ಅಡುಗೆ

ನೂಡಲ್ಸ್‌ಗಿಂತಲೂ ಟೇಸ್ಟಿ; ಉಳಿದ ಚಪಾತಿಯಿಂದ 10 ನಿಮಿಷದಲ್ಲಿ ಮಾಡಿ ಈ ಸುಲಭ ರೆಸಿಪಿ..!

ಮನೆಯಲ್ಲಿ ಉಳಿದಿರುವ ಚಪಾತಿಯನ್ನು ಏನು ಮಾಡಬೇಕು ಎಂದು ಯೋಚಿಸುತ್ತಿದ್ದೀರಾ? ಅದನ್ನು ಎಸೆಯುವ ಬದಲು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟಪಡುವ ಚಪಾತಿ ನೂಡಲ್ಸ್ ಮಾಡಿ ಸವಿಯಬಹುದು.

ನೂಡಲ್ಸ್‌ಗಿಂತಲೂ ಟೇಸ್ಟಿ; ಉಳಿದ ಚಪಾತಿಯಿಂದ 10 ನಿಮಿಷದಲ್ಲಿ ಮಾಡಿ ಈ ಸುಲಭ ರೆಸಿಪಿ..!
ಚಪಾತಿ ನೂಡಲ್ಸ್
Published On :

ಮನೆಯಲ್ಲಿ ಉಳಿದಿರುವ ಚಪಾತಿಯನ್ನು ಏನು ಮಾಡಬೇಕು ಎಂದು ಯೋಚಿಸುತ್ತಿದ್ದೀರಾ? ಅದನ್ನು ಎಸೆಯುವ ಬದಲು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟಪಡುವ ಚಪಾತಿ ನೂಡಲ್ಸ್ ಮಾಡಿ ಸವಿಯಬಹುದು.

ನೂಡಲ್ಸ್‌ನ ರುಚಿಯನ್ನು ನೀಡುವ ಈ ಸುಲಭ ರೆಸಿಪಿ ಆರೋಗ್ಯಕರವೂ ಆಗಿದ್ದು, ಕೇವಲ 10–15 ನಿಮಿಷಗಳಲ್ಲಿ ತಯಾರಿಸಬಹುದು. ಬೆಳಗಿನ ಉಪಾಹಾರ, ಸಂಜೆ ತಿಂಡಿ ಅಥವಾ ಮಕ್ಕಳ ಟಿಫಿನ್‌ ಬಾಕ್ಸ್‌ಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

ಬೇಕಾಗುವ ಪದಾರ್ಥಗಳು...

  • ಉಳಿದಿರುವ ಚಪಾತಿ – 4

  • ಈರುಳ್ಳಿ – 1 (ಉದ್ದವಾಗಿ ಕತ್ತರಿಸಿದ್ದು)

  • ಕ್ಯಾರೆಟ್ – 1 (ಉದ್ದವಾಗಿ ಕತ್ತರಿಸಿದ್ದು)

  • ಕ್ಯಾಪ್ಸಿಕಂ – 1 (ಉದ್ದವಾಗಿ ಕತ್ತರಿಸಿದ್ದು)

  • ಎಲೆಕೋಸು – 1 ಕಪ್ (ಸಣ್ಣದಾಗಿ ಹೆಚ್ಚಿದ್ದು)

  • ಹಸಿಮೆಣಸಿನಕಾಯಿ – 2 (ಉದ್ದವಾಗಿ ಸೀಳಿದ್ದು)

  • ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ

  • ಟೊಮೇಟೊ ಸಾಸ್ – 2 ಚಮಚ

  • ಸೋಯಾ ಸಾಸ್ – 1 ಚಮಚ

  • ರೆಡ್ ಸಾಸ್ – 1 ಚಮಚ (ಐಚ್ಛಿಕ)

  • ಕಾಳುಮೆಣಸಿನ ಪುಡಿ – ½ ಚಮಚ

  • ಉಪ್ಪು – ರುಚಿಗೆ ತಕ್ಕಷ್ಟು

  • ಎಣ್ಣೆ – 2 ಚಮಚ

  • ಕೊತ್ತಂಬರಿ ಸೊಪ್ಪು – ಸ್ವಲ್ಪ

  • ಸ್ಪ್ರಿಂಗ್ ಆನಿಯನ್ – ಅಲಂಕಾರಕ್ಕೆ (ಐಚ್ಛಿಕ)

ಮಾಡುವ ವಿಧಾನ...

