ಫೀಫಾ ವಿಶ್ವ ಕಪ್ 2018

ಫೀಫಾ ವಿಶ್ವಕಪ್ 2018 : 2-0 ಗೋಲುಗಳಿಂದ ಉರುಗ್ವೆ ಮಣಿಸಿದ ಫ್ರಾನ್ಸ್ ಸೆಮಿ ಫೈನಲ್ ಪ್ರವೇಶ

ತೀವ್ರ ಕುತೂಹಲ ಮೂಡಿಸಿದ್ದ ಫೀಫಾ ವಿಶ್ವಕಪ್ ಟೂರ್ನಿಯ ಮೊದಲ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ 2-0 ಗೋಲುಗಳಿಂದ ಉರುಗ್ವೆ ಮಣಿಸಿದ ಫ್ರಾನ್ಸ್ ಸಮಿಫೈನಲ್ ಪ್ರವೇಶಿಸಿದೆ.

ಫೀಫಾ ವಿಶ್ವಕಪ್ 2018 :  2-0 ಗೋಲುಗಳಿಂದ ಉರುಗ್ವೆ ಮಣಿಸಿದ ಫ್ರಾನ್ಸ್ ಸೆಮಿ ಫೈನಲ್ ಪ್ರವೇಶ
ಫ್ರಾನ್ಸ್ ತಂಡದ ಆಟಗಾರರ ಸಂಭ್ರಮ
Published On :

ನಿಜ್ನಿ ನವಗೊರಾಡ್ :  : ತೀವ್ರ ಕುತೂಹಲ ಮೂಡಿಸಿದ್ದ  ರಷ್ಯಾ ಫೀಫಾ ವಿಶ್ವಕಪ್ ಟೂರ್ನಿಯ  ಮೊದಲ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ 2-0 ಗೋಲುಗಳಿಂದ ಉರುಗ್ವೆ ಮಣಿಸಿದ ಫ್ರಾನ್ಸ್ ಸಮಿಫೈನಲ್ ಪ್ರವೇಶಿಸಿದೆ.

 ಪಂದ್ಯದ ಮೊದಲಾರ್ಧ ಹಾಗೂ ದ್ವಿತೀಯಾರ್ಧದಲ್ಲಿ  ಗಳಿಸಿದ ಗೋಲಿನ ನೆರವಿನಿಂದ ಫ್ರಾನ್ಸ್  ಸೆಮಿ ಫೈನಲ್ ಸುತ್ತು ಪ್ರವೇಶಿಸಲು ಸಾಧ್ಯವಾಗಿದೆ.

ಪಂದ್ಯ ಆರಂಭಗೊಂಡ 40 ನೇ ನಿಮಿಷದಲ್ಲಿ  ರಾಫೆಲ್  ವಾರೆನ್  ಅವರು ಫ್ರಾನ್ಸ್ ಪರ ಗೋಲು ದಾಖಲಿಸಿ  1-0  ಅಂತರದಿಂದ ಮುನ್ನಡೆ ತಂದುಕೊಟ್ಟರು.
ನಂತರ ದ್ವಿತೀಯಾರ್ಧದಲ್ಲಿ 61 ನೇ ನಿಮಿಷದಲ್ಲಿ ಅಂಟೊಯ್ನಿ  ಗ್ರೀಜ್ ಮನ್ ಮತ್ತೊಂದು ಗೋಲು ಭಾರಿಸುವ ಮೂಲಕ ಫ್ರಾನ್ಸ್   ಸೆಮಿಫೈನಲ್ ಪ್ರವೇಶಿಸಿತು.
2006ರ ನಂತರ ಫ್ರಾನ್ಸ್  ಸೆಮಿಫೈನಲ್ ಸುತ್ತು ಪ್ರವೇಶಿಸಿದ್ದು, ಸೆಂಟ್ ಫೀಟರ್ಸ್ ಬರ್ಗ್ ನಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ  ಬೆಲ್ಜಿಯಂ ಅಥವಾ ಬ್ರಜಿಲ್ ವಿರುದ್ದ ಹೋರಾಟ ನಡೆಸಲಿದೆ.

16 ರಘಟ್ಟದ ಪಂದ್ಯದಲ್ಲಿ ಅರ್ಜೀಂಟೀನಾ ವಿರುದ್ಧ 4-3 ಅಂತರದಿಂದ ಗೆದ್ದ ಬಳಿಕ  ಆತ್ಮವಿಶ್ವಾಸ ಇಮ್ಮಡಿಗೊಂಡಿತ್ತು. ನಾನು ಉತ್ತಮ ತಂಡ ಹೊಂದಿರುವುದಾಗಿ ಫ್ರಾನ್ಸ್ ಕೋಚ್ ಡಿಡೈರ್ ದೆಸ್ ಚಾಂಸ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.