ಮೆಂತ್ಯ ರೈಸ್
ರುಚಿಕರವಾದ ಮೆಂತ್ಯ ರೈಸ್ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು...
ಹಸಿಮೆಣಸಿನ ಕಾಯಿ- 8-10
ಶುಂಠಿ, ಬೆಳ್ಳುಳ್ಳಿ-ಸ್ವಲ್ಪ
ಪುದೀನಾ- ಸ್ವಲ್ಪ
ಗಸಗಸೆ-ಸ್ವಲ್ಪ
ಕೊತ್ತಂಬರಿ ಸೊಪ್ಪು- ಸ್ವಲ್ಪ
ತೆಂಗಿನ ತುರಿ- 4-6 ಚಮಚ
ಗೋಂಡಬಿ- 8-10
ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 2
ಕರಿಬೇವು-ಸ್ವಲ್ಪ
ಪಲಾವ್ ಎಲೆ- ಸ್ವಲ್ಪ
ಪಲಾವ್ ಸಾಮಾಗ್ರಿ- ಸ್ವಲ್ಪ
ಬಟಾಣಿ- ಅರ್ಧ ಬಟ್ಟಲು
ಗರಂ ಮಸಾಲಾ ಪುಡಿ- 1 ಚಮಚ
ಅರಿಶಿಣದ ಪುಡಿ- ಸ್ವಲ್ಪ
ಉಪ್ಪು- ರುಚಿಗೆ ತಕ್ಕಷ್ಟು
ಅಕ್ಕಿ- ಒಂದೂವರೆ ಬಟ್ಟಲು
ಮೆಂತ್ಯೆ ಸೊಪ್ಪು- 1 ಬಟ್ಟಲು
ಟೊಮೆಟೋ- ಸಣ್ಣಗೆ ಹೆಚ್ಚಿದ್ದು 3
ದನಿಯಾ ಪುಡಿ- ಒಂದು ಚಮಚ
ತುಪ್ಪ -ಸ್ವಲ್ಪ
ನಿಂಬೆ ರಸ- ಒಂದು ಚಮಚ
ಮಾಡುವ ವಿಧಾನ...
ಮೊದಲಿಗೆ ಮಿಕ್ಸಿ ಜಾರ್'ಗೆ ಹಸಿಮೆಣಸಿನ ಕಾಯಿ. ಶುಂಠಿ, ಬೆಳ್ಳುಳ್ಳಿ, ಪುದೀನಾ, ಗಸಗಸೆ, ಕೊತ್ತಂಬರಿ ಸೊಪ್ಪು, ತೆಂಗಿನ ತುರಿ, ಗೋಂಡಬಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಒಲೆಯ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಸ್ವಲ್ಪ ತುಪ್ಪ ಹಾಗೂ ಎಣ್ಣೆಯನ್ನು ಹಾಕಿ. ಕಾದ ನಂತರ ಪಲಾವ್ ಎಲೆ ಹಾಗೂ ಪಲಾವ್ ಸಾಮಾಗ್ರಿಗಳನ್ನು ಹಾಕಿ. ನಂತರ ಈರುಳ್ಳಿಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ.
ನಂತರ ಬಟಾಣಿ, ಗರಂ ಮಸಾಲಾ ಪುಡಿ. ಅರಿಶಿಣದ ಪುಡಿ ಹಾಗೂ ರುಬ್ಬಿಕೊಂಡ ಮಸಾಲೆಯನ್ನು ಹಾಕಿ ಚೆನ್ನಾಕಿ ಮಿಶ್ರಣ ಮಾಡಿ. ಇದೀಗ ಮೆಂತ್ಯೆ ಸೊಪ್ಪು, ಟೊಮೆಟೋ, ದನಿಯಾ ಪುಡಿ ಹಾಕಿ ಟೊಮೆಟೋ ಮೆತ್ತಗಾಗುವವರೆಗೆ ಕೈಯಾಡಿಸುತ್ತಿರಿ.
ನಂತರ ರುಚಿಗೆ ತಕ್ಕಷ್ಟು ಉಪ್ಪು, ಅಕ್ಕಿ ಹಾಗೂ ಅಳತೆ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ತುಪ್ಪ ಹಾಗೂ ನಿಂಬೆ ರಸವನ್ನು ಸೇರಿಸಿ ಮುಚ್ಚಳ ಮುಚ್ಚಿ, 2 ಕೂಗು ಕೂಗಿಸಿದರೆ ರುಚಿಕರವಾದ ಮೆಂತ್ಯೆ ರೈಸ್ ಸವಿಯಲು ಸಿದ್ಧ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


