ಫೀಫಾ ವಿಶ್ವ ಕಪ್ 2018

'ವಿದೇಶಿಗರೊಂದಿಗೆ ಸೆಕ್ಸ್ ಬೇಡ': ರಷ್ಯಾ ಸಚಿವರಿಂದ ಯುವತಿಯರಿಗೆ ಎಚ್ಚರಿಕೆ

ಫೀಫಾ ವಿಶ್ವಕಪ್ 2018ರ ಟೂರ್ನಿ ಚಾಲನೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ವಿದೇಶಿಗರೊಂದಿಗೆ ಸೆಕ್ಸ್ ಮಾಡಬೇಡಿ ಎಂದು ರಷ್ಯಾ ಸಚಿವೆ ತಮಾರಾ ಪ್ಲೆಟ್ನೋವಾ ತಮ್ಮ ದೇಶದ ಯುವತಿಯರಿಗೆ ಮತ್ತು ಮಹಿಳೆಯರಿಗೆ ಎಚ್ಚರಿಕೆ ನೀಡಿದ್ದಾರೆ.

'ವಿದೇಶಿಗರೊಂದಿಗೆ ಸೆಕ್ಸ್ ಬೇಡ': ರಷ್ಯಾ ಸಚಿವರಿಂದ ಯುವತಿಯರಿಗೆ ಎಚ್ಚರಿಕೆ
ರಷ್ಯಾ ಸಚಿವೆ ತಮಾರಾ ಪ್ಲೆಟ್ನೋವಾ (ಸಂಗ್ರಹ ಚಿತ್ರ)
Published On :
ಮಾಸ್ಕೋ: ಫೀಫಾ ವಿಶ್ವಕಪ್ 2018ರ ಟೂರ್ನಿ ಚಾಲನೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ವಿದೇಶಿಗರೊಂದಿಗೆ ಸೆಕ್ಸ್ ಮಾಡಬೇಡಿ ಎಂದು ರಷ್ಯಾ ಸಚಿವೆ ತಮಾರಾ ಪ್ಲೆಟ್ನೋವಾ ತಮ್ಮ ದೇಶದ ಯುವತಿಯರಿಗೆ ಮತ್ತು ಮಹಿಳೆಯರಿಗೆ ಎಚ್ಚರಿಕೆ ನೀಡಿದ್ದಾರೆ.
ಫೀಫಾ ಫುಟ್ಬಾಲ್ ವಿಶ್ವಕಪ್ 2018ರ ಟೂರ್ನಿ ಚಾಲನೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಟೂರ್ನಿ ಆಯೋಜಿಸುತ್ತಿರುವ ರಷ್ಯಾದಲ್ಲಿ ಸಾಕಷ್ಟು ವಾದ-ವಿವಾದಗಳು ಕೇಳಿಬರುತ್ತಿದ್ದು, ಪ್ರಮುಖವಾಗಿ ಫೀಫಾ ವಿಶ್ವಕಪ್ ಟೂರ್ನಿ ವೇಳೆ ರಷ್ಯಾಗೆ ಆಗಮಿಸುವ ವಿದೇಶಿ ಪುರುಷರೊಂದಿಗೆ ಸೆಕ್ಸ್ ಮಾಡಬೇಡಿ. ಒಂದು ವೇಳೆ ಆ ತಪ್ಪು ನೀವು ಮಾಡಿದರೆ ನಿಮ್ಮ ಮಕ್ಕಳು ತೊಂದರೆ ಅನುಭವಿಸಬೇಕಾಗುತ್ತದೆ. ವಿದೇಶಗಳಲ್ಲಿ ನಿಮ್ಮ ಮಕ್ಕಳು ತಾರತಮ್ಯ ಅಥಪಾ ಪಕ್ಷಪಾತ ಅನುಭವಿಸಬೇಕಾಗುತ್ತದೆ ಎಂದು ರಷ್ಯಾ ಸಚಿವರೊಬ್ಬರು ಹೇಳಿದ್ದಾರೆ.
