಅನ್ನು ರೈಲ್ವೆ ಸಚಿವಾಲಯವೇ 2025 ರಲ್ಲಿ ಲಾಂಚ್ ಮಾಡಿದೆ. ಇದು ಒಂದೇ ಆ್ಯಪ್‌ನಲ್ಲಿ ಟಿಕೆಟ್ ಬುಕಿಂಗ್ ಜೊತೆಗೆ ಪಾರ್ಸೆಲ್ ಟ್ರ್ಯಾಕಿಂಗ್ ಪ್ಲಾಟ್‌ಫಾರ್ಮ್ ಮಾಹಿತಿ ರೈಲು ಲೈವ್ ಲೊಕೇಶನ್ ಆಹಾರ ಬುಕಿಂಗ್ ಮತ್ತು ದೂರು ದಾಖಲಿಸುವ ಸೌಲಭ್ಯ ನೀಡುತ್ತದೆ. ಇಂಟರ್‌ಫೇಸ್ ಸರಳವಾಗಿದೆ. ಲಾಗಿನ್ ಮಾಡಲು ಮೊಬೈಲ್ ನಂಬರ್ ಮತ್ತು OTP ಸಾಕು. IRCTC ಯೂಸರ್ ಐಡಿ ಇಲ್ಲದವರಿಗೂ ಸುಲಭ. ಪೇಮೆಂಟ್‌ಗೆ UPI ಕಾರ್ಡ್ ಮತ್ತು ಇತರ ಆಯ್ಕೆಗಳಿವೆ.
ಯಾವುದು ವೇಗ ಮತ್ತು ಸುಲಭ?
ಟಿಕೆಟ್ ಬುಕಿಂಗ್ ವಿಷಯಕ್ಕೆ ಬಂದರೆ ಎರಡೂ ಆ್ಯಪ್‌ಗಳು IRCTC ಸರ್ವರ್‌ಗೆ ಸಂಪರ್ಕಗೊಳ್ಳುತ್ತವೆ. ಹಾಗಾಗಿ ಬುಕಿಂಗ್ ಸ್ಪೀಡ್ ಒಂದೇ ರೀತಿ ಇರುತ್ತದೆ. ಆದರೆ RailOne ಹೆಚ್ಚುವರಿ ಸೇವೆಗಳನ್ನು ಒಂದು ಕಡೆ ಕೊಡುವುದರಿಂದ ಪ್ರಯಾಣಿಕರಿಗೆ ಅನುಕೂಲ. ಉದಾಹರಣೆಗೆ ಸ್ಟೇಷನ್‌ನಲ್ಲಿ ಪ್ಲಾಟ್‌ಫಾರ್ಮ್ ಬದಲಾವಣೆ ಆಹಾರ ಆರ್ಡರ್ ಮತ್ತು ದೂರು ಎಲ್ಲವೂ ಒಂದೇ ಕಡೆ.
ಯಾವುದನ್ನು ಆಯ್ಕೆ ಮಾಡಬೇಕು?
ನೀವು ಕೇವಲ ಟಿಕೆಟ್ ಬುಕ್ ಮಾಡಿ ಮರೆಯುವ ಅಭ್ಯಾಸ ಇದ್ದರೆ IRCTC ಸಾಕು. ಆದರೆ ಪ್ರಯಾಣದ ಸಮಯದಲ್ಲಿ ರೈಲು ಟ್ರ್ಯಾಕಿಂಗ್ ಆಹಾರ ಮತ್ತು ಇತರ ಸೇವೆ ಬೇಕಾದರೆ RailOne ಉತ್ತಮ ಆಯ್ಕೆ. ಎರಡೂ ಆ್ಯಪ್‌ಗಳು ಉಚಿತ ಮತ್ತು ಸರ್ಕಾರಿ ಅಧಿಕೃತವಾಗಿವೆ.
ಒಟ್ಟಾರೆಯಾಗಿ, IRCTC ಹಳೆಯ ಮತ್ತು ವಿಶ್ವಾಸಾರ್ಹ. RailOne ಹೊಸದು ಮತ್ತು ಆಲ್ ಇನ್ ಒನ್. ನಿಮ್ಮ ಅಗತ್ಯಕ್ಕೆ ತಕ್ಕಂತೆ ಯಾವುದಾದರೂ ಒಂದು ಬಳಸಬಹುದು. ಮುಖ್ಯವಾಗಿ ಬುಕಿಂಗ್ ಮಾಡುವ 120 ದಿನ ಮುಂಚಿತವಾಗಿ ಸೀಟ್ ಲಭ್ಯತೆ ಚೆಕ್ ಮಾಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




