ಅಡುಗೆ

ಮಾವಿನಕಾಯಿ ಉಪ್ಪಿನಕಾಯಿ | Mango Pickle recipe in Kannada

ಮನೆಯಲ್ಲೇ ಸುಲಭವಾಗಿ, ಸಾಂಪ್ರದಾಯಿಕ ಶೈಲಿಯಲ್ಲಿ ರುಚಿಕರವಾದ ಮಾವಿನಕಾಯಿ ಉಪ್ಪಿನಕಾಯಿ ಮಾಡುವ ವಿಧಾನ...

ಮಾವಿನಕಾಯಿ ಉಪ್ಪಿನಕಾಯಿ | Mango Pickle recipe in Kannada
ಮಾವಿನಕಾಯಿ ಉಪ್ಪಿನಕಾಯಿ
Published On :

ಹಣ್ಣುಗಳ ರಾಜ ಮಾವಿನ ಹಣ್ಣಿನ ಸೀಸನ್ ಆರಂಭವಾಗಿದೆ. ಈ ಸೀಸನ್ ಆರಂಭವಾಗುತ್ತಿದ್ದಂತೆ ಮನೆಮನೆಗಳಲ್ಲಿ ಮಾವಿನಹಣ್ಣಿನ ವಿವಿಧ ಖಾದ್ಯಗಳ ಸುವಾಸನೆ ಹರಡತೊಡಗುತ್ತದೆ. ಸಿಹಿ ರುಚಿಯ ಜೊತೆಗೆ ವಿಶಿಷ್ಟ ಹುಳಿ ಸವಿಯನ್ನು ನೀಡುವ ಹಸಿ ಮಾವಿನಕಾಯಿಯಿಂದ ತಯಾರಿಸುವ ಉಪ್ಪಿನಕಾಯಿ ಊಟದ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಬಿಸಿ ಅನ್ನ, ತುಪ್ಪ ಅಥವಾ ಮೊಸರು ಅನ್ನದ ಜೊತೆ ಸವಿದರೆ ಮಾವಿನಕಾಯಿ ಉಪ್ಪಿನಕಾಯಿಯ ರುಚಿ ಮತ್ತಷ್ಟು ಮನಸೆಳೆಯುತ್ತದೆ. ಮನೆಯಲ್ಲೇ ಸುಲಭವಾಗಿ, ಸಾಂಪ್ರದಾಯಿಕ ಶೈಲಿಯಲ್ಲಿ ರುಚಿಕರವಾದ ಮಾವಿನಕಾಯಿ ಉಪ್ಪಿನಕಾಯಿ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಪದಾರ್ಥಗಳು...

  • ಹಸಿ ಮಾವಿನಕಾಯಿ – 4 ರಿಂದ 5

  • ಉಪ್ಪು – 4 ಟೇಬಲ್ ಚಮಚ

  • ಅಚ್ಚ ಖಾರದ ಪುಡಿ – 5 ಟೇಬಲ್ ಚಮಚ

  • ಸಾಸಿವೆ – 2 ಚಮಚ

  • ಮೆಂತ್ಯ – 1 ಚಮಚ

  • ಅರಿಶಿನ ಪುಡಿ – 1 ಟೀ ಚಮಚ

  • ಎಣ್ಣೆ (ಎಳ್ಳೆಣ್ಣೆ ಉತ್ತಮ) – 1 ಬಟ್ಟಲು

  • ಬೆಳ್ಳುಳ್ಳಿ – 8 ರಿಂದ 10 ಎಸಳು

ಮಾಡುವ ವಿಧಾನ..

  • ಹಸಿ ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು ಸಣ್ಣ ತುಂಡುಗಳಾಗಿ ಕತ್ತರಿಸಿ. ನೀರಿಲ್ಲದಂತೆ ಒಣಗಿಸಿ

  • ಒಂದು ಪಾತ್ರೆಯಲ್ಲಿ ಮಾವಿನ ತುಂಡುಗಳಿಗೆ ಉಪ್ಪು ಮತ್ತು ಅರಿಶಿನ ಹಾಕಿ ಚೆನ್ನಾಗಿ ಕಲಸಿ 5–6 ಗಂಟೆ ಮುಚ್ಚಿಡಿ.

  • ಸಾಸಿವೆ ಮತ್ತು ಮೆಂತ್ಯವನ್ನು ಸ್ವಲ್ಪ ಬೆಚ್ಚಗೆ ಮಾಡಿಕೊಂಡು ಪುಡಿ ಮಾಡಿಕೊಳ್ಳಿ.

  • ನೆನೆಸಿಕೊಂಡ ಮಾವಿನಕಾಯಿ ತುಂಡುಗಳಿಗೆ ಖಾರದ ಪುಡಿ, ಸಾಸಿವೆ-ಮೆಂತ್ಯ ಪುಡಿ ಹಾಗೂ ಬೆಳ್ಳುಳ್ಳಿ ಸೇರಿಸಿ ಕಲಸಿ.

  • ಎಣ್ಣೆಯನ್ನು ಬಿಸಿ ಮಾಡಿ ತಣ್ಣಗಾದ ಬಳಿಕ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

  • ತಯಾರಾದ ಉಪ್ಪಿನಕಾಯಿಯನ್ನು ಗಾಜಿನ ಬಾಟಲಿಯಲ್ಲಿ ತುಂಬಿ 2–3 ದಿನ ಇಟ್ಟರೆ ಇದರ ರುಚಿ ಮತ್ತಷ್ಟು ಹಚ್ಚಾಗುತ್ತದೆ.

  • ಟಿಪ್ಸ್

  • ನೀರಿನ ತೇವಾಂಶ ಇರಬಾರದು; ಇಲ್ಲದಿದ್ದರೆ ಉಪ್ಪಿನಕಾಯಿ ಬೇಗ ಹಾಳಾಗುತ್ತದೆ.

  • ಪ್ರತಿದಿನ ಒಮ್ಮೆಯಾದರೂ ಕಲಸಿದರೆ ರುಚಿ ಉತ್ತಮವಾಗಿರುತ್ತದೆ.

  • ಬಿಸಿ ಅನ್ನ, ಮೊಸರು ಅನ್ನ ಅಥವಾ ಚಪಾತಿಯ ಜೊತೆ ಸವಿಯಲು ಈ ಉಪ್ಪಿನಕಾಯಿ ತುಂಬಾ ರುಚಿಕರವಾಗಿರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.