ಕಮರಿ ಹೋಯಿತು ಫುಟ್ಬಾಲ್ ದಂತಕಥೆಗಳ ವಿಶ್ವಕಪ್ ಕನಸು!
ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಟೂರ್ನಿಯಲ್ಲಿ ಗೆದ್ದು ವಿಶ್ವಕಪ್ ಮುಡಿಗೇರಿಸಿಕೊಳ್ಳಬೇಕು ಎಂಬ ಮಹದಾಸೆಯೊಂದಿಗೆ ಆಗಮಿಸಿದ್ದ ಫುಟ್ಬಾಲ್ ಲೋಕದ ದಂತಕಥೆಗಳಾದ ಕ್ರಿಸ್ಟಿಯಾನೋ ರೊನಾಲ್ಡೋ ಮತ್ತು ಲಿಯೋನಲ್ ಮೆಸ್ಸಿ ಕನಸು ಭಗ್ನಗೊಂಡಿದೆ.

Published On :
ಮಾಸ್ಕೋ: ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಟೂರ್ನಿಯಲ್ಲಿ ಗೆದ್ದು ವಿಶ್ವಕಪ್ ಮುಡಿಗೇರಿಸಿಕೊಳ್ಳಬೇಕು ಎಂಬ ಮಹದಾಸೆಯೊಂದಿಗೆ ಆಗಮಿಸಿದ್ದ ಫುಟ್ಬಾಲ್ ಲೋಕದ ದಂತಕಥೆಗಳಾದ ಕ್ರಿಸ್ಟಿಯಾನೋ ರೊನಾಲ್ಡೋ ಮತ್ತು ಲಿಯೋನಲ್ ಮೆಸ್ಸಿ ಕನಸು ಭಗ್ನಗೊಂಡಿದೆ.
ನಿನ್ನೆ ನಡೆದ ನಾಕೌಟ್ ಹಂತದ ಪಂದ್ಯಗಳಲ್ಲಿ ಉರುಗ್ವೆ ವಿರುದ್ಧ ಪೋರ್ಚುಗಲ್ ಮತ್ತು ಫ್ರಾನ್ಸ್ ವಿರುದ್ಧ ಅರ್ಜೆಂಟಿನಾ ತಂಡಗಳು ಸೋಲುಕಾಣುವ ಮೂಲಕ ಮೆಸ್ಸಿ, ರೊನಾಲ್ಡೋ ಕನಸು ಭಗ್ನಗೊಂಡಿದೆ. ಉರುಗ್ವೆ ವಿರುದ್ಧ ಪೋರ್ಚುಗಲ್ 2-1 ಅಂತರದಲ್ಲಿ ಸೋಲು ಕಂಡರೆ, ಫ್ರಾನ್ಸ್ ವಿರುದ್ಧ ಪ್ರಬಲ ಹೋರಾಟದ ಹೊರತಾಗಿಯೂ ಅರ್ಜೆಂಟಿನಾ ತಂಡ 4-3 ಅಂತರದ ವಿರೋಚಿತ ಸೋಲು ಕಂಡಿದೆ.
ಅಚ್ಚರಿ ಎಂದರೆ ಈ ಎರಡೂ ಪಂದ್ಯಗಳಲ್ಲಿ ಆಯಾ ತಂಡದ ಸ್ಚಾರ್ ಆಟಗಾರರು ಸಿಡಿದಿಲ್ಲ. ಪೋರ್ಚುಗಲ್ ತಂಡದ ರೊನಾಲ್ಡೋ ಮತ್ತು ಅರ್ಜೆಂಟಿನಾ ತಂಡದ ಲಿಯೋನಲ್ ಮೆಸ್ಸಿ ಒಂದೂ ಗೋಲು ಗಳಿಸದೇ ಇರುವುದು ಆಯಾ ತಂಡಗಳಿಗೆ ದುಬಾರಿಯಾಗಿ ಪರಿಣಮಿಸಿತು.
ಅಂತಿಮವಾಗಿ ಸೋಲಿನ ಕಹಿಯೊಂದಿಗೆ ಫುಟ್ಬಾಲ್ ನ ದಂತಕಥೆಗಳಾದ ರೊನಾಲ್ಡೋ ಮತ್ತು ಮೆಸ್ಸಿಗೆ ವಿಶ್ವಕಪ್ ನಿಂದ ವಿದಾಯ ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಅರ್ಜೆಂಟಿನಾCristiano Ronaldoಲಿಯೋನಲ್ ಮೆಸ್ಸಿArgentinaLionel MessiMoscowಮಾಸ್ಕೋFIFA World cup 2018ಕ್ರಿಸ್ಟಿಯಾನೋ ರೊನಾಲ್ಡೋOffbeatPortugalಫೀಫಾ ವಿಶ್ವಕಪ್ 2018
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


