ಮಟನ್ ಪಲಾವ್
ರುಚಿಕರವಾದ ಮಟನ್ ಪಲಾವ್ ಮಾಡುವ ವಿಧಾನ...

Published On :
ಬೇಕಾಗುವ ಪದಾರ್ಥಗಳು...
- ಮಟನ್- ಅರ್ಧ ಕೆಜಿ
- ಈರುಳ್ಳಿ- 3-4
- ಬೆಳ್ಳುಳ್ಳಿ- ಸ್ವಲ್ಪ
- ಏಲಕ್ಕಿ- 2
- ಚಕ್ಕೆ- ಸ್ವಲ್ಪ
- ಲವಂಗ-ಸ್ವಲ್ಪ
- ಪಲಾವ್ ಎಲೆ- ಸ್ವಲ್ಪ
- ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಸ್ವಲ್ಪ
- ಜೀರಿಗೆ ಪುಡಿ- ಅರ್ಧ ಚಮಚ
- ಅಚ್ಛ ಖಾರದ ಪುಡಿ- 1 ಚಮಚ
- ದನಿಯಾ ಪುಡಿ - 1 ಚಮಚ
- ಮೆಣಸಿನ ಕಾಯಿ-2-3
- ಟೊಮೆಟೋ- ಸಣ್ಣಗೆ ಹೆಚ್ಚಿದ್ದು 1/4 ಬಟ್ಟಲು
- ಮೊಸರು- ಅರ್ಧ ಬಟ್ಟಲು
- ಪುದೀನಾ- ಸ್ವಲ್ಪ
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ನೀರು- 2 ಬಟ್ಟಲು
- ಗರಂ ಮಸಾಲಾ ಪುಡಿ - ಕಾಲು ಚಮಚ
- ಬಾಸುಮತಿ ಅಕ್ಕಿ-1 ಬಟ್ಟಲು
- ಉಪ್ಪು- ರುಚಿಗೆ ತಕ್ಕಷ್ಟು
- ಎಣ್ಣೆ- ಅಗತ್ಯಕ್ಕನುಗುಣವಾಗಿ
ಮಾಡುವ ವಿಧಾನ...
- ಮೊದಲು ಕುಕ್ಕರ್ ಒಲೆಯ ಮೇಲಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಗೂ ಈರುಳ್ಳಿ ಹಾಕಿ ಚೆನ್ನಾಗಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ಇದಕ್ಕೆ ಮಟನ್ ಪೀಸ್, ಉಪ್ಪು, ನೀರು ಹಾಕಿ ಚೆನ್ನಾಗಿ 3-4 ವಿಷಲ್ ಕೂಗಿಸಿಕೊಳ್ಳಬೇಕು. ಬಳಿಕ ಕುಕ್ಕರ್ ಮುಚ್ಚಳವನ್ನು ತೆಗೆದು ನೀರನ್ನು ಬಸಿದಿಟ್ಟುಕೊಳ್ಳಬೇಕು.
- ಮತ್ತೆ ಕುಕ್ಕರ್ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿಯನ್ನು ಕೆಂಪಗೆ ಹುರಿದುಕೊಳ್ಳಬೇಕು. ಬಳಿಕ ಏಲಕ್ಕಿ, ಚಕ್ಕೆ, ಲವಂಗ, ಪಲಾವ್ ಎಲೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ, ಅಚ್ಛ ಖಾರದ ಪುಡಿ, ದನಿಯಾ ಪುಡಿತ, ಮೆಣಸಿನ ಕಾಯಿ, ಟೊಮೆಟೋ ಎಲ್ಲವನ್ನೂ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ನಂತರ ಮೊಸರು, ಪುದೀನಾ, ಕೊತ್ತಂಬರಿ ಸೊಪ್ಪು ಹಾಗೂ ಈಗಾಗಲೇ ಬಸಿದಿಟ್ಟುಕೊಂಡಿದ್ದ ಮಟನ್ ನೀರು ಸೇರಿ ಒಟ್ಟು 2 ಬಟ್ಟಲು ನೀರನ್ನು ಹಾಕಬೇಕು. ನಂತರ ತೊಳೆದ ಅಕ್ಕಿ, ಗರಂ ಮಸಾಲಾ ಪುಡಿ, ಉಪ್ಪು ಹಾಗಿ 2-3 ಕೂಗು ಕೂಗಿಸಿದರೆ, ರುಚಿಕರವಾದ ಮಟನ್ ಪಲಾವ್ ಸವಿಯಲು ಸಿದ್ಧ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


