ಪೊಲೀಸ್ ಠಾಣೆಯಲ್ಲಿ ದೂರು ಪೆಟ್ಟಿಗೆ ಅಳವಡಿಕೆ ಇನ್ನು ಕಡ್ಡಾಯ
ರಾಜ್ಯಾದ್ಯಂತ ಪೊಲೀಸ್ ಠಾಣೆಗಳಲ್ಲಿ ಪೊಲೀಸ್ ದೂರು ಪ್ರಾಧಿಕಾರದ ಬಗ್ಗೆ ಶಾಸ್ವತ ಫಲಕ ಹಾಗೂ ದೂರು ಪೆಟ್ಟಿಗೆ ಅಳವಡಿಸಬೇಕು. ಈ ಬಗ್ಗೆ ಠಾಣಾಧಿಕಾರಿ ಸಹಕರಿಸದಿದ್ದಲ್ಲಿ, ಅವರ ಹೆಸರನ್ನು ತಿಳಿಸುವಂತೆ ಹೈ ಕೋರ್ಟ್ ಮುಖ್ಯ ನ್ಯಾಯಪೀಠ ನಿರ್ದೇಶಿಸಿದೆ...

ಬೆಂಗಳೂರು: ರಾಜ್ಯಾದ್ಯಂತ ಪೊಲೀಸ್ ಠಾಣೆಗಳಲ್ಲಿ ಪೊಲೀಸ್ ದೂರು ಪ್ರಾಧಿಕಾರದ ಬಗ್ಗೆ ಶಾಸ್ವತ ಫಲಕ ಹಾಗೂ ದೂರು ಪೆಟ್ಟಿಗೆ ಅಳವಡಿಸಬೇಕು. ಈ ಬಗ್ಗೆ ಠಾಣಾಧಿಕಾರಿ ಸಹಕರಿಸದಿದ್ದಲ್ಲಿ, ಅವರ ಹೆಸರನ್ನು ತಿಳಿಸುವಂತೆ ಹೈ ಕೋರ್ಟ್ ಮುಖ್ಯ ನ್ಯಾಯಪೀಠ ನಿರ್ದೇಶಿಸಿದೆ.
ರಾಜ್ಯದಲ್ಲಿ ಪೊಲೀಸ್ ದೂರು ಪ್ರಾಧಿಕಾರ ಸ್ಥಾಪಿಸಿಲ್ಲ ಮತ್ತು ಪ್ರಾಧಿಕಾರದಲ್ಲಿ ಸದಸ್ಯರ ಕೊರತೆ ಇದೆ ಎಂದು ಆರೋಪಿಸಿ ಆದರ್ಶ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎ.ಎನ್. ವೇಣು ಗೋಪಾಲಗೌಡ ಅವರಿದ್ದ ಏಕ ಸದಸ್ಯ ಪೀಠ, ತಿಂಗಳಿಗೊಮ್ಮೆ ದೂರು ಪೆಟ್ಟಿಗೆ ದೂರು ಕುರಿತು ತಪಾಸಣೆ ನಡೆಸಬೇಕೆಂದು ನಿರ್ದೇಶಿಸಿತು.
ರಾಜ್ಯ ಸರ್ಕಾರ ಹಾಗೂ ಮಾನವ ಹಕ್ಕು ಆಯೋಗವು ದೂರು ಪ್ರಾಧಿಕಾರದ ಬಗ್ಗೆ ಅರಿವು ಮೂಡಿಸುವಲ್ಲಿ ಆಸಕ್ತಿ ತೋರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು. ಈ ಸಂದರ್ಭದಲ್ಲಿ ವಾದ ಮಂಡಿಸಿದ ಮಾನವ ಹಕ್ಕು ಆಯೋಗದ ಪರ ವಕೀಲರು ಪ್ರತಿ ದಿನ ಕನಿಷ್ಠ ಐದು ದೂರುಗಳು ಪೊಲೀಸರ ವಿರುದ್ಧ ದಾಖಲಾಗಿತ್ತಿವೆ. ಅಲ್ಲದೇ, ದೂರು ಪ್ರಾಧಿಕಾರದ ಬಗ್ಗೆ ಅರಿವು ಮೂಡಿಸಲು ಜಿಲ್ಲಾ ಹಂತದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠವು, ಕೇವಲ ಕಾರ್ಯಾಗಾರ ಹಮ್ಮಿಕೊಂಡರೆ ಸಾಲದು, ಅರಿವು ಮೂಡಿಸಲು ಸಾಕಷ್ಟು ಕ್ರಮ ಜರುಗಿಸಬೇಕು ಎಂದು ಮಾಡವಂತೆ ನಿರ್ದೇಶನ ನೀಡಿದೆ ನ್ಯಾಯ ಪೀಠವು ಅರ್ಜಿ ವಿಚಾರಣೆಯನ್ನು ಮುಂದೂಡಿತು.
ಮನವಿ
ಶಾಲೆ, ರೈಲು ನಿಲ್ದಾಣ, ಬಸ್ ನಿಲ್ದಾಣ, ಆಸ್ಪತ್ರೆ ಗಳಲ್ಲಿ ಪೊಲೀಸ್ ದೂರು ಪ್ರಾಧಿಕಾರ ಫಲಕಗಳನ್ನು ಅಳವಡಿಸುವ ಬಗ್ಗೆ ನ್ಯಾಯಪೀಠಕ್ಕೆ ಒಪ್ಪಿಸಲು ನಿರ್ದೇಶಿಸಲು ಕಾನೂನು ಸೇವಾ ಪ್ರಾಧಿಕಾರ ಪರ ವಕೀಲರು ಕೋರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


