ಜಿಲ್ಲಾ ಸುದ್ದಿ

ಮಹಿಳಾ ಸೀಟ್‍ನಲ್ಲಿ ಪ್ರಯಾಣಿಸುತ್ತಿದ್ದ ಪುರುಷರಿಗೆ ದಂಡ!

ಬಿಎಂಟಿಸಿ ಬಸ್‍ಗಳಲ್ಲಿ ಟಿಕೆಟ್ ಪಡೆಯದೆ ಸಂಚರಿಸುವವರನ್ನು ಪತ್ತೆ ಹಚ್ಚಿದ ತನಿಖಾ ತಂಡ, 17,047 ಜನರಿಗೆ ದಂಡ ವಿಧಿಸಿದೆ. ಅದೇ ರೀತಿ, ಮಹಿಳಾ ಆಸನಗಳಲ್ಲಿ ಪ್ರಯಾಣಿಸುತ್ತಿದ್ದ 2477 ಪುರುಷರ ವಿರುದ್ಧ ಕ್ರಮ ಕೈಗೊಂಡು, ದಂಡ ವಿಧಿಸಿದೆ...

ಮಹಿಳಾ ಸೀಟ್‍ನಲ್ಲಿ ಪ್ರಯಾಣಿಸುತ್ತಿದ್ದ ಪುರುಷರಿಗೆ ದಂಡ!
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಬಿಎಂಟಿಸಿ ಬಸ್‍ಗಳಲ್ಲಿ ಟಿಕೆಟ್ ಪಡೆಯದೆ ಸಂಚರಿಸುವವರನ್ನು ಪತ್ತೆ ಹಚ್ಚಿದ ತನಿಖಾ ತಂಡ, 17,047 ಜನರಿಗೆ ದಂಡ ವಿಧಿಸಿದೆ. ಅದೇ ರೀತಿ, ಮಹಿಳಾ ಆಸನಗಳಲ್ಲಿ ಪ್ರಯಾಣಿಸುತ್ತಿದ್ದ 2477 ಪುರುಷರ ವಿರುದ್ಧ ಕ್ರಮ ಕೈಗೊಂಡು, ದಂಡ ವಿಧಿಸಿದೆ.

ಅನ„ಕೃತವಾಗಿ ಪಯಣಿಸುವವರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಆದಾಯ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ, ಮಾರ್ಚ್, ಏಪ್ರಿಲ್‍ನಲ್ಲಿ 67,270 ಟ್ರಿಪ್‍ಗಳನ್ನು ತಪಾಸಣೆ ನಡೆಸಿದ ತಂಡ, 17,047 ಟಿಕೇಟ್ ರಹಿತ ಪ್ರಯಾಣಿಕರನ್ನು ಪತ್ತೆಹಚ್ಚಿದೆ. ರು.29,46 ಲಕ್ಷ ದಂಡ ವಸೂಲಿ ಮಾಡಿದ್ದು, ಈ ಸಂಬಂಧ 8464 ನಿರ್ವಾಹಕರ ವಿರುದ್ಧ ದೂರು ದಾಖಲಿಸಿದೆ.

ಮತ್ತೊಂದೆಡೆ ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸುತ್ತಿದ್ದವರಿಂದ ರು.2,47 ಲಕ್ಷ ದಂಡ ವಿಧಿಸಲಾಗಿದೆ ಎಂದು ಇಲಾಖೆಯ ವ್ಯವಸ್ಧಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.