ಅಡುಗೆ

ನಿಮಿಷಗಳಲ್ಲಿ ಮನೆಯಲ್ಲೇ ಮಾಡಿ ಗರಿಗರಿಯಾದ ಪೊಟ್ಯಾಟೋ ಲಾಲಿಪಾಪ್; ಇಲ್ಲಿದೆ ಸಿಂಪಲ್ ರೆಸಿಪಿ

ಸಂಜೆ ಹೊತ್ತಿಗೆ ಬಿಸಿ ಬಿಸಿಯಾಗಿ ಗರಿ ಗರಿಯಾಗಿ ತಿನ್ನಬೇಕು ಅನಿಸಿದಾಗ ಪೊಟ್ಯಾಟೋ ಲಾಲಿಪಾಪ್ ಸೂಪರ್ ಆಯ್ಕೆ. ಮಾಡೋದು ತುಂಬಾ ಈಸಿ. ಕೇವಲ 15 ನಿಮಿಷದಲ್ಲಿ ರೆಡಿ ಆಗುತ್ತೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುವ ಈ ಸ್ನ್ಯಾಕ್‌ ಟೀ ಜೊತೆ ಸೂಪರ್ ಕಾಂಬೋ.

ನಿಮಿಷಗಳಲ್ಲಿ ಮನೆಯಲ್ಲೇ ಮಾಡಿ ಗರಿಗರಿಯಾದ ಪೊಟ್ಯಾಟೋ ಲಾಲಿಪಾಪ್; ಇಲ್ಲಿದೆ ಸಿಂಪಲ್ ರೆಸಿಪಿ
ಪೊಟ್ಯಾಟೋ ಲಾಲಿಪಾಪ್ — Online Desk
Published On :

Potato Lollipop Recipe: ಸಂಜೆ ಹೊತ್ತಿಗೆ ಬಿಸಿ ಬಿಸಿಯಾಗಿ ಗರಿ ಗರಿಯಾಗಿ ತಿನ್ನಬೇಕು ಅನಿಸಿದಾಗ ಪೊಟ್ಯಾಟೋ ಲಾಲಿಪಾಪ್ (Potato Lollipop) ಸೂಪರ್ ಆಯ್ಕೆ. ಮಾಡೋದು ತುಂಬಾ ಈಸಿ. ಕೇವಲ 15 ನಿಮಿಷದಲ್ಲಿ ರೆಡಿ ಆಗುತ್ತೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುವ ಈ ಸ್ನ್ಯಾಕ್‌ (Snack) ಟೀ ಜೊತೆ ಸೂಪರ್ ಕಾಂಬೋ.

ಬೇಕಾಗುವ ಪದಾರ್ಥಗಳು:

  • ಆಲೂಗಡ್ಡೆ: 3 ದೊಡ್ಡದು - ಬೇಯಿಸಿ ಮ್ಯಾಶ್ ಮಾಡಿದ್ದು

  • ಬ್ರೆಡ್ ಚೂರು: 1/2 ಕಪ್

  • ಕಾರ್ನ್ ಫ್ಲೋರ್: 2 ಚಮಚ

  • ಅಕ್ಕಿ ಹಿಟ್ಟು: 1 ಚಮಚ - ಗರಿ ಗರಿಯಾಗಲು

  • ಶುಂಠಿ ಬೆಳ್ಳುಳ್ಳಿ ಪೇಸ್ಟ್: 1/2 ಚಮಚ

  • ಹಸಿ ಮೆಣಸಿನಕಾಯಿ: 2 - ಸಣ್ಣದಾಗಿ ಹೆಚ್ಚಿದ್ದು

  • ಕೊತ್ತಂಬರಿ ಸೊಪ್ಪು: ಸ್ವಲ್ಪ

  • ಜೀರಾ ಪುಡಿ: 1/2 ಚಮಚ

  • ಗರಂ ಮಸಾಲಾ: 1/4 ಚಮಚ

  • ಉಪ್ಪು: ರುಚಿಗೆ ತಕ್ಕಷ್ಟು

  • ಎಣ್ಣೆ: ಕರಿದುಕೊಳ್ಳಲು

  • ಟೂತ್‍ ಪಿಕ್ ಅಥವಾ ಐಸ್ ಕ್ರೀಮ್ ಕಡ್ಡಿ: 10-12

ಪೊಟ್ಯಾಟೋ ಲಾಲಿಪಾಪ್
ಪೊಟ್ಯಾಟೋ ಲಾಲಿಪಾಪ್ — Online Desk

ಮಾಡುವ ವಿಧಾನ:

