ಬಜೆಟ್ ಸ್ಮಾರ್ಟ್‌ಫೋನ್ ನೋಕಿಯಾ 2.3 ಶೀಘ್ರದಲ್ಲೇ ಭಾರತಕ್ಕೆ!
ನೋಕಿಯಾ 2.3 ಶೀಘ್ರದಲ್ಲೇ ಭಾರತಕ್ಕೆ ಬರಲಿದೆ, ಕಂಪನಿಯು ಟ್ವಿಟರ್‌ನಲ್ಲಿ ಒಂದೆರಡು ವೀಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ನೋಕಿಯಾ ಈ ಮುನ್ಸೂಚನೆ ನೀಡಿದೆ.

ನೋಕಿಯಾ 2.3 ಈ ವಾರದ ಆರಂಭದಲ್ಲಿ ಈಜಿಪ್ಟ್‌ನ ಕೈರೋದಲ್ಲಿ ಬಿಡುಗಡೆಗೊಂಡಿತು. ಈಗ, ಬಜೆಟ್ ನೋಕಿಯಾ ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಭಾರತಕ್ಕೆ ಬರಲಿದೆ, ಕಂಪನಿಯು ಟ್ವಿಟರ್‌ನಲ್ಲಿ ಒಂದೆರಡು ವೀಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ನೋಕಿಯಾ ಈ ಮುನ್ಸೂಚನೆ ನೀಡಿದೆ.
ನೋಕಿಯಾ ತನ್ನ ಟ್ವಿಟ್ಟರ್ ಪ್ರೊಫೈಲ್‌ನಲ್ಲಿ ಮುಂಬರುವ ಫೋನ್‌ನ ಎರಡು ಟೀಸರ್ ಗಳನ್ನು ಹಂಚಿಕೊಂಡಿದೆ. ಮೊದಲ ಟೀಸರ್ ವೀಡಿಯೊ ನೋಕಿಯಾ 2.3 ರ ಬ್ಯಾಟರಿ ಸಾಮರ್ಥ್ಯವನ್ನು ತೋರಿಸುತ್ತದೆ, ಎರಡನೆಯದು ನೋಕಿಯಾ 2.3 ರಲ್ಲಿ ಪೋರ್ಟ್ರೇಟ್ ಮೋಡ್ ಅನ್ನು ಹೈಲೈಟ್ ಮಾಡಿ ತೋರಿಸುತ್ತದೆ.
ಯುರೋಪ್ ನಲ್ಲಿ ನೋಕಿಯಾ 2.3 ಫೋನನ್ನು, 109 ಯುರೋಗಳಿಗೆ (ರೂ. 8,700 ಅಂದಾಜು) ಮಾರಾಟ ಮಾಡಲಾಗುತ್ತಿದೆ.
ವಿಶೇಷಣಗಳ ಪ್ರಕಾರ, ಸಾಧನವು 19:9 ಆ್ಯಸ್ಪೆಕ್ಟ್ ಅನುಪಾತದೊಂದಿಗೆ 6.2-ಇಂಚಿನ ಎಚ್‌ಡಿ + (720x1520 ಪಿಕ್ಸೆಲ್‌ಗಳು) ಇನ್-ಸೆಲ್ ಡಿಸ್ಪ್ಲೇ ಹೊಂದಿದೆ. ಮುಂಭಾಗದಲ್ಲಿ ಟಿಯರ್‌ಡ್ರಾಪ್ ನಾಚ್ ಇದ್ದು, ಇದು ಫೋನ್‌ನ ಎಫ್ / 2.4 ಅಪೆರ್ಚರ್ ಇರುವ 5 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
ಡ್ಯುಯಲ್ ಸಿಮ್ (ನ್ಯಾನೊ) ನೋಕಿಯಾ 2.3 ಫೋನ್ ಮೀಡಿಯಾ ಟೆಕ್ ಹೆಲಿಯೊ ಎ 22 ಎಸ್‌ಒಸಿ ನಿಂದ ಶಕ್ತವಾಗಿದ್ದು, ಇದರೊಂದಿಗೆ 2 ಜಿಬಿ RAM ಮತ್ತು 32 ಜಿಬಿ ಇನ್-ಬಿಲ್ಟ್ ಸ್ಟೋರೇಜ್ ಹೊಂದಿದೆ. ಫೋನ್ ಆಂಡ್ರಾಯ್ಡ್ 9.0 ಪೈ ಸಾಫ್ಟ್‌ವೇರ್ ನಲ್ಲಿ ಕಾರ್ಯನಿರ್ವಹಿಸುತ್ತದೆ.
ಆಪ್ಟಿಕ್ಸ್ ದೃಷ್ಟಿಯಿಂದ, ಸಾಧನವು ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದ್ದು, 2 ಎಂಪಿ ಡೆಪ್ತ್ ಸೆನ್ಸಾರ್ ಇರುವ 13 ಎಂಪಿ ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡಿದ್ದು, 5 ಎಂಪಿ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಇತರ ಪ್ರಮುಖ ವಿಶೇಷಣಗಳಲ್ಲಿ 4,000mAh ಬ್ಯಾಟರಿ, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಸೇರಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


