ಫೀಫಾ ವಿಶ್ವಕಪ್ 2018: ನಾಕೌಟ್ ಹಂತಕ್ಕೆ ಸ್ಪೇನ್, ಪೋರ್ಚುಗಲ್ ಲಗ್ಗೆ!
ಫೀಫಾ ವಿಶ್ವಕಪ್ 2018ರ ಟೂರ್ನಿ ನಿರ್ಣಾಯಕ ಹಂತ ತಲುಪುತ್ತಿದ್ದು, ಸೋಮವಾರ ನಡೆದ ಬಿ ಗುಂಪಿನ ಅಂತಿಮ ಹಂತದ ಲೀಗ್ ಪಂದ್ಯಗಳಲ್ಲಿ ಡ್ರಾ ಸಾಧಿಸಿದ ಸ್ಪೇನ್ ಮತ್ತು ಪೋರ್ಚುಗಲ್ ತಂಡಗಳು ಅಂತಿಮ 16 ಹಂತಕ್ಕೆ ತಲುಪಿವೆ.

Published On :
ಮಾಸ್ಕೋ: ಫೀಫಾ ವಿಶ್ವಕಪ್ 2018ರ ಟೂರ್ನಿ ನಿರ್ಣಾಯಕ ಹಂತ ತಲುಪುತ್ತಿದ್ದು, ಸೋಮವಾರ ನಡೆದ ಬಿ ಗುಂಪಿನ ಅಂತಿಮ ಹಂತದ ಲೀಗ್ ಪಂದ್ಯಗಳಲ್ಲಿ ಡ್ರಾ ಸಾಧಿಸಿದ ಸ್ಪೇನ್ ಮತ್ತು ಪೋರ್ಚುಗಲ್ ತಂಡಗಳು ಅಂತಿಮ 16 ಹಂತಕ್ಕೆ ತಲುಪಿವೆ.
ನಿನ್ನೆ ನಡೆದ ಬಿ ಗುಂಪಿನ ಲೀಗ್ ಪಂದ್ಯದಲ್ಲಿ ಸ್ಪೇನ್ ತಂಡ ಪ್ರಬಲ ಮೊರಾಕ್ಕೋ ವಿರುದ್ಧ 2-2ರಲ್ಲಿ ಡ್ರಾ ಸಾಧಿಸಿತು. 1-2ರಲ್ಲಿ ಹಿಂದಿದ್ದ ಸ್ಪೇನ್ ತಂಡಕ್ಕೆ ಲಾಗೋ ಅಸ್ಪಾಸ್ ಕೊನೆ ಕ್ಷಣದಲ್ಲಿ ಗೋಲು ತಂದುಕೊಡುವ ಮೂಲಕ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯವಾಗುವಂತೆ ನೋಡಿಕೊಂಡರು.
ಪೋರ್ಚುಗಲ್ ಮತ್ತು ಇರಾನ್ ವಿರುದ್ಧ ನಡೆದ ಮತ್ತೊಂದು ಪಂದ್ಯವೂ 1-1ರಲ್ಲಿ ಡ್ರಾದಲ್ಲಿ ಅಂತ್ಯಗೊಂಡಿತು. ಪೋರ್ಚುಗಲ್ ತಂಡದ ಪರ ಮತ್ತೆ ರಿಕಾರ್ಡೋ ಕಾರೆಸ್ಮಾ ಆಪದ್ಭಾಂಧವನಾಗಿ ನಿಂತರು. ವಿಎಆರ್ ನರೆವು ಪಡೆದ ಕ್ವಾರೆಸ್ಮಾ, ಮುಂದಿನ ಕ್ಷಣದಲ್ಲೇ ಗೋಲ್ ಭಾರಿಸುವ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು.
ಬಿ ಗುಂಪಿನಲ್ಲಿ ಇದೀಗ ಸ್ಪೇನ್ ಮತ್ತು ಪೋರ್ಚುಗಲ್ ತಂಡಗಳು ಅಂತಿಮ 16ರ ಹಂತಕ್ಕೆ ಮುನ್ನಡೆದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Footballಫುಟ್ಬಾಲ್SpainFIFA World CupMoscowಮಾಸ್ಕೋFIFA World cup 2018PortugalPortugal vs IranFernando HierroSpain vs Moroccoಫೀಫಾ ವಿಶ್ವಕಪ್ 20
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


