ಜಿಲ್ಲಾ ಸುದ್ದಿ

95 ವಾರ್ಡ್‍ಗಳ ತ್ಯಾಜ್ಯ ಸಂಗ್ರಹ, ಸಾಗಣೆಗೆ ರು.276 ಕೋಟಿ: ಸಿಎಂ

ಬಿಬಿಎಂಪಿಯಲ್ಲಿ 95 ವಾರ್ಡ್ ಗಳಿಗೆ ಘನತ್ಯಾಜ್ಯ ಸಂಗ್ರಹಣೆ ಹಾಗೂ ಸಾಗಣೆಗೆ ರು.276.72 ಕೋಟಿ ವೆಚ್ಚದ ಅಂದಾಜು ತಯಾರಿಸಲಾಗಿದ್ದು, ಇದು ಹೊಸ ಮಾನದಂಡಗಳನ್ನು ಒಳಗೊಂಡಿದೆ. ಒಟ್ಟಾರೆ ಬಿಬಿಎಂಪಿ ವ್ಯಾಪ್ತಿಗೆ ರು.700 ಕೋಟಿ ವೆಚ್ಚ ಮಾಡಲಾಗುತ್ತದೆ...

95 ವಾರ್ಡ್‍ಗಳ ತ್ಯಾಜ್ಯ ಸಂಗ್ರಹ, ಸಾಗಣೆಗೆ ರು.276 ಕೋಟಿ: ಸಿಎಂ
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
Published On :

ವಿಧಾನಸಭೆ: ಬಿಬಿಎಂಪಿಯಲ್ಲಿ 95 ವಾರ್ಡ್ ಗಳಿಗೆ ಘನತ್ಯಾಜ್ಯ ಸಂಗ್ರಹಣೆ ಹಾಗೂ ಸಾಗಣೆಗೆ ರು.276.72 ಕೋಟಿ ವೆಚ್ಚದ ಅಂದಾಜು ತಯಾರಿಸಲಾಗಿದ್ದು, ಇದು ಹೊಸ ಮಾನದಂಡಗಳನ್ನು ಒಳಗೊಂಡಿದೆ. ಒಟ್ಟಾರೆ ಬಿಬಿಎಂಪಿ ವ್ಯಾಪ್ತಿಗೆ ರು.700 ಕೋಟಿ ವೆಚ್ಚ ಮಾಡಲಾಗುತ್ತದೆ.

ಇದು ಮುಂಬಯಿ, ಹೈದರಾಬಾದ್, ಕೋಲ್ಕತಾಗಿಂತ ಕಡಿಮೆ. ಹೀಗಾಗಿ ಬಿಜೆಪಿ ಸದಸ್ಯರು ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ
ಸ್ಪಷ್ಟಪಡಿಸಿದ್ದಾರೆ. ಘನತ್ಯಾಜ್ಯ ನಿರ್ವಹಣೆಗೆ ವರ್ಷಕ್ಕೆ ರು.1,800 ಕೋಟಿ ವೆಚ್ಚ ಮಾಡಲು ಸರ್ಕಾರ ಮುಂದಾಗಿದ್ದು ಇದು ಆರ್ಥಿಕ ಹೊರೆಗೆ ಕಾರಣವಾಗಿದೆ ಎಂದು ಬಿಜೆಪಿಯ ಸಿ.ಟಿ.
ರವಿ, ಡಾ. ಅಶ್ವತ್ಥನಾರಾಯಣ ಅವರು ನಿಯಮ 69ರಲ್ಲಿ ಮಾತನಾಡಿ, ಆರೋಪ ಮಾಡಿದರು. ಇದಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿಯವರು, ಅವರು ಹೇಳಿದಂತೆ ಸರ್ಕಾರ ಹೆಚ್ಚಿನ ಹಣ ಭರಿಸುತ್ತಿಲ್ಲ. ಇದೀಗ ಒಟ್ಟಾರೆ ರು.500 ಕೋಟಿ ವೆಚ್ಚವಾಗುತ್ತಿದೆ. ಹೊಸ ಮಾನದಂಡಗಳನ್ನು ಅಳವಡಿಸಿ ವ್ಯವಸ್ಥೆ ಸರಿಪಡಿಸಲು ಇನ್ನೂ ರು.200 ಕೋಟಿ ಹೆಚ್ಚಾಗುತ್ತದೆ ಅಷ್ಟೇ ಎಂದರು.

ಮುಂಬಯಿಯಲ್ಲಿ 125 ಲಕ್ಷ ಜನಸಂಖ್ಯೆಗೆ ವಾರ್ಷಿಕ ರು.1,855 ಕೋಟಿ ವೆಚ್ಚ ಮಾಡುತ್ತಿದ್ದಾರೆ. ಹೈದರಾಬಾದ್‍ನಲ್ಲಿ 67 ಲಕ್ಷ ಜನಸಂಖ್ಯೆಗೆ ರು.495 ಕೋಟಿ, ಕೋಲ್ಕತಾದಲ್ಲಿ 45 ಲಕ್ಷ ಜನರಿಗೆ ರು.450 ಕೋಟಿ ವೆಚ್ಚವಾಗುತ್ತಿದೆ. ಇತರೆ ನಗರಕ್ಕಿಂತ ಇಲ್ಲಿ ಹೆಚ್ಚು ಹಣ ವೆಚ್ಚ ಎಂಬ ಮಾಹಿತಿ ಸುಳ್ಳು. ನಾವು ಹೊಸ ಮಾನದಂಡಗಳನ್ನು ರೂಪಿಸಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಟೆಂಡರ್ ಕರೆದಿದ್ದೇವೆ. ಈ ಟೆಂಡರ್‍ಗೂ ಈಗ ಕೋರ್ಟ್ ತಡೆಯಾಜ್ಞೆ ನೀಡಿದೆ. ಅದೆಲ್ಲ ಪ್ರಕ್ರಿಯೆ ಮುಗಿದ ನಂತರ ಉಳಿದ ವಿಷಯಗಳ ಬಗ್ಗೆ ಚರ್ಚಿಸೋಣ ಎಂದು ಸಿದ್ದರಾಮಯ್ಯ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.