ಲಾವಾ Z53 ಸ್ಮಾರ್ಟ್ ಫೋನ್ ಬಿಡುಗಡೆ, ಬೆಲೆ ಅತ್ಯಂತ ಕಡಿಮೆ: ಜಿಯೋ ಗ್ರಾಹಕರಿಗೆ ವಿಶೇಷ ಆಫರ್
ಸ್ಮಾರ್ಟ್ ಫೋನ್ ಉತ್ಪಾದಕ ದೇಶಿಯ ಸಂಸ್ಥೆ ಲಾವ ಫೆ.06 ರಂದು ಅಗ್ಗದ ದರದಲ್ಲಿ ಸ್ಮಾರ್ಟ್ ಫೋನ್ ನ್ನು ಬಿಡುಗಡೆ ಮಾಡಿದೆ.

ಸ್ಮಾರ್ಟ್ ಫೋನ್ ಉತ್ಪಾದಕ ದೇಶಿಯ ಸಂಸ್ಥೆ ಲಾವಾ ಫೆ.06 ರಂದು ಅಗ್ಗದ ದರದಲ್ಲಿ ಸ್ಮಾರ್ಟ್ ಫೋನ್ ನ್ನು ಬಿಡುಗಡೆ ಮಾಡಿದೆ.
'ಲಾವಾ Z53' ಬಿಡುಗಡೆ ಮಾಡಿರುವ ಹೊಸ ಸ್ಮಾರ್ಟ್ ಫೋನ್ ಆಗಿದ್ದು, 4,829 ರೂಪಾಯಿಗಳಲ್ಲಿ ಲಭ್ಯವಿದೆ. ಸ್ಮಾರ್ಟ್ ಫೋನ್ ನಲ್ಲಿ ಎಂಟ್ರಿ-ಲೆವೆಲ್ ಹ್ಯಾಂಡ್ ಸೆಟ್ ಇದಾಗಿದ್ದು, ಆಂಡ್ರಾಯ್ಡ್ 9 Pie (Go Edition) ಕಾರ್ಯನಿರ್ವಹಣಾ ವ್ಯವಸ್ಥೆ (ಒ.ಎಸ್) ಯನ್ನು ಹೊಂದಿದೆ. ಕ್ವಾಡ್-ಕೋರ್ ಪ್ರೊಸೆಸರ್, 6.1 ಇಂಚಿನ ಪರದೆ. 8 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮರಾ, 1 ಜಿಬಿ ಆರ್.ಎ.ಎಂ 16 ಜಿಬಿ ವರೆಗಿನ ಆಂತರಿಕ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ.
ರಿಲಾಯನ್ಸ್ ಜಿಯೋ ಬಳಕೆದಾರರಿಗೆ ವಿಶೇಷ ಆಫರ್ ನೀಡಲಾಗಿದ್ದು, ಜಿಯೋ ಬಳಕೆದಾರರು ಈ ಹ್ಯಾಂಡ್ ಸೆಟ್ ನ್ನು ಖರೀದಿಸಿದರೆ 1,200 ರೂಪಾಯಿ ಕ್ಯಾಷ್ ಬ್ಯಾಕ್ ಹಾಗೂ 50 ಜಿಬಿ ಡೇಟಾ ಹೆಚ್ಚುವರಿಯಾಗಿ ಲಭ್ಯವಾಗಲಿದೆ. ಪ್ರಿಸ್ಮ್ ಬ್ಲೂ ಮತ್ತು ಪ್ರಿಸ್ಮ್ ಗುಲಾಬಿ ಬಣ್ಣದಲ್ಲಿ Z53 ಲಭ್ಯವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


