ಅಡುಗೆ

ಡ್ರ್ಯಾಗನ್ ಚಿಕನ್ | Dragon Chicken recipe in Kannada

ಚೈನೀಸ್ ಮತ್ತು ಇಂಡೋ-ಚೈನೀಸ್ ಖಾದ್ಯಗಳಲ್ಲಿ ವಿಶೇಷ ಜನಪ್ರಿಯತೆ ಪಡೆದಿರುವ ಡ್ರಾಗನ್ ಚಿಕನ್, ಅತ್ಯಂತ ರುಚಿಕರವಾಗಿದ್ದು, ಈ ಖಾದ್ಯ ಆಹಾರಪ್ರಿಯರ ಮನಗೆದ್ದಿದೆ.

ಡ್ರ್ಯಾಗನ್ ಚಿಕನ್ | Dragon Chicken recipe in Kannada
ಡ್ರ್ಯಾಗನ್ ಚಿಕನ್
Published On :

ಚೈನೀಸ್ ಮತ್ತು ಇಂಡೋ-ಚೈನೀಸ್ ಖಾದ್ಯಗಳಲ್ಲಿ ವಿಶೇಷ ಜನಪ್ರಿಯತೆ ಪಡೆದಿರುವ ಡ್ರಾಗನ್ ಚಿಕನ್, ಅತ್ಯಂತ ರುಚಿಕರವಾಗಿದ್ದು, ಈ ಖಾದ್ಯ ಆಹಾರಪ್ರಿಯರ ಮನಗೆದ್ದಿದೆ. ಹೊರಗೆ ಗರಿಗರಿಯಾಗಿ, ಒಳಗೆ ಮೃದುವಾಗಿರುವ ಚಿಕನ್ ತುಂಡುಗಳಿಗೆ ವಿಶೇಷ ಸಾಸ್‌ ಮಿಶ್ರಣ ನೀಡುವ ಅದ್ಭುತ ರುಚಿಯೇ ಈ ಖಾದ್ಯದ ವಿಶೇಷತೆ. ರೆಸ್ಟೋರೆಂಟ್‌ ಶೈಲಿಯ ಡ್ರ್ಯಾಗನ್ ಚಿಕನ್ ಅನ್ನು ಮನೆಯಲ್ಲೇ ಸುಲಭವಾಗಿ ತಯಾರಿಸುವ ವಿಧಾನ ಇಲ್ಲಿದೆ.

ಬೇಕಾಗುವ ಪದಾರ್ಥಗಳು...

  • ಬೋನ್‌ಲೆಸ್ ಚಿಕನ್ – 500 ಗ್ರಾಂ (ಉದ್ದವಾಗಿ ಕತ್ತರಿಸಿದ)

  • ಮೊಟ್ಟೆ – 1

  • ಕಾರ್ನ್‌ಫ್ಲೋರ್ – 3 ಚಮಚ

  • ಮೈದಾ – 2 ಚಮಚ

  • ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ

  • ಖಾರದ ಪುಡಿ – 1 ಚಮಚ

  • ಉಪ್ಪು – ರುಚಿಗೆ ತಕ್ಕಷ್ಟು

  • ಕಾಳುಮೆಣಸು ಪುಡಿ – ½ ಚಮಚ

ಸಾಸ್‌ ಮಾಡಲು ಬೇಕಾಗುವ ಪದಾರ್ಥಗಳು...

  • ಎಣ್ಣೆ – 2 ಚಮಚ

  • ಬೆಳ್ಳುಳ್ಳಿ – 8-10 ಎಸಳು (ಸಣ್ಣದಾಗಿ ಕತ್ತರಿಸಿದ)

  • ಖಾರದ ಮೆಣಸಿನಕಾಯಿ – 4

  • ಈರುಳ್ಳಿ – 1 (ಉದ್ದವಾಗಿ ಕತ್ತರಿಸಿದ್ದು)

  • ಕ್ಯಾಪ್ಸಿಕಂ – 1 (ಉದ್ದವಾಗಿ ಕತ್ತರಿಸಿದ್ದು)