ರಷ್ಯಾದ ಕುಟುಂಬ, ಮಹಿಳೆಯರು ಮತ್ತು ಮಕ್ಕಳ ಇಲಾಖೆಯ ಸಂಸತ್ ಸಮಿತಿಯ ಮುಖ್ಯಸ್ಥರಾಗಿರುವ ತಮಾರಾ ಪ್ಲೆಟ್ನೋವಾ ಇಂತಹುದೊಂದು ಎಚ್ಚರಿಕೆ ನೀಡಿದ್ದಾರೆ. 'ರಷ್ಯಾ ಯುವತಿಯರು ವಿದೇಶಿ ಪುರುಷರನ್ನು ಮದುವೆಯಾದರೆ ಅವರ ದಾಂಪತ್ಯ ಜೀವನ ಮುರಿದು ಬೀಳುತ್ತದೆ. ಅವರ ಮಕ್ಕಳು ವಿದೇಶಗಳಲ್ಲಿ ಅನಾಥರಾಗಿ ಜೀವನ ನಡೆಸಬೇಕಾಗುತ್ತದೆ. ಆ ದೇಶಗಳಿಂದ ತಾರತಮ್ಯ ಎದುರಿಸಬೇಕಾಗುತ್ತದೆ. ಅನಿವಾರ್ಯವಾದರೂ ತಮ್ಮದೇ ಮಕ್ಕಳನ್ನು ವಾಪಸ್ ಕರೆತರಲು ಆ ಮಹಿಳೆಯರು ಕಷ್ಟ ಪಡಬೇಕಾಗುತ್ತದೆ ಎಂದು ಹೇಳಿದ್ದಾರೆ.
'1980ರ ಮಾಸ್ಕೋ ಕ್ರೀಡಾಕೂಟ ಇನ್ನೂ ನಮ್ಮ ಮುಂದಿದೆ. ಅಂದು ವಿಶ್ವದಲ್ಲಿ ಅಷ್ಟಾಗಿ ಕಾಂಡೋಮ್ ಗಳ ಬಗ್ಗೆ ಮಾಹಿತಿ ಇರಲಿಲ್ಲ. ಅಂದು ರಷ್ಯನ್ ಮಹಿಳೆಯರು ಮತ್ತು ವಿದೇಶಿ ಪುರುಷರ ಮಕ್ಕಳು ತಾರತಮ್ಯ ಅನುಭವಿಸುವಂತಾಗಿತ್ತು. ಪ್ರಮುಖವಾಗಿ ಆಫ್ರಿಕಾ, ಲ್ಯಾಟಿನ್ ಅಮೆರಿಕ ಅಥವಾ ಏಷ್ಯಾ ಪುರುಷರೊಂದಿಗೆ ರಷ್ಯನ್ ಮಹಿಳೆಯರು ಸಂಪರ್ಕ ಸಾಧಿಸಿದ್ದರಿಂದ ಇಂದಿಗೂ ಅವರ ಮಕ್ಕಳು ಕಷ್ಟಪಡುವಂತಾಗಿದೆ. ಸೋವಿಯತ್ ಸಮಯದಿಂದಲೂ ಈ ಅಕ್ರಮ ಸಂಪರ್ಕ ಸಮಸ್ಯೆ ಇದ್ದು, ನಾವು ನಮ್ಮದೇ ಮಕ್ಕಳಿಗೆ ಮಾತ್ರ ಜನ್ಮ ನೀಡಬೇಕು'. 
ನಾನೇನು ರಾಷ್ಟ್ರೀಯ ವಾದಿಯಲ್ಲ. ಆದರೆ ಈ ಅಕ್ರಮ ಸಂಪರ್ಕ ಸಮಸ್ಯೆಯನ್ನು ಹತ್ತಿರದಿಂದ ಕಂಡಿದ್ದೇನೆ. ಹೀಗಾಗಿ ರಷ್ಯನ್ ಮಹಿಳೆಯರು ಜನಾಂಗೀಯತೆಗೆ ವಿರುದ್ಧವಾಗಿ ವಿದೇಶಿ ಪುರುಷರ ಸಂಪರ್ಕ ಬೆಳೆಸಬಾರದು ಎಂದು ತಮಾರಾ ಪ್ಲೆಟ್ನೋವಾ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.