ಅಡುಗೆ

ಈರುಳ್ಳಿ ಚೀಸ್ ಪಕೋಡಾ- Onion Cheese Pakora recipe in Kannada

ರುಚಿಕರವಾದ ಈರುಳ್ಳಿ ಚೀಸ್ ಪಕೋಡಾ ಮಾಡುವ ವಿಧಾನ...

ಈರುಳ್ಳಿ ಚೀಸ್ ಪಕೋಡಾ- Onion Cheese Pakora recipe in Kannada
ಈರುಳ್ಳಿ ಚೀಸ್ ಪಕೋಡಾ
Published On :

ಬೇಕಾಗುವ ಪದಾರ್ಥಗಳು..

  • ಕಡಲೆಹಿಟ್ಟು- 100 ಗ್ರಾಂ

  • ಅಕ್ಕಿಹಿಟ್ಟು- 40 ಗ್ರಾಂ

  • ಈರುಳ್ಳಿ- 2 ದೊಡ್ಡದು (ತೆಳ್ಳಗೆ ಹೆಚ್ಚಿಟ್ಟುಕೊಳ್ಳಿ)

  • ದನಿಯಾ ಪುಡಿ- ಅರ್ಧಚಮಚ

  • ಜೀರಿಗೆ- ಅರ್ಧ ಚಮಚ

  • ಖಾರದಪುಡಿ- 1 ಚಮಚ

  • ಅರಿಶಿನ- ಸ್ವಲ್ಪ

  • ಕಾಳು ಮೆಣಸಿನಪುಡಿ- ಅರ್ಧ ಚಮಚ

  • ಉಪ್ಪು- ರುಚಿಗೆ ತಕ್ಕಷ್ಟು

  • ಕರಿಬೇವು- ಸ್ವಲ್ಪ

  • ಹಸಿಮೆಣಸಿನ ಕಾಯಿ- 4 (ಸಣ್ಣಗೆ ಹೆಚ್ಚಿಟ್ಟುಕೊಳ್ಳಿ)

  • ಚೀಸ್- 200 ಗ್ರಾಂ

  • ಎಣ್ಣೆ- ಕರಿಯಲು

ಮಾಡುವ ವಿಧಾನ...

  • ಮೊದಲು ಚೀಸ್ ಸ್ವಲ್ಪ ತುರಿದುಕೊಳ್ಳಿ, ಹಾಗೇ 10 ಪೀಸ್ ಹದಗಾತ್ರದಲ್ಲಿ ಕತ್ತರಿಸಿಕೊಳ್ಳಿ. ಒಂದು ಬೌಲ್ ಗೆ ಕಡಲೆಹಿಟ್ಟು, ಅಕ್ಕಿ ಹಿಟ್ಟು, ಖಾರದಪುಡಿ, ಅರಿಶಿನ, ಜೀರಿಗೆ, ದನಿಯಾ ಪುಡಿ, ಕರಿಬೇವು, ಕಾಳುಮೆಣಸಿನ ಪುಡಿ, ಉಪ್ಪು, ತುರಿದ ಚೀಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

  • ನಂತರ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಮಿಶ್ರಣ ಉಂಡೆಗಳನ್ನಾಗಿ ಮಾಡಿ, ಮಧ್ಯೆ ಚೀಸ್ ಪೀಸ್ ಗಳನ್ನು ಇಟ್ಟು ಮತ್ತೆ ಉಂಡೆ ಮಾಡಿ, ಕಾದ ಬಿಸಿ ಎಣ್ಣೆಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಕರಿಯಿಸಿ. ಇದೀಗ ರುಚಿಕರವಾದ ಈರುಳ್ಳಿ ಚೀಸ್ ಪಕೋಡಾ ಸವಿಯಲು ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.