ಮೆಂತ್ಯೆ ಎಗ್ ಕರ್ರಿ | Methi Egg Curry recipe in Kannada
ಮೆಂತ್ಯೆ ಸೊಪ್ಪಿನ ಪೌಷ್ಟಿಕಾಂಶ ಮತ್ತು ಮೊಟ್ಟೆಯ ಪ್ರೋಟೀನ್‌ಗಳ ಸಂಯೋಜನೆಯಿಂದ ತಯಾರಾಗುವ ಮೆಂತ್ಯೆ ಎಗ್ ಕರ್ರಿ ರುಚಿ ಹಾಗೂ ಆರೋಗ್ಯ ಎರಡನ್ನೂ ಒದಗಿಸುವ ಖಾದ್ಯವಾಗಿದೆ.

ಮೆಂತ್ಯೆ ಸೊಪ್ಪಿನ ಪೌಷ್ಟಿಕಾಂಶ ಮತ್ತು ಮೊಟ್ಟೆಯ ಪ್ರೋಟೀನ್‌ಗಳ ಸಂಯೋಜನೆಯಿಂದ ತಯಾರಾಗುವ ಮೆಂತ್ಯೆ ಎಗ್ ಕರ್ರಿ ರುಚಿ ಹಾಗೂ ಆರೋಗ್ಯ ಎರಡನ್ನೂ ಒದಗಿಸುವ ಖಾದ್ಯವಾಗಿದೆ. ಮೆಂತ್ಯೆ ಸೊಪ್ಪು, ಮಸಾಲೆಗಳ ಸುವಾಸನೆ ಮತ್ತು ಮೊಟ್ಟೆಯ ರುಚಿ ಈ ಕರ್ರಿಯನ್ನು ವಿಶೇಷವಾಗಿಸುತ್ತದೆ. ಚಪಾತಿ, ರೊಟ್ಟಿ, ಜೋಳದ ರೊಟ್ಟಿ ಅಥವಾ ಅನ್ನದೊಂದಿಗೆ ಸವಿಯಲು ಇದು ಅತ್ಯುತ್ತಮ ಆಯ್ಕೆಯಾಗಿದೆ.
ಬೇಕಾಗುವ ಪದಾರ್ಥಗಳು...
ಬೇಯಿಸಿದ ಮೊಟ್ಟೆ – 6
ಮೆಂತ್ಯೆ ಸೊಪ್ಪು – 2 ಬಟ್ಟಲು (ಸ್ವಚ್ಛಗೊಳಿಸಿ ಹೆಚ್ಚಿದ್ದು)
ಈರುಳ್ಳಿ – 2 (ಸಣ್ಣದಾಗಿ ಕತ್ತರಿಸಿದ್ದು)
ಟೊಮೆಟೊ – 2 (ಸಣ್ಣದಾಗಿ ಕತ್ತರಿಸಿದ್ದು)
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಹಸಿಮೆಣಸಿನಕಾಯಿ – 2
ಅರಿಶಿನ ಪುಡಿ – ½ ಚಮಚ
ಖಾರದ ಪುಡಿ – 1 ಚಮಚ
ಧನಿಯಾ ಪುಡಿ – 1 ಚಮಚ
ಗರಂ ಮಸಾಲಾ – ½ ಚಮಚ
ಜೀರಿಗೆ – ½ ಚಮಚ
ಎಣ್ಣೆ – 2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ಮಾಡುವ ವಿಧಾನ...
ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ ಹಾಕಿ ಸಿಡಿಯಲು ಬಿಡಿ. ಈರುಳ್ಳಿ ಸೇರಿಸಿ ಗೋಲ್ಡನ್ ಬಣ್ಣ ಬರುವವರೆಗೆ ಹುರಿಯಿರಿ.
ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿಮೆಣಸಿನಕಾಯಿ ಸೇರಿಸಿ ಹುರಿಯಿರಿ. ಟೊಮೆಟೊ ಸೇರಿಸಿ ಮೃದುವಾಗುವವರೆಗೆ ಬೇಯಿಸಿ.
ಇದೀಗ ಅರಿಶಿನ, ಖಾರದ ಪುಡಿ, ಧನಿಯಾ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
ಮೆಂತೆ ಸೊಪ್ಪು ಹಾಕಿ 5 ನಿಮಿಷ ಬೇಯಿಸಿ. ಒಂದು ಕಪ್ ನೀರು ಸೇರಿಸಿ ಕುದಿಯಲು ಬಿಡಿ.
ಬೇಯಿಸಿದ ಮೊಟ್ಟೆಗಳಿಗೆ ಸಣ್ಣ ಸೀಳು ಹಾಕಿ ಗ್ರೇವಿಗೆ ಸೇರಿಸಿ. 8–10 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ.
ಕೊನೆಯಲ್ಲಿ ಗರಂ ಮಸಾಲಾ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಗ್ಯಾಸ್ ಆರಿಸಿ. ಇದೀಗ ರುಚಿಕರವಾದ ಮೆಂತ್ಯೆ ಎಗ್ ಕರ್ರಿ ಸವಿಯಲು ಸಿದ್ಧ.
ಟಿಪ್ಸ್...
ಮೆಂತೆ ಸೊಪ್ಪಿನ ಕಹಿ ಕಡಿಮೆ ಮಾಡಲು ಸ್ವಲ್ಪ ಉಪ್ಪು ಹಾಕಿ 10 ನಿಮಿಷ ಇಟ್ಟು ನಂತರ ಬಳಸಬಹುದು.
ಗ್ರೇವಿ ದಪ್ಪವಾಗಿರಬೇಕಾದರೆ ಗೋಡಂಬಿ ಅಥವಾ ತೆಂಗಿನಕಾಯಿ ಪೇಸ್ಟ್ ಸೇರಿಸಬಹುದು.
ಖಾರದ ರುಚಿ ಇಷ್ಟವಿದ್ದರೆ ಖಾರದ ಪುಡಿಯ ಪ್ರಮಾಣ ಹೆಚ್ಚಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


