ಅಡುಗೆ

ಹೆಸರುಕಾಳು ದೋಸೆ | Pesarattu dosa recipe in Kannada

ಆರೋಗ್ಯಕರ ಹಾಗೂ ರುಚಿಕರ ಉಪಹಾರಗಳಲ್ಲಿ ಒಂದಾದ ಪೆಸರಟ್ಟು ದೋಸೆ (ಹೆಸರುಕಾಳು ದೋಸೆ) ಆಂಧ್ರ ಪ್ರದೇಶದ ಪ್ರಸಿದ್ಧ ಸಾಂಪ್ರದಾಯಿಕ ತಿನಿಸಾಗಿದೆ. ಹೆಸರುಕಾಳಿನಿಂದ ತಯಾರಿಸುವ ಈ ದೋಸೆಯಲ್ಲಿ ಪ್ರೋಟೀನ್‌ ಸಮೃದ್ಧವಾಗಿದ್ದು, ಬೆಳಗಿನ ಉಪಹಾರಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ.

ಹೆಸರುಕಾಳು ದೋಸೆ | Pesarattu dosa recipe in Kannada
ಹೆಸರುಕಾಳು ದೋಸೆ
Published On :

ಆರೋಗ್ಯಕರ ಹಾಗೂ ರುಚಿಕರ ಉಪಹಾರಗಳಲ್ಲಿ ಒಂದಾದ ಪೆಸರಟ್ಟು ದೋಸೆ (ಹೆಸರುಕಾಳು ದೋಸೆ) ಆಂಧ್ರ ಪ್ರದೇಶದ ಪ್ರಸಿದ್ಧ ಸಾಂಪ್ರದಾಯಿಕ ತಿನಿಸಾಗಿದೆ. ಹೆಸರುಕಾಳಿನಿಂದ ತಯಾರಿಸುವ ಈ ದೋಸೆಯಲ್ಲಿ ಪ್ರೋಟೀನ್‌ ಸಮೃದ್ಧವಾಗಿದ್ದು, ಬೆಳಗಿನ ಉಪಹಾರಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ.

ಹೊರಗೆ ಕ್ರಿಸ್ಪಿ ಹಾಗೂ ಒಳಗೆ ಮೃದುವಾಗಿರುವ ಪೆಸರಟ್ಟು ದೋಸೆಯನ್ನು ಈರುಳ್ಳಿ ಟೊಮೆಟೊ ಅಥವಾ ತೆಂಗಿನಕಾಯಿ ಚಟ್ನಿ ಜೊತೆ ಸವಿದರೆ ಅದರ ರುಚಿ ಮತ್ತಷ್ಟು ಹೆಚ್ಚುತ್ತದೆ. ಮನೆಯಲ್ಲೇ ಸುಲಭವಾಗಿ ರುಚಿಕರ ಪೆಸರಟ್ಟು ದೋಸೆ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಪದಾರ್ಥಗಳು...

  • ಹೆಸರುಕಾಳು– 1 ಬಟ್ಟಲು

  • ಅಕ್ಕಿ – 2 ಚಮಚ

  • ಹಸಿಮೆಣಸಿನಕಾಯಿ – 2

  • ಶುಂಠಿ – 1 ಇಂಚು

  • ಜೀರಿಗೆ – 1 ಚಮಚ

  • ಉಪ್ಪು – ರುಚಿಗೆ ತಕ್ಕಷ್ಟು

  • ಈರುಳ್ಳಿ ಸಣ್ಣದಾಗಿ ಕತ್ತರಿಸಿದ್ದು – 1

  • ಕೊತ್ತಂಬರಿ ಸೊಪ್ಪು – ಸ್ವಲ್ಪ

  • ಎಣ್ಣೆ ಅಥವಾ ತುಪ್ಪ – ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ...

  • ಹೆಸರುಕಾಳು ಮತ್ತು ಅಕ್ಕಿಯನ್ನು ಚೆನ್ನಾಗಿ ತೊಳೆದು 5–6 ಗಂಟೆಗಳ ಕಾಲ ನೆನೆಸಿಡಿ.

  • ನಂತರ ನೀರನ್ನು ಬಸಿದು ಹಸಿಮೆಣಸಿನಕಾಯಿ, ಶುಂಠಿ, ಜೀರಿಗೆ ಹಾಗೂ ಉಪ್ಪು ಸೇರಿಸಿ ಮಿಕ್ಸಿಯಲ್ಲಿ ದೋಸೆ ಹಿಟ್ಟಿನ ರೀತಿ ಗಟ್ಟಿಗೆ ರುಬ್ಬಿಕೊಳ್ಳಿ. ಹಿಟ್ಟು ತುಂಬಾ ತೆಳುವಾಗಿರಬಾರದು.

  • ಒಲೆಯ ಮೇಲೆ ತವಾ ಇಟ್ಟು, ಬಿಸಿ ಮಾಡಿ ಸ್ವಲ್ಪ ಎಣ್ಣೆ ಹಚ್ಚಿ, ಸೌಟ್‌ನಲ್ಲಿ ಹಿಟ್ಟು ತೆಗೆದುಕೊಂಡು ವೃತ್ತಾಕಾರವಾಗಿ ಹರಡಿ.

  • ಮೇಲಿಂದ ಕತ್ತರಿಸಿದ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ.

  • ಸುತ್ತಲೂ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ ಮಧ್ಯಮ ಉರಿಯಲ್ಲಿ ಕೆಂಪಗಾಗುವವರೆಗೆ ಬೇಯಿಸಿ.

  • ಒಂದು ಬದಿ ಚೆನ್ನಾಗಿ ಬೇಯಿದ ಬಳಿಕ ತಿರುಗಿಸಿ ಮತ್ತೊಂದು ಬದಿಯನ್ನೂ ಬೇಯಿಸಿ.

  • ಇದೀಗ ರುಚಿಕರವಾದ ಬಿಸಿ ಬಿಸಿಯಾದ ಹೆಸರುಕಾಳು ದೋಸೆ ಸವಿಯಲು ಸಿದ್ಧ. ಹೆಚ್ಚು ಕ್ರಿಸ್ಪಿಯಾಗಬೇಕಾದರೆ ಸ್ವಲ್ಪ ರವೆ ಸೇರಿಸಬಹುದು.

ಟಿಪ್ಸ್..

  • ಹೆಚ್ಚು ಕ್ರಿಸ್ಪಿಯಾಗಬೇಕಾದರೆ ಸ್ವಲ್ಪ ರವೆ ಸೇರಿಸಬಹುದು.

  • ಹೆಸರುಕಾಳು ದೋಸೆ ಮಾಡುವ ಮುನ್ನ ಹಿಟ್ಟನ್ನು ಹುದುಗಿ ಸುವ ಅವಶ್ಯಕತೆ ಇರುವುದಿಲ್ಲ. ಹಿಟ್ಟ ರೆಡಿ ಮಾಡಿಕೊಂಡ ಬಳಿಕ ನೇರವಾಗಿ ಹಿಟ್ಟನ್ನು ಬಳಸಬಹುದು.

  • ಒಳಗೆ ಉಪ್ಪಿಟ್ಟು ಹಾಕಿಯೂ ಸರ್ವ್ ಮಾಡಬಹುದು.

  • ಈ ಆಹಾರ ಬೆಳಗಿನ ಉಪಹಾರಕ್ಕೆ ಆರೋಗ್ಯಕರ ತಿನಿಸಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.