ಆ ದಿನ ವಾಟ್ಸಾಪ್ ನಲ್ಲಿ ಹರಿದಾಡಿದ ಮೆಸೇಜ್ ಗಳ ಸಂಖ್ಯೆ 10,000 ಕೋಟಿ, ಹೊಸ ದಾಖಲೆ!
ಇನ್ ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಮತ್ತೊಂದು ಅಪರೂಪದ ದಾಖಲೆಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ನ್ಯೂಯಾರ್ಕ್: ಇನ್ ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಮತ್ತೊಂದು ಅಪರೂಪದ ದಾಖಲೆಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಹೊಸ ವರ್ಷದ ಶುಭಾಶಯ, ಹಾರೈಕೆಗಳನ್ನು ತಿಳಿಸಲು ವಿಶ್ವದಾದ್ಯಂತ ಜನರು ವಾಟ್ಸಾಪ್ ಬಳಸಿಕೊಂಡಿದ್ದರು. ಹೊಸವರ್ಷದ ಮೊದಲ ದಿನ ಒಟ್ಟು ೧೦,೦೦೦ ಕೋಟಿ ಸಂದೇಶಗಳನ್ನು ರವಾನಿಸಿದ್ದಾರೆ. ಒಂದೇ ದಿನದಲ್ಲಿ ಅತಿ ಹೆಚ್ಚು ಸಂದೇಶಗಳ ವಿನಿಮಯ ಒಂದು ದಾಖಲೆಯಾಗಿದೆ.
ಈ ಪೈಕಿ 2,000 ಕೋಟಿಗೂ ಹೆಚ್ಚು ಸಂದೇಶಗಳನ್ನು ಭಾರತೀಯರರು ರವಾನಿಸಿರುವುದು ವಿಶೇಷ...!
ಹತ್ತು ಸಾವಿರ ಕೋಟಿಗೂ ಹೆಚ್ಚು ವಿನಿಮಯಮಾಡಿಕೊಂಡಿರುವ ಸಂದೇಶಗಳಲ್ಲಿ ೧,೨೦೦ ಕೋಟಿಗೂ ಹೆಚ್ಚು ಚಿತ್ರಗಳಿವೆ. ಹೊಸ ವರ್ಷ ಆರಂಭಗೊಂಡ ಡಿಸೆಂಬರ್ 31ರ ಮಧ್ಯರಾತ್ರಿಯವರೆಗಿನ 24ಗಂಟೆಗಳಲ್ಲಿ 10,000 ಕೋಟಿ (100 ಬಿಲಿಯನ್) ಸಂದೇಶಗಳು ವಿನಿಮಯವಾಗಿವೆ ಎಂದು ವಾಟ್ಸಾಪ್ ಪ್ರಕಟಣೆಯಲ್ಲಿ ತಿಳಿಸಿದೆ.
ಹತ್ತು ವರ್ಷಗಳ ಹಿಂದೆ ಆರಂಭವಾದ ವಾಟ್ಸಾಪ್ ಸೇವೆ ಒಂದೇ ದಿನದಲ್ಲಿ ಹೆಚ್ಚಿನ ಸಂಖ್ಯೆಯ ಸಂದೇಶಗಳನ್ನು ಹಂಚಿಕೊಂಡಿರುವುದು ಇದೇ ಮೊದಲು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


