ಅಡುಗೆ

ಕೀಮಾ ವಡೆ

ಕೀಮಾ ವಡೆ ಮಾಡುವ ವಿಧಾನ...

ಕೀಮಾ ವಡೆ
ಕೀಮಾ ವಡೆ
Published On :

ಬೇಕಾಗುವ ಪದಾರ್ಥಗಳು

  • ಕೀಮಾ (ತುಂಡಾಗಿ ಕತ್ತರಿಸಿದ ಮಾಂಸ) - ಅರ್ಧ ಕೆಜಿ
  • ಕೊಬ್ಬರಿ - ಅರ್ಧ ಹೋಳು
  • ಚಕ್ಕೆ - ಸ್ವಲ್ಪ
  • ಲವಂಗ - ಸ್ವಲ್ಪ
  • ಕಾಳು ಮೆಣಸು - ಸ್ವಲ್ಪ
  • ಏಲಕ್ಕಿ - 1
  • ಗಸಗಸೆ - ಸ್ವಲ್ಪ
  • ದನಿಯಾ ಪುಡಿ - ಅರ್ಧ ಚಮಚ
  • ಶುಂಠಿ - ಸ್ವಲ್ಪ
  • ಅಚ್ಚ ಖಾರದ ಪುಡಿ - 1 ಚಮಚ
  • ಕೊತ್ತಂಬರಿ ಸೊಪ್ಪು - ಸ್ವಲ್ಪ
  • ಬೆಳ್ಳುಳ್ಳಿ- 10-15 ಎಸಳು
  • ಮೊಟ್ಟೆ - 2 ಎರಡು
  • ಉಪ್ಪು - ರುಚಿಗೆ ತಕ್ಕಷ್ಟು
  • ಹುರಿಗಡಲೆ - ಸ್ವಲ್ಪ
  • ಎಣ್ಣೆ - ಅಗತ್ಯವಿದ್ದಷ್ಟು
ಮಾಡುವ ವಿಧಾನ....
  • ಮೊದಲು ಮಿಕ್ಸಿ ಜಾರ್ ತೆಗೆದುಕೊಂಡು ಹುರಿಗಡಲೆಯನ್ನು ಹಾಕಿ ಪುಡಿ ಮಾಡಿಕೊಳ್ಳಬೇಕು. ಪುಡಿಯನ್ನು ಪಾತ್ರೆಯೊಂದಕ್ಕೆ ಹಾಕಿಟ್ಟುಕೊಳ್ಳಬೇಕು.
  • ಇದೇ ಜಾರ್ ಗೆ ಕೊಬ್ಬರಿ, ಬೆಳ್ಳುಳ್ಳು ಎಸಳು, ಚಕ್ಕೆ ಲವಂಗ, ಗಸಗಸೆ, ಕಾಳು ಮೆಣಸು, ಶುಂಠಿ, ಕೊತ್ತಂಬರಿ ಸೊಪ್ಪು, ಖಾರದ ಪುಡಿ, ದನಿಯಾ ಪುಡಿ ಹಾಕಿ ನೀರು ಹಾಕದೆ ರುಬ್ಬಿಕೊಳ್ಳಬೇಕು. ರುಬ್ಬಿಕೊಳ್ಳುವಾಗ ಮೊಟ್ಟೆಯನ್ನು ಹಾಕಿ ರುಬ್ಬಿ ಕೊಳ್ಳಬೇಕು.
  • ನಂತರ ಜಾರ್ ನಲ್ಲಿ ಕೀಮಾವನ್ನು ಹಾಕಿ 1-2 ಸುತ್ತು ಸ್ವಲ್ಪ ರುಬ್ಬಿಕೊಳ್ಳಬೇಕು.
  • ರುಬ್ಬಿಕೊಂಡ ಮಸಾಲೆ, ಕೀಮಾ, ಉಪ್ಪು ಹಾಗೂ ಹುರಿಗಡಲೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
  • ಒಲೆಯ ಮೇಲೆ ಬಾಣಲೆಯಿಟ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಬೇಕು. ನಂತರ ಕೀಮಾ ಮಸಾಲೆಯನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ತಟ್ಟಿ ಎಣ್ಣೆಗೆ ಹಾಕಿ ಕೆಂಪಗಾಗುವವರೆಗೆ ಖರಿದರೆ ರುಚಿಕರ ಕೀಮಾ ವಡೆ ಸವಿಯಲು ಸಿದ್ಧವಾಗುತ್ತದೆ.
ವಿಶೇಷ ಸೂಚನೆ:

-ಮಂಜುಳ.ವಿ.ಎನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.