ಫೀಫಾ ವಿಶ್ವ ಕಪ್ 2018

ಮೆಸ್ಸಿ ಕಟ್ಟಾ ಅಭಿಮಾನಿ, ಮೆಸ್ಸಿಗಾಗಿ ಏನನ್ನು ಬೇಕಾದರು ಮಾಡಲು ಈ ಚಾಯ್‍ವಾಲಾ ರೆಡಿ!

ಫುಟ್ಬಾಲ್ ಜಗತ್ತಿನ ಖ್ಯಾತ ಆಟಗಾರ ಲಿಯೋನಲ್ ಮೆಸ್ಸಿ ಕಂಡರೇ ಯಾರಿಗೆ ತಾನೇ ಇಷ್ಟ ಇಲ್ಲ. ಆತನ ಕಾಲ್ಜೆಂಡಿನಾಟಕ್ಕೆ ಮನಸೋಲದವರೇ ಇಲ್ಲ ಏನ್ನಬಹುದು...

ಮೆಸ್ಸಿ ಕಟ್ಟಾ ಅಭಿಮಾನಿ, ಮೆಸ್ಸಿಗಾಗಿ ಏನನ್ನು ಬೇಕಾದರು ಮಾಡಲು ಈ ಚಾಯ್‍ವಾಲಾ ರೆಡಿ!
ಶಿವ ಶಂಕರ್ ಪಾತ್ರಾ
Published On :
ಕೋಲ್ಕತ್ತಾ: ಫುಟ್ಬಾಲ್ ಜಗತ್ತಿನ ಖ್ಯಾತ ಆಟಗಾರ ಲಿಯೋನಲ್ ಮೆಸ್ಸಿ ಕಂಡರೇ ಯಾರಿಗೆ ತಾನೇ ಇಷ್ಟ ಇಲ್ಲ. ಆತನ ಕಾಲ್ಜೆಂಡಿನಾಟಕ್ಕೆ ಮನಸೋಲದವರೇ ಇಲ್ಲ ಏನ್ನಬಹುದು. 
ಇನ್ನು ಫಿಫಾ ಫುಟ್ಬಾಲ್ ವಿಶ್ವಕಪ್ ಗೆ ದಿನಗಣನೆ ಶುರುವಾಗಿದ್ದು ತಮ್ಮ ನೆಚ್ಚಿನ ತಾರೆಯ ಆಟವನ್ನು ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಮಧ್ಯೆ ಲಿಯೋನಲ್ ಮೆಸ್ಸಿ ಹಾಗೂ ಅರ್ಜೇಂಟೀನಾ ತಂಡಕ್ಕೆ ಕೋಲ್ಕತ್ತಾದಲ್ಲಿ ಓರ್ವ ಕಟ್ಟಾ ಅಭಿಮಾನಿ ಇದ್ದಾರೆ. 
ಕೋಲ್ಕತ್ತಾದಲ್ಲಿ ಚಾಯ್‍ವಾಲಾ ಆಗಿರುವ ಶಿವ್ ಶಂಕರ್ ಪಾತ್ರಾ ಅವರು ಫುಟ್ಬಾಲ್ ದಂತಕಥೆ ಡೀಗೋ ಮರಡೋನ ಅವರು ಗೋಲು ಬಾರಿಸಿ ಅರ್ಜೇಟೀನಾ ತಂಡ 1986ರ ವಿಶ್ವಕಪ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲಿಂದ ಪಾತ್ರಾ ಅವರು ಮರಡೋನ ಮತ್ತು ಅರ್ಜೇಟೀನಾ ತಂಡಕ್ಕೆ ಫ್ಯಾನ್ ಆಗಿದ್ದರು. 
ಮ್ಯಾರಡೋನ ನಂತರ ಮೆಸ್ಸಿ ಅರ್ಜೇಟೀನಾದಲ್ಲಿ ಅತ್ಯುತ್ತಮ ಆಟವಾಡುತ್ತಿರುವುದರಿಂದ ಪಾತ್ರಾ ಅವರು ಇದೀಗ ಮೆಸ್ಸಿಗೆ ಕಟ್ಟಾ ಅಭಿಮಾನಿಯಾಗಿದ್ದಾರೆ. ತಮ್ಮ ಅಭಿಮಾನಕ್ಕೆ ಪೂರಕವಾಗಿ ಅವರು ತಮ್ಮ ಮನೆಗೆ ಅರ್ಜೇಟೀನಾ ತಂಡದ ಬಣ್ಣ ನೀಲಿ ಮತ್ತು ಬಿಳಿ ಬಣ್ಣವನ್ನು ತಮ್ಮ ಮನೆಗೆ ಬಳಿಸಿದ್ದಾರೆ. 
ಈ ಬಗ್ಗೆ ಮಾತನಾಡಿರುವ ಪಾತ್ರಾ ಅವರು ನಾನು ಮತ್ತು ನನ್ನ ಕುಟುಂಬದ ಪ್ರತಿಯೊಬ್ಬರು ಅರ್ಜೇಟೀನಾ ಮತ್ತು ಲಿಯೋನಲ್ ಮೆಸ್ಸಿ ಅವರ ಕಟ್ಟಾ ಅಭಿಮಾನಿಯಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇದೇ ಜೂನ್ 24ರಂದು ವಿಶ್ವಕಪ್ ವೇಳೆ ಮೆಸ್ಸಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ ಎಂದು ಪಾತ್ರಾ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.