ಹಲಸಿನ ಬೀಜದ ಹಲ್ವಾ | Jackfruit seed halwa Recipe in Kannada
ರುಚಿಕರವಾದ ಹಲಸಿನ ಬೀಜದ ಹಲ್ವಾ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು...
ಹಲಸಿನ ಬೀಜ – 30
ಬೆಲ್ಲ – 200 ಗ್ರಾಂ
ತುಪ್ಪ- ಸ್ವಲ್ಪ
ದ್ರಾಕ್ಷಿ-ಸ್ವಲ್ಪ
ಗೋಡಂಬಿ- ಸ್ವಲ್ಪ
ಏಲಕ್ಕಿ ಪುಡಿ– ಸ್ವಲ್ಪ
ಮಾಡುವ ವಿಧಾನ...
ಮೊದಲಿಗೆ ಕುಕ್ಕರ್ ನಲ್ಲಿ ಹಲಸಿನ ಬೀಜ ಹಾಗೂ ನೀರು ಹಾಕಿ ಬೇಯಲು ಇಡಿ. 8 ವಿಸಿಲ್ ಕೂಗಿಸಿ. ಬಳಿಕ ಬೆಂದ ಹಲಸಿನ ಬೀಜ ತಣಿದ ಬಳಿಕ ಹೊರಗಿನ ಸಿಪ್ಪೆ ತೆಗೆಯಿರಿ.
ಪಾತ್ರೆಯೊಂದಕ್ಕೆ ಬೆಲ್ಲ ಹಾಗೂ ಸ್ವಲ್ಪ ನೀರು ಹಾಕಿ ಬೆಲ್ಲ ಕರಗಿಸಿ. ಸಿಪ್ಪೆ ತೆಗೆದ ಹಲಸಿನ ಬೀಜ ಹಾಗೂ ಕರಗಿಸಿದ ಬೆಲ್ಲವನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಬಳಿಕ ಒಂದು ಪಾತ್ರೆಗೆ ಅರ್ಧ ಕಪ್ ನಷ್ಟು ತುಪ್ಪ ಹಾಕಿ ರುಬ್ಬಿರುವ ಮಿಶ್ರಣವನ್ನು ಹಾಕಿ, ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಮಧ್ಯಮ ಉರಿಯಲ್ಲಿಟ್ಟು ಬೇಯಿಸಿ. ತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ತಳ ಬಿಡುತ್ತಾ ಬರುವಾಗ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿಯನ್ನು ಸೇರಿಸಿ. ಏಲಕ್ಕಿ ಪುಡಿ ಹಾಕಿ ಮಿಶ್ರಣ ಮಾಡಿ. ಇದೀಗ ರುಚಿಕರವಾದ ಹಲಸಿನ ಬೀಜದ ಹಲ್ವಾ ಸವಿಯಲು ಸಿದ್ಧ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