  • ಮೊದಲು ಚಪಾತಿಯನ್ನು ಒಂದರ ಮೇಲೊಂದು ಇಟ್ಟು ರೋಲ್ ಮಾಡಿ, ನೂಡಲ್ಸ್‌ನಂತೆ ಉದ್ದವಾದ ತೆಳುವಾದ ಪಟ್ಟಿಗಳಾಗಿ ಕತ್ತರಿಸಿ.

  • ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಹಸಿಮೆಣಸಿನಕಾಯಿ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಸ್ವಲ್ಪ ಹುರಿಯಿರಿ.

  • ನಂತರ ಈರುಳ್ಳಿ ಸೇರಿಸಿ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ.

  • ಈಗ ಕ್ಯಾರೆಟ್, ಕ್ಯಾಪ್ಸಿಕಂ ಹಾಗೂ ಎಲೆಕೋಸು ಸೇರಿಸಿ ಹೆಚ್ಚಿನ ಉರಿಯಲ್ಲಿ 2–3 ನಿಮಿಷ ಹುರಿಯಿರಿ. ತರಕಾರಿಗಳು ಸ್ವಲ್ಪ ಗರಿಗರಿಯಾಗಿದ್ದರೆ ರುಚಿ ಹೆಚ್ಚಾಗುತ್ತದೆ.

  • ಬಳಿಕ ಟೊಮೇಟೊ ಸಾಸ್, ಸೋಯಾ ಸಾಸ್, ರೆಡ್ ಸಾಸ್, ಕಾಳು ಮೆಣಸಿನ ಪುಡಿ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.

  • ಈಗ ಕತ್ತರಿಸಿದ ಚಪಾತಿ ತುಂಡುಗಳನ್ನು ಸೇರಿಸಿ ಸಾಸ್ ಮತ್ತು ತರಕಾರಿಗಳೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ.

  • ಮಧ್ಯಮ ಉರಿಯಲ್ಲಿ 2–3 ನಿಮಿಷ ಬೇಯಿಸಿ, ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಅಥವಾ ಸ್ಪ್ರಿಂಗ್ ಓನಿಯನ್ ಹಾಕಿ, ಮಿಶ್ರಣ ಮಾಡಿ.

  • ಬಿಸಿ ಬಿಸಿಯಾಗಿ ಟೊಮೇಟೊ ಸಾಸ್ ಜೊತೆಗೆ ಬಡಿಸಿದರೆ ರುಚಿಕರವಾದ ಚಪಾತಿ ನೂಡಲ್ಸ್ ಸವಿಯಲು ಸಿದ್ಧ.

ಟಿಪ್ಸ್...

  • ಹೆಚ್ಚು ಖಾರ ಬೇಕಾದರೆ ಹಸಿಮೆಣಸಿನಕಾಯಿ ಅಥವಾ ಚಿಲ್ಲಿ ಸಾಸ್ ಪ್ರಮಾಣ ಹೆಚ್ಚಿಸಬಹುದು.

  • ಸ್ವೀಟ್ ಕಾರ್ನ್, ಬೀನ್ಸ್, ಅಣಬೆ ಅಥವಾ ಪನೀರ್ ಸೇರಿಸಿದರೆ ಇನ್ನಷ್ಟು ಪೌಷ್ಟಿಕವಾಗುತ್ತದೆ.

  • ಚಪಾತಿ ಸ್ವಲ್ಪ ಒಣಗಿದ್ದರೆ ರೆಸಿಪಿಗೆ ಇನ್ನೂ ಉತ್ತಮವಾಗಿರುತ್ತದೆ.

  • ಮಕ್ಕಳಿಗಾಗಿ ತಯಾರಿಸುವಾಗ ಖಾರದ ಪ್ರಮಾಣವನ್ನು ಕಡಿಮೆ ಇಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.