ಮತದಾರರಿಗೆ ಭದ್ರತೆಗಿಂತ ಉದ್ಯೋಗ, ಆರ್ಥಿಕತೆಯೇ ಪ್ರಮುಖ ಚುನಾವಣಾ ವಿಷಯ!
ದೇಶದ ಮತದಾರರಿಗೆ ಭದ್ರತೆಗಿಂತ ಉದ್ಯೋಗ, ಆರ್ಥಿಕತೆಯೇ ಪ್ರಮುಖ ಚುನಾವಣಾ ವಿಷಯವಾಗಿದೆ ಎಂದು ತಿಳಿದುಬಂದಿದೆ.

Published On :
ನವದೆಹಲಿ: ಲೋಕಸಭಾ ಚುನಾವಣೆಗೆ ಏ.29 ರಂದು 4 ನೇ ಹಂತದ ಮತದಾನ ನಡೆಯಲಿದೆ. ಈ ನಡುವೆ ಸಿ-ವೋಟರ್-ಐಎಎನ್ಎಸ್ ನಡೆಸಿದ ಸಮೀಕ್ಷೆಯಲ್ಲಿ ದೇಶದ ಮತದಾರರಿಗೆ ಭದ್ರತೆಗಿಂತ ಉದ್ಯೋಗ, ಆರ್ಥಿಕತೆಯೇ ಪ್ರಮುಖ ಚುನಾವಣಾ ವಿಷಯವಾಗಿದೆ ಎಂದು ತಿಳಿದುಬಂದಿದೆ.
ಏ.26 ರಂದು ನಡೆದಿರುವ ಸಮೀಕ್ಷೆಯಲ್ಲಿ ಮತರಾರರು ನಿರುದ್ಯೋಗ ವಿಷಯಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಬಹಿರಂಗಗೊಂಡಿದೆ. ಅರ್ಥಿಕತೆಯ ವಿಷಯ ದೇಶದಲ್ಲಿರುವ ಪ್ರಮುಖ ಸಮಸ್ಯೆಗಳಲ್ಲಿ ಒಂದು ಎಂದು ಶೇ.57.04 ರಷ್ಟು ಮಂದಿ ಹೇಳಿದ್ದರೆ ಶೇ.11.74 ರಷ್ಟು ಮಂದಿ ಭದ್ರತೆ ದೇಶದಲ್ಲಿ ಅತ್ಯಂತ ಕಾಳಜಿ ವಹಿಸಬೇಕಾದ ಅಂಶ ಎಂದು ಹೇಳಿದ್ದಾರೆ.
ಚುನಾವಣೆ ಪ್ರಾರಂಭವಾಗುವುದಕ್ಕಿಂತಲೂ ಮುನ್ನ ನಿರುದ್ಯೋಗ ಸಮಸ್ಯೆಯೇ ಚುನಾವಣಾ ವಿಷಯವಾಗಿತ್ತು. ಈ ಟ್ರೆಂಡ್ ಚುನಾವಣೆ ಪ್ರಾರಂಭವಾಗಿ 4 ನೇ ಹಂತದ ಮತದಾನದ ವೇಳೆಯಲ್ಲಿಯೂ ಪ್ರಮುಖ ಚುನಾವಣಾ ವಿಷಯವಾಗಿ ಮುಂದುವರೆದಿದೆ. ಆದರೆ ಮಾರ್ಚ್ ತಿಂಗಳಲ್ಲಿ ಮಾತ್ರ ದೇಶದ ಜನತೆ ಭದ್ರತೆಯನ್ನು ಅತ್ಯಂತ ಪ್ರಮುಖ ವಿಷಯ ಎಂದು ಪರಿಗಣಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
JobsVotersಮತದಾರರುಲೋಕಸಭಾ ಚುನಾವಣೆ-2019Lok Sabha elections-2019CVOTER-IANS surveyಸಿ-ವೋಟರ್-ಐಎಎನ್ಎಸ್ ಸಮೀಕ್ಷೆ4th Phase voting4 ನೇ ಹಂತದ ಮತದಾನ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