  • ಟೊಮೆಟೊ ಸಾಸ್ – 3 ಚಮಚ

  • ರೆಡ್ ಚಿಲ್ಲಿ ಸಾಸ್ – 2 ಚಮಚ

  • ಸೋಯಾ ಸಾಸ್ – 1 ಚಮಚ

  • ವಿನಿಗರ್ – 1 ಚಮಚ

  • ಜೇನುತುಪ್ಪ ಅಥವಾ ಸಕ್ಕರೆ – 1 ಚಮಚ

  • ಉಪ್ಪು – ಅಗತ್ಯಕ್ಕೆ ತಕ್ಕಷ್ಟು

  • ಕಾಜು – 10 ರಿಂದ 15

  • ಸ್ಪ್ರಿಂಗ್ ಓನಿಯನ್ – ಸ್ವಲ್ಪ (ಅಲಂಕಾರಕ್ಕೆ)

ಮಾಡುವ ವಿಧಾನ...

  • ಚಿಕನ್‌ಗೆ ಮೊಟ್ಟೆ, ಕಾರ್ನ್‌ಫ್ಲೋರ್, ಮೈದಾ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಉಪ್ಪು ಮತ್ತು ಕಾಳುಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

  • ಇದನ್ನು 20-30 ನಿಮಿಷ ಮೆರಿನೇಟ್ ಮಾಡಿ.

  • ಬಳಿಕ ಬಿಸಿ ಎಣ್ಣೆಯಲ್ಲಿ ಚಿಕನ್ ತುಂಡುಗಳನ್ನು ಗೋಲ್ಡನ್ ಬ್ರೌನ್ ಆಗುವವರೆಗೆ ಡೀಪ್ ಫ್ರೈ ಮಾಡಿ.

  • ಮತ್ತೊಂದು ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಗೋಡಂಬಿಯನ್ನು ಹುರಿದು ತೆಗೆದಿಟ್ಟುಕೊಳ್ಳಿ.

  • ಅದೇ ಪ್ಯಾನ್‌ಗೆ ಬೆಳ್ಳುಳ್ಳಿ ಹಾಗೂ ಒಣ ಮೆಣಸಿನಕಾಯಿ ಹಾಕಿ ಹುರಿಯಿರಿ.

  • ನಂತರ ಈರುಳ್ಳಿ ಮತ್ತು ಕ್ಯಾಪ್ಸಿಕಂ ಹಾಕಿ 2 ನಿಮಿಷ ಫ್ರೈ ಮಾಡಿ.

  • ಟೊಮೆಟೊ ಸಾಸ್, ಚಿಲ್ಲಿ ಸಾಸ್, ಸೋಯಾ ಸಾಸ್, ವಿನಿಗರ್ ಮತ್ತು ಜೇನುತುಪ್ಪ ಸೇರಿಸಿ ಚೆನ್ನಾಗಿ ಕಲಸಿ.

  • ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ ಸಾಸ್ ದಪ್ಪವಾಗುವವರೆಗೆ ಬೇಯಿಸಿ.

  • ಈಗ ಫ್ರೈ ಮಾಡಿದ ಚಿಕನ್ ಮತ್ತು ಗೋಡಂಬಿ ಸೇರಿಸಿ ಸಾಸ್‌ಗೆ ಚೆನ್ನಾಗಿ ಕೋಟಿಂಗ್ ಆಗುವಂತೆ ಕಲಸಿ.

  • ಕೊನೆಯಲ್ಲಿ ಸ್ಪ್ರಿಂಗ್ ಓನಿಯನ್ ಹಾಕಿ ಸರ್ವ್ ಮಾಡಿ.

ಸರ್ವಿಂಗ್ ಸಲಹೆ

ಡ್ರಾಗನ್ ಚಿಕನ್ ಅನ್ನು ಫ್ರೈಡ್ ರೈಸ್, ನೂಡಲ್ಸ್ ಅಥವಾ ಸ್ಟಾರ್ಟರ್ ಆಗಿ ಬಿಸಿ ಬಿಸಿಯಾಗಿ ಸರ್ವ್ ಮಾಡಿದರೆ ಅತ್ಯಂತ ರುಚಿಕರವಾಗಿರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.