ಭಾರೀ ಸದ್ದು ಮಾಡುತ್ತಿದ್ದ 'ರಿಮೂವ್ ಚೀನಾ ಆ್ಯಪ್' ಪ್ಲೇಸ್ಟೋರ್'ನಿಂದ ಔಟ್
ಮೊಬೈಲ್ ನಲ್ಲಿ ಇನ್ ಸ್ಟಾಲ್ ಆಗಿರುವ ಚೀನಾ ಆ್ಯಪ್ ಗಳನ್ನು ಡಿಲೀಟ್ ಮಾಡಲೆಂದೇ ವಿನ್ಯಾಸಗೊಂಡು ಭಾರೀ ಜನಪ್ರಿಯಗಳಿಸಿದ್ದ ರಿಮೂವ್ ಚೀನಾ ಆ್ಯಪ್'ನ್ನು ಗೂಗಲ್ ತನ್ನ ಪ್ಲೇಸ್ಟೋರ್ ನಿಂದ ತೆಗೆದುಹಾಕಿದೆ.

ನವದೆಹಲಿ: ಮೊಬೈಲ್ ನಲ್ಲಿ ಇನ್ ಸ್ಟಾಲ್ ಆಗಿರುವ ಚೀನಾ ಆ್ಯಪ್ ಗಳನ್ನು ಡಿಲೀಟ್ ಮಾಡಲೆಂದೇ ವಿನ್ಯಾಸಗೊಂಡು ಭಾರೀ ಜನಪ್ರಿಯಗಳಿಸಿದ್ದ ರಿಮೂವ್ ಚೀನಾ ಆ್ಯಪ್'ನ್ನು ಗೂಗಲ್ ತನ್ನ ಪ್ಲೇಸ್ಟೋರ್ ನಿಂದ ತೆಗೆದುಹಾಕಿದೆ.
ಬಳಕೆದಾರರನ್ನು ತಪ್ಪುದಾರಿಗೆಳೆಯುವುದು ಹಾಗೂ ಇತರ ಆ್ಯಪ್ ಗಳನ್ನು ನಿಷ್ಕ್ರಿಯಗೊಳಿಸುವಂತೆ ಮಾಡುವುದು ಗೂಗಲ್ ನಿಯಮಗಳಿಗೆ ವಿರುದ್ಧವಾಗಿದ್ದು, ಹಾಗಾಗಿ ಅದನ್ನು ತೆಗೆದು ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜೈಪುರ ಮೂಲಕ ಒನ್ ಟಚ್ ಆ್ಯಪ್ ಅಭಿವೃದ್ಧಿಪಡಿಸಿದ್ದ ರಿಮೂವ್ ಚೀನಾ ಆ್ಯಪ್'ನ್ನು 50 ಲಕ್ಷ ಜನರು ಡೌನ್ ಲೋಡ್ ಮಾಡಿಕೊಂಡಿದ್ದರು. ಟಿಕ್ ಟಾಕ್'ನ ಸ್ವದೇಶಿ ಆವೃತ್ತಿ ಎಂದು ಬಿಂಬಿತವಾಗಿದ್ದ ಮಿತ್ರೋಂ ಆ್ಯಪ್'ನ್ನು ಪ್ಲೇಸ್ಟೋರ್'ನಿಂದ ಗೂಗಲ್ ಈಗಾಗಲೇ ತೆಗೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


