ಫ್ರಾನ್ಸ್-ಬೆಲ್ಜಿಯಂ ನಡುವೆ ಮಹಾಕಾಳಗ: ಗೆದ್ರೆ ಫಿಫಾ ಫೈನಲ್‌ಗೆ, ಸೋತ್ರೆ ಮನೆಗೆ!
2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಯಾರಾಗ್ತಾರೆ ಎಂಬ ಕುತೂಹಲಕ್ಕೆ ದಿನಗಣನೆ ಶುರುವಾಗಿದೆ. ಕಾಲ್ಚೆಂಡಿನ ಮಹಾಕಾಳಗದಲ್ಲಿ ಬಲಿಷ್ಠ ತಂಡಗಳೇ ಟೂರ್ನಿಯಿಂದ...

Published On :
ಸೇಂಟ್ ಪಿಟರ್ಸ್‌ಬರ್ಗ್: 2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಯಾರಾಗ್ತಾರೆ ಎಂಬ ಕುತೂಹಲಕ್ಕೆ ದಿನಗಣನೆ ಶುರುವಾಗಿದೆ. ಕಾಲ್ಚೆಂಡಿನ ಮಹಾಕಾಳಗದಲ್ಲಿ ಬಲಿಷ್ಠ ತಂಡಗಳೇ ಟೂರ್ನಿಯಿಂದ ಹೊರನಡೆದಿದ್ದು ಇದೀಗ ಸೆಮಿಫೈನಲ್ ಪಂದ್ಯಗಳು ನಡೆಯಲಿದೆ.
ಸದ್ಯ ಸೆಮಿಫೈನಲ್ ಪ್ರವೇಶಿಸಿರುವ ಫ್ರಾನ್ಸ್, ಬೆಲ್ಜಿಯಂ, ಕ್ರೊವೇಷಿಯಾ ಮತ್ತು ಇಂಗ್ಲೆಂಡ್ ತಂಡಗಳು ಫೈನಲ್ ಪ್ರವೇಶಿಸಲು ಸೆಣೆಸಲಿವೆ. ಮೊದಲ ಸೆಮಿಫೈನಲ್ ಪಂದ್ಯ ಇಂದು ನಡೆಯಲಿದ್ದು ಫ್ರಾನ್ಸ್ ಮತ್ತು ಬೆಲ್ಜಿಯಂ ತಂಡಗಳು ಸೆಣೆಸಲಿವೆ. ಇನ್ನು ಮತ್ತೊಂದು ಪಂದ್ಯ ನಾಳೆ ನಡೆಯಲಿದ್ದು ಕ್ರೊವೇಷಿಯಾ ಹಾಗೂ ಇಂಗ್ಲೆಂಡ್ ತಂಡಗಳು ಸೆಣೆಸಲಿವೆ.
ನಾಲ್ಕು ತಂಡಗಳಲ್ಲೂ ಖ್ಯಾತ ಫುಟ್ಬಾಲ್ ಆಟಗಾರರಿದ್ದಾರೆ. ಈ ಆಟಗಾರರು ಗೋಲು ಬಾರಿಸುವ ಮೂಲಕ ತಮ್ಮ ತಂಡ ಫೈನಲ್ ಪ್ರವೇಶಿಸಲು ಕಾರಣರಾಗುತ್ತಾರಾ ಎಂದು ಕಾದುನೋಡಬೇಕಿದೆ.
ಫ್ರಾನ್ಸ್ ಪರ ಕೈಲ್ಯಾನ್ ಬಾಪೆ ಮತ್ತು ಆಂಟೊಯಿನ್ ಗ್ರೀಜ್ಮನ್ ಉತ್ತಮ ಫಾರ್ಮ್ ನಲ್ಲಿದ್ದರೆ ಅತ್ತ ಬೆಲ್ಜಿಯಂನಲ್ಲಿ ಈಡೆನ್ ಹಜಾರ್ಡ್ ಅವರ ಬಲವಿದೆ. ಫ್ರಾನ್ಸ್ ಈ ಬಾರಿ ಬೆಲ್ಜಿಯಂ ತಂಡವನ್ನು ಮಣಿಸುವ ಮೂಲಕ ಮೊದಲ ಬಾರಿಗೆ ಫೈನಲ್ ಪ್ರವೇಶಿಸುವ ಕನಸು ಕಾಣುತ್ತಿದೆ.
ಇನ್ನು ಬೆಲ್ಜಿಯಂ ಸಹ ಇಲ್ಲಿಯವರೆಗೂ ಒಂದು ಬಾರಿಯೂ ಫಿಫಾ ವಿಶ್ವಕಪ್ ಫೈನಲ್ ಪ್ರವೇಶಿಸಿಲ್ಲ. 1986ರ ಫಿಫಾ ವಿಶ್ವಕಪ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತು ಅಷ್ಟೆ. ಹೀಗಾಗಿ ಫೈನಲ್ ಪ್ರವೇಶಿಸಲು ಉಭಯ ತಂಡಗಳು ಪ್ರಯತ್ನಿಸಲಿದ್ದು ಇದಕ್ಕಾಗಿ ಭರ್ಜರಿ ಕಸರತ್ತು ನಡೆಸುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Footballಫುಟ್ಬಾಲ್FranceBelgiumಫ್ರಾನ್ಸ್ಬೆಲ್ಜಿಯಂFIFA World cup 2018ಫಿಫಾ ವಿಶ್ವಕಪ್ 2018Saint Petersburgಸೇಂಟ್ ಪಿಟರ್ಸ್‌ಬರ್ಗ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


