ಅಡುಗೆ

ಖೀಮಾ ಪರೋಟ

ಖೀಮಾ ಪರೋಟ ಮಾಡುವ ವಿಧಾನ...

ಖೀಮಾ ಪರೋಟ
ಖೀಮಾ ಪರೋಟ
Published On :

ಬೇಕಾಗುವ ಪದಾರ್ಥಗಳು

  • ಮಟನ್ ಖೀಮಾ - ಅರ್ಥ ಕೆಜಿ
  • ಮೊಸರು -ಅರ್ಧ ಬಟ್ಟಲು
  • ಈರುಳ್ಳಿ - 2
  • ಶುಂಠಿ - ಸ್ವಲ್ಪ
  • ಬೆಳ್ಳುಳ್ಳಿ - ಸ್ವಲ್ಪ
  • ಹಸಿ ಮೆಣಸಿನ ಕಾಯಿ - 4
  • ಅರಿಶಿಣದ ಪುಡಿ- ಸ್ವಲ್ಪ
  • ಖಾರದ ಪುಡಿ - ಅರ್ಥ ಚಮಚ
  • ಉಪ್ಪು - ರುಚಿಗೆ ತಕ್ಕಷ್ಟು
  • ಜೀರಿಗೆ ಪುಡಿ - ಸ್ವಲ್ಪ
  • ಗರಂ ಸಮಾಲ - ಅರ್ಥ ಚಮಚ
  • ನೀರು - ಒಂದು ಬಟ್ಟಲು
  • ಎಣ್ಣೆ - ಸ್ವಲ್ಪ
ಪರೋಟ ಮಾಡಲು ಬೇಕಾದ ಪದಾರ್ಥ
  • ಮೈದಾ ಹಿಟ್ಟು - 2 ಬಟ್ಟಲು
  • ಉಪ್ಪು - ರುಚಿಗೆ ತಕ್ಕಷ್ಟು
  • ಬಿಸಿನೀರು - ಸ್ವಲ್ಪ
  • ಎಣ್ಣೆ - 1 ಚಮಚ
ಮಾಡುವ ವಿಧಾನ...
  • ಮಟನ್ ಖೀಮಾವನ್ನು ಚೆನ್ನಾಗಿ ತೊಳೆದು ಒಂದು ಪಾತ್ರೆಗೆ ಹಾಕಿ. ನಂತರ ಇದಕ್ಕೆ ಮೊಸರು, ಅರಿಶಿಣದ ಪುಡಿ, ಖಾರದ ಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನೆನೆಯಲು ಬಿಡಿ.
  • 15-20 ನಿಮಿಷವಾದ ಬಳಿಕ ಪಾತ್ರೆಯನ್ನು ಒಲೆಯ ಮೇಲಿಟ್ಟು. ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಕಾದ ನಂತರ ಈರುಳ್ಳಿ ಹಾಕಿ ಕಂದು ಬಣ್ಣೆ ಬರುವವರೆಗೆ ಫ್ರೈ ಮಾಡಿ, ಇದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಒಂದೆರಡು ನಿಮಿಷ ಫ್ರೈ ಮಾಡಿ, ನಂತರ ಇದಕ್ಕೆ ಈ ಮೊದಲೇ ಮಿಶ್ರಣ ಮಾಡಿಟ್ಟುಕೊಂಡ ಖೀಮಾ ಹಾಕಿ. ಗರಂ ಮಸಾಲೆ, ದನಿಯಾ ಪುಡಿ, ಜೀರಿಗೆ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಅರ್ಧ ಗಂಟೆಗಳ ಬೇಯಲು ಬಿಡಿ. ಖೀಮಾ ಬೇಯುತ್ತಿದ್ದಂತೆ ಡ್ರೈ ಆಗುವ ರೀತಿಯಲ್ಲಿ ಕಂಡು ಬರುತ್ತದೆ. ನಂತರ ಅದನ್ನು ಕೆಳಗಿಳಿಸಿ.
  • ಮತ್ತೊಂದೆ ಮೈದಾ ಹಿಟ್ಟು, ಉಪ್ಪು, ನೀರು ಹಾಗೂ ಎಣ್ಣೆ ಹಾಕಿ ಪರೋಟಗೆ ಹಿಟ್ಟನ್ನು ತಯಾರಿಸಿಕೊಳ್ಳಿ. ಹಿಟ್ಟಿನಿಂದ ಉಂಡೆಗಳನ್ನು ತಯಾರಿಸಿಕೊಂಡು ಉಂಡೆಗಳ ಮಧ್ಯೆ ಹಳ್ಳ ಮಾಡಿ ಇದಕ್ಕೆ ಬೆಂದ ಖೀಮಾ ಮಸಾಲೆ ಪದಾರ್ಥವನ್ನು ಹಾಗಿ ಪುನಃ ಉಂಡೆ ಮಾಡಿ. ಚಪಾತಿಯಂತೆ ನಿಧಾನಕ್ಕೆ ತಟ್ಟಿ. ನಂತರ ಒಲೆಯ ಮೇಲೆ ತವಾ ಇಟ್ಟು ಪರೋಟವನ್ನು ಎರಡು ಬದಿಯಲ್ಲೂ ಚೆನ್ನಾಗಿ ಬೇಯಿಸಿದರೆ ಖೀಮಾ ಪರೋಟ ತಯಾರಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.