ಗಾಂಧಿ ಫೋಟೋ ಕದ್ದೊಯ್ದ ದುರಾತ್ಮರು!
ಹಣ, ಚಿನ್ನಾಭರಣ, ದುಬಾರಿ ವಸ್ತುಗಳು, ಮಹತ್ವದ ದಾಖಲೆಗಳನ್ನು ಕಳ್ಳರು ದೋಚುವುದು ಸಾಮಾನ್ಯ. ಆದರೆ, ಮಹಾತ್ಮ ಗಾಂಧಿ ಫೋಟೋ ಕದ್ದೊಯ್ಯುವುದು ಎಲ್ಲಾದರೂ ಕೇಳಿದ್ದೀರಾ, ಇಲ್ಲಾ ಅಲ್ಲವಾ?. ಆದರೆ, ಇದು ನಿಜ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಮೌಲ್ಯಮಾಪನ...

ಬೆಂಗಳೂರು: ಹಣ, ಚಿನ್ನಾಭರಣ, ದುಬಾರಿ ವಸ್ತುಗಳು, ಮಹತ್ವದ ದಾಖಲೆಗಳನ್ನು ಕಳ್ಳರು ದೋಚುವುದು ಸಾಮಾನ್ಯ. ಆದರೆ, ಮಹಾತ್ಮ ಗಾಂಧಿ ಫೋಟೋ ಕದ್ದೊಯ್ಯುವುದು ಎಲ್ಲಾದರೂ ಕೇಳಿದ್ದೀರಾ, ಇಲ್ಲಾ ಅಲ್ಲವಾ?. ಆದರೆ, ಇದು ನಿಜ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಮೌಲ್ಯಮಾಪನ ಕುಲಸಚಿವರ ಕೊಠಡಿಗೆ ನುಗ್ಗಿದ ದುಷ್ಕರ್ಮಿಗಳು ಮಹಾತ್ಮ ಗಾಂಧಿ ಫೋಟೋ ಕದ್ದೊಯ್ದಿದ್ದಾರೆ.
ಈ ನಡೆದಿದ್ದು ಮೇ4 ರ ತಡ ರಾತ್ರಿಯಲ್ಲಿ ಜಯನಗರ 9ನೇ ಬ್ಲಾಕ್ ನಲ್ಲಿನ ವಿವಿಯ ಕುಲಸಚಿವರ ಕೊಠಡಿಗೆ ನುಗ್ಗಿದ ದುಷ್ಕರ್ಮಿಗಳು ಕಚೇರಿಯಲ್ಲಿ ವಿವಿಧ ದಾಖಲೆಗಳಿಗಾಗಿ ತಡಕಾಡಿದ್ದಾರೆ. ಆದರೆ, ಏನೂ ಸಿಕ್ಕಿಲ್ಲ. ಕೊನೆಗೆ ಮಹಾತ್ಮ ಗಾಂಧೀಜಿ ಫೋಟೋವನ್ನು ಕದ್ದೊಯ್ದಿದ್ದಾರೆ. ಈ ಬಗ್ಗೆ ಕುಲಸಚಿವರು ತಿಲಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ರಾಜೀವ್ ಗಾಂಧಿ ವಿವಿಗೆ ಇಬ್ಬರು ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಆದರೆ, ಘಟನೆ ನಡೆದ ಸೋಮವಾರ ರಾತ್ರಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಅದೇ ವೇಳೆ, ಭದ್ರತಾ ಸಿಬ್ಬಂದಿ ಧೂಮಪಾನ ಮಾಡುವುದಕ್ಕಾಗಿ ಕಾಂಪೌಂಡ್ ಬಳಿ ತೆರಳಿದ್ದಾರೆ. ಆಗ ಒಳ ನುಗ್ಗಿರುವ ದುಷ್ಕರ್ಮಿಗಳು ಮೌಲ್ಯಮಾಪನ ಕುಲಸಚಿವರ ಕೊಠಡನ ಬೀಗ ಮುರಿದು ಒಳ ನುಗ್ಗಿ, ಡ್ರಾಯರ್ ಸೇರಿದಂತೆ ನಾನಾ ಟೇಬಲ್ ಗಳನ್ನು
ಜಾಲಾಡಿದ್ದಾರೆ.
ಬಳಿಕ ಮತ್ತೊಂದು ಕೊಠಡಿಗೆ ತೆರಳಿ ಅಲ್ಲಿಯು ದಾಖಲೆಗಳಿಗಾಗಿ ಹುಡುಕಾಡಿದ್ದಾರೆ. ಕೊನೆಗೆ ಏನೂ ಸಿಗದೆ ಇದ್ದಾಗ ಕುಲಸಚಿವರ ಕೊಠಡಿಯಲ್ಲಿದ್ದ ಗಾಂಧಿ ಫೋಟೋ ಮತ್ತು ಮೊಬೈಲ್ ಫೋನ್ ಜತೆ ಪರಾರಿಯಾಗಿದ್ದಾರೆ. ಮಂಗಳವಾರ ಬೆಳಿಗ್ಗೆ ಎಂದಿನಂತೆ ಕಚೇರಿ ಏ ಅಟೆಂಡರ್ ಕಚೇರಿಗೆ ಬಂದಾಗಲೇ ಈ ಘಟನೆ ನಡೆದಿರುವ ಬಗ್ಗೆ ಗೊತ್ತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