1. ಮಿಶ್ರಣ ತಯಾರಿಸಿ

ಒಂದು ಬೌಲ್ ನಲ್ಲಿ ಬೇಯಿಸಿದ ಆಲೂಗಡ್ಡೆ, ಬ್ರೆಡ್ ಚೂರು, ಕಾರ್ನ್ ಫ್ಲೋರ್, ಅಕ್ಕಿ ಹಿಟ್ಟು ಹಾಕಿ. ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಹಸಿ ಮೆಣಸು, ಕೊತ್ತಂಬರಿ, ಜೀರಾ ಪುಡಿ, ಗರಂ ಮಸಾಲಾ ಮತ್ತು ಉಪ್ಪು ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಕಲಸಿ. ತುಂಬಾ ಮೆದು ಆಗಿದ್ದರೆ ಇನ್ನೂ ಸ್ವಲ್ಪ ಕಾರ್ನ್ ಫ್ಲೋರ್ ಹಾಕಿ.

2. ಲಾಲಿಪಾಪ್ ಆಕಾರ ಕೊಡಿ

ಮಿಶ್ರಣದಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ. ಪ್ರತಿ ಉಂಡೆಯ ಮಧ್ಯಕ್ಕೆ ಟೂತ್‍ ಪಿಕ್ ಅಥವಾ ಕಡ್ಡಿ ಚುಚ್ಚಿ. ಲಾಲಿಪಾಪ್ ಆಕಾರ ಕೊಡಿ. 10 ನಿಮಿಷ ಫ್ರಿಜ್ ನಲ್ಲಿ ಇಟ್ಟರೆ ಗಟ್ಟಿಯಾಗಿ ಕರಿದಾಗ ಒಡೆಯುವುದಿಲ್ಲ.

3. ಕರಿದುಕೊಳ್ಳಿ

ಒಂದು ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ. ಮಧ್ಯಮ ಉರಿಯಲ್ಲಿ ಲಾಲಿಪಾಪ್ ಗಳನ್ನು ಹಾಕಿ ಎಲ್ಲಾ ಕಡೆ ಗೋಲ್ಡನ್ ಬ್ರೌನ್ ಮತ್ತು ಗರಿ ಗರಿಯಾಗುವವರೆಗೆ ಕರಿಯಿರಿ. ಟಿಶ್ಯೂ ಪೇಪರ್ ಮೇಲೆ ತೆಗೆದಿಡಿ.

ಸರ್ವ್ ಮಾಡುವುದು ಹೇಗೆ?

ಬಿಸಿ ಬಿಸಿಯಾಗಿರುವ ಪೊಟ್ಯಾಟೋ ಲಾಲಿಪಾಪ್ ಗೆ ಟೊಮೆಟೊ ಕೆಚಪ್ ಅಥವಾ ಹಸಿ ಚಟ್ನಿ ಜೊತೆ ಸರ್ವ್ ಮಾಡಿ. ಮೇಲೆ ಸ್ವಲ್ಪ ಚಾಟ್ ಮಸಾಲಾ ಚಿಮುಕಿಸಿದರೆ ಇನ್ನೂ ಟೇಸ್ಟ್ ಜಾಸ್ತಿ.

ಟಿಪ್:

ಎಕ್ಸ್ಟ್ರಾ ಗರಿ ಬೇಕಾದರೆ ಉಂಡೆಗಳನ್ನು ಕಾರ್ನ್ ಫ್ಲೋರ್ + ನೀರಿನ ದ್ರಾವಣದಲ್ಲಿ ಅದ್ದಿ, ಬ್ರೆಡ್ ಕ್ರಂಬ್ಸ್ ನಲ್ಲಿ ಹೊರಳಿಸಿ ಆಮೇಲೆ ಕರಿಯಿರಿ.

15 ನಿಮಿಷದಲ್ಲಿ ರೆಡಿಯಾಗುವ ಈ ಪೊಟ್ಯಾಟೋ ಲಾಲಿಪಾಪ್ ಸಂಜೆ ಟೀ ಟೈಮ್ ಗೆ ಪರ್ಫೆಕ್ಟ್. ಒಮ್ಮೆ ಟ್ರೈ ಮಾಡಿ ನೋಡಿ ಮಕ್ಕಳು ಮತ್ತೆ ಮತ್ತೆ ಕೇಳ್ತಾರೆ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.