ಅಡುಗೆ

ಬೆಳಗಾವಿ ಕುಂದಾ | Belagavi kunda recipe in Kannada

ಬೆಳಗಾವಿ ಕುಂದಾ ಉತ್ತರ ಕರ್ನಾಟಕದ ಅತ್ಯಂತ ಪ್ರಸಿದ್ಧ ಮತ್ತು ರುಚಿಕರವಾದ ಸಾಂಪ್ರದಾಯಿಕ ಹಾಲಿನ ಸಿಹಿತಿಂಡಿಯಾಗಿದೆ. ಕೆಲವೇ ಪದಾರ್ಥಗಳನ್ನು ಬಳಸಿ ಮನೆಯಲ್ಲಿಯೇ ಸಾಂಪ್ರದಾಯಿಕ ಬೆಳಗಾವಿ ಕುಂದಾವನ್ನು ಸುಲಭವಾಗಿ ತಯಾರಿಸುವ ವಿಧಾನ ಇಲ್ಲಿದೆ.

ಬೆಳಗಾವಿ ಕುಂದಾ | Belagavi kunda recipe in Kannada
ಬೆಳಗಾವಿ ಕುಂದಾ
Published On :

ಬೆಳಗಾವಿ ಕುಂದಾ ಉತ್ತರ ಕರ್ನಾಟಕದ ಅತ್ಯಂತ ಪ್ರಸಿದ್ಧ ಮತ್ತು ರುಚಿಕರವಾದ ಸಾಂಪ್ರದಾಯಿಕ ಹಾಲಿನ ಸಿಹಿತಿಂಡಿಯಾಗಿದೆ. ಇದು ಕೆನೆಭರಿತ ಹಾಲು, ಖೋವಾ ಮತ್ತು ಸಕ್ಕರೆಯ ಸಮ್ಮಿಶ್ರಣವಾಗಿದ್ದು, ಬಾಯಲ್ಲಿ ಇಟ್ಟರೆ ಕರಗುವ ಮೃದುವಾದ ವಿನ್ಯಾಸವನ್ನು ಹೊಂದಿರುತ್ತದೆ. ಕೆಲವೇ ಪದಾರ್ಥಗಳನ್ನು ಬಳಸಿ ಮನೆಯಲ್ಲಿಯೇ ಸಾಂಪ್ರದಾಯಿಕ ಬೆಳಗಾವಿ ಕುಂದಾವನ್ನು ಸುಲಭವಾಗಿ ತಯಾರಿಸುವ ವಿಧಾನ ಇಲ್ಲಿದೆ.

ಬೇಕಾಗುವ ಪದಾರ್ಥಗಳು...

  • ಹಾಲು – 2 ಲೀಟರ್ (ಕೆನೆಭರಿತ)

  • ಸಕ್ಕರೆ – 2 ಬಟ್ಟಲು (ಸಿಹಿಗೆ ಅಗತ್ಯಕ್ಕನುಗುಣವಾಗಿ)

  • ಮೊಸರು – 2 ಚಮಚ (ಹಾಲು ಒಡೆಯಲು)

  • ಖೋವಾ - ಸ್ವಲ್ಪ

  • ತುಪ್ಪ – ಸ್ವಲ್ಪ

  • ಏಲಕ್ಕಿ ಪುಡಿ – ½ ಚಮಚ

ಮಾಡುವ ವಿಧಾನ...

  • ಒಂದು ಪಾತ್ರೆಯಲ್ಲಿ 500 ಮಿ.ಲೀ. ಹಾಲನ್ನು ಕುದಿಸಿ. ಅದಕ್ಕೆ ಮೊಸರು ಸೇರಿಸಿ ಹಾಲನ್ನು ಸ್ವಲ್ಪ ಒಡೆಯಲು ಬಿಡಿ. ಇದನ್ನ ಪಕ್ಕಕ್ಕೆ ಇಟ್ಟುಕೊಳ್ಳಿ.

  • ಇದೀಗ ದಪ್ಪ ತಳದ ಬಾಣಲೆಗೆ ಉಳಿದ 1½ ಲೀಟರ್ ಹಾಲು ಹಾಕಿ ಮಧ್ಯಮ ಉರಿಯಲ್ಲಿ ಕುದಿಸಿ.

  • ಹಾಲು ಅರ್ಧದಷ್ಟು ಕಡಿಮೆಯಾಗುವವರೆಗೆ ಆಗಾಗ ಕಲಸುತ್ತಾ ಇರಿ. ಈಗ ಮೊದಲೇ ಒಡೆಸಿಟ್ಟ ಹಾಲನ್ನು ಸೇರಿಸಿ ಚೆನ್ನಾಗಿ ಕಲಸಿ.

  • ನಂತರ ಸಕ್ಕರೆ ಹಾಗೂ ಖೋವಾ ಸೇರಿಸಿ ನಿರಂತರವಾಗಿ ಕಲಸುತ್ತಾ ಇರಿ. ಮಿಶ್ರಣವು ಕಂದು (Golden Brown) ಬಣ್ಣಕ್ಕೆ ತಿರುಗಿ, ದಪ್ಪವಾಗಲು ಆರಂಭಿಸಿದಾಗ ತುಪ್ಪ ಸೇರಿಸಿ. ಕೊನೆಯಲ್ಲಿ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಸಿ.

  • ಮಿಶ್ರಣವು ಪಾತ್ರೆಯಿಂದ ಬಿಡಲು ಆರಂಭಿಸಿದಾಗ ಉರಿ ಆರಿಸಿ. ಸ್ವಲ್ಪ ತಣ್ಣಗಾದ ನಂತರ ಸಣ್ಣ ಬಟ್ಟಲು ಅಥವಾ ತಟ್ಟೆಗೆ ಹಾಕಿ ಸಂಪೂರ್ಣ ತಣ್ಣಗಾಗಲು ಬಿಡಿ. ಇದೀಗ ರುಚಿಕರವಾದ ಬೆಳಗಾವಿ ಕುಂದಾ ಸವಿಯಲು ಸಿದ್ಧ.

ಟಿಪ್ಸ್

  • ಕುಂದಾದ ನಿಜವಾದ ರುಚಿ ಬರಬೇಕಾದರೆ ಸಣ್ಣ ಉರಿಯಲ್ಲಿ ತಾಳ್ಮೆಯಿಂದ ಬೇಯಿಸಬೇಕು.

  • ನಿರಂತರವಾಗಿ ಕಲಸುವುದರಿಂದ ಹಾಲು ಪಾತ್ರೆಯ ತಳಕ್ಕೆ ಅಂಟುವುದಿಲ್ಲ.

  • ಸಕ್ಕರೆ ಕರಮೆಲೈಸ್ ಆದಾಗಲೇ ಕುಂದಾಕ್ಕೆ ವಿಶಿಷ್ಟ ಬಣ್ಣ ಮತ್ತು ಪರಿಮಳ ಬರುತ್ತದೆ.

  • ಸಂಪೂರ್ಣ ತಣ್ಣಗಾದ ಬಳಿಕ ಕುಂದಾದ ರುಚಿ ಇನ್ನಷ್ಟು ಹೆಚ್ಚಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.