ಮೆಂತ್ಯೆ ಗೊಜ್ಜು- Sprouted Fenugreek Gojju Recipe in Kannada
ರುಚಿಕರ ಹಾಗೂ ಆರೋಗ್ಯಕವಾದ ಮೆಂತ್ಯೆ ಗೊಜ್ಜು ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು...
ಎಳ್ಳು- 2 ಚಮಚ
ಜೀರಿಗೆ- 1 ಚಮಚ
ಒಣ ಕೊಬ್ಬರಿ - ಕಾಲು ಬಟ್ಟಲು
ಒಣಮೆಣಸು- 5-6
ದನಿಯಾ- 1 ಚಮಚ
ಸಾಸಿವೆ- ಸ್ವಲ್ಪ
ಇಂಗು- ಸ್ವಲ್ಪ
ಕರಿಬೇವು-ಸ್ವಲ್ಪ
ಈರುಳ್ಳಿ- 1
ಅರಿಶಿನ- ಸ್ವಲ್ಪ
ಉಪ್ಪು-ರುಚಿಗೆ ತಕ್ಕಷ್ಟು
ಮೊಳಕೆ ಬರಿಸಿದ ಮೆಂತ್ಯೆ ಕಾಳು- 1 ಬಟ್ಟಲು
ಹುಣಸೆ ಹಣ್ಣಿನ ರಸ-ಸ್ವಲ್ಪ
ಬೆಲ್ಲ-ಸ್ವಲ್ಪ
ಮಾಡುವ ವಿಧಾನ...
ಒಣ ಬಾಣಲಿಗೆ ಎಳ್ಳು, ಜೀರಿಗೆ, ಕಾಲು ಬಟ್ಟಲು ಒಣ ಕೊಬ್ಬರಿ, ಒಣಮೆಣಸು, ದನಿಯಾವನ್ನು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ಇದು ತಣ್ಣಗಾದ ಮೇಲೆ ಎಲ್ಲವನ್ನೂ ಹಾಕಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು.
ನಂತರ ಬಾಣಲಿಗೆ 2 ಚಮಚ ಎಣ್ಣೆ ಹಾಕಿಕೊಂಡು ಅದಕ್ಕೆ ಮೊಳಕೆ ಬರಿಸಿದ ಮೆಂತ್ಯೆ ಕಾಳನ್ನು ಹಾಕಿ ಸಾಧಾರಣ ಉರಿಯಲ್ಲಿ ಸ್ವಲ್ಪ ಹೊತ್ತು ಹುರಿದುಕೊಂಡು ಅದನ್ನು ಒಂದು ಬಟ್ಟಲಿನಲ್ಲಿ ತೆಗೆದಿಟ್ಟುಕೊಳ್ಳಿ.
ನಂತರ ಅದೇ ಬಾಣಲಿಗೆ 2–3 ಚಮಚ ಎಣ್ಣೆಗೆ ಸಾಸಿವೆ, ಜೀರಿಗೆ, ಸ್ವಲ್ಪ ಇಂಗು, ಕರಿಬೇವು ಹಾಕಿ. ನಂತರ ಇದಕ್ಕೆ ಸಣ್ಣ ಕತ್ತರಿಸಿದ 1 ಈರುಳ್ಳಿ ಹಾಕು ಅರಿಶಿನ ಹಾಕಿ ಸ್ವಲ್ಪ ಹುರಿದುಕೊಂಡು ಅದಕ್ಕೆ ಹುರಿದಿಟ್ಟುಕೊಂಡಿದ್ದ ಮೆಂತ್ಯೆ ಕಾಳನ್ನು ಹಾಕಿ,
ಉಪ್ಪು, 2 ಚಮಚದಷ್ಟು ಬೆಲ್ಲ, ನಿಂಬೆಹಣ್ಣಿನಗಾತ್ರದ ಹುಣಸೆಹಣ್ಣಿನ ರಸ ಬೆರೆಸಿ ಸ್ವಲ್ವ ಹುರಿದುಕೊಂಡ ನಂತರ 1 ಕಪ್ ನೀರು ಬೆರೆಸಿ ಕಾಳು ಮೆತ್ತಗೆ ಬೇಯಿಸಿಕೊಳ್ಳಿ. ನಂತರ ಇದಕ್ಕೆ ಮಿಕ್ಸಿ ಮಾಡಿಟ್ಟುಕೊಂಡ ಮಸಾಲವನ್ನು ಬೆರೆಸಿ, ಅಗತ್ಯಕ್ಕೆ ತಕ್ಕಷ್ಟು ನೀರು ಬೆರೆಸಿ ಚೆನ್ನಾಗಿ ಕುದಿಸಿದರೆ ಗೊಜ್ಜು ಸಿದ್ಧ. ಈ ಗೊಜ್ಜನ್ನು ಮುದ್ದೆ, ಚಪಾತಿ, ರೊಟ್ಟಿ, ಅನ್ನದೊಂದಿಗೆ ಸವಿಯಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


