ಜಿಲ್ಲಾ ಸುದ್ದಿ

ಬೆಂಗಳೂರು ಹೋಳಾದರೆ ವಿಧಾನಸೌಧ?

ನಿವೃತ್ತ ಕೆಲವು ಕೆಟ್ಟ ಅಧಿಕಾರಿಗಳ ಮಾತು ಕೇಳಿ, ಬೆಂಗಳೂರನ್ನು ಮೂರು ಭಾಗ ಮಾಡಲು ಸರ್ಕಾರ ಹೊರಟಿದೆ. ಮುಂದಿನ ದಿನಗಳಲ್ಲಿ ಲಾಲ್ಬಾಗ್, ಕಬ್ಬನ್ಪಾರ್ಕ್, ವಿಧಾನಸೌಧ ಹೀಗೆ ಪ್ರತಿ ಪ್ರತಿಷ್ಠಿತ ಕಟ್ಟಡ, ಸ್ಥಳಗಳನ್ನೂ ಭಾಗ ಮಾಡಬೇಕಾಗುತ್ತದೆ. ಅದಕ್ಕೇನು ಮಾಡುವಿರಿ? ಎಲ್ಲಿ...

ಬೆಂಗಳೂರು ಹೋಳಾದರೆ ವಿಧಾನಸೌಧ?
ವಾಟಾಳ್ ನಾಗರಾಜ್
Published On :

ಬೆಂಗಳೂರು: ನಿವೃತ್ತ ಕೆಲವು ಕೆಟ್ಟ ಅಧಿಕಾರಿಗಳ ಮಾತು ಕೇಳಿ, ಬೆಂಗಳೂರನ್ನು ಮೂರು ಭಾಗ ಮಾಡಲು ಸರ್ಕಾರ ಹೊರಟಿದೆ. ಮುಂದಿನ ದಿನಗಳಲ್ಲಿ ಲಾಲ್ಬಾಗ್, ಕಬ್ಬನ್ಪಾರ್ಕ್, ವಿಧಾನಸೌಧ ಹೀಗೆ ಪ್ರತಿ ಪ್ರತಿಷ್ಠಿತ ಕಟ್ಟಡ, ಸ್ಥಳಗಳನ್ನೂ ಭಾಗ ಮಾಡಬೇಕಾಗುತ್ತದೆ. ಅದಕ್ಕೇನು ಮಾಡುವಿರಿ? ಎಲ್ಲಿ ಕೂತು ಅಧಿಕಾರ ನಡೆಸುತ್ತೀರಿ ಎಂದು ವಾಟಾಳ್ ನಾಗರಾಜ್ ಪ್ರಶ್ನಿಸಿದರು.

ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ಇದು ಹುಡುಗಾಟದ ವಿಚಾರವಲ್ಲ. ಬೆಂಗಳೂರನ್ನು ಮೂರು ಭಾಗ ಮಾಡುವುದೆಂದರೆ ಕೆಂಪೇಗೌಡರಿಗೆ ಮಾಡುವ ಅವಮಾನ. ಆದ್ದರಿಂದ ಕೂಡಲೇ ಈ ನಿರ್ಧಾರವನ್ನು ಕೈಬಿಡಬೇಕು.

ಒಂದು ವೇಳೆ ಇಬ್ಭಾಗ ಮಾಡಿದರೆ ಮೇಯರ್, ಕಮಿಷನರ್ ಒಬ್ಬರೇ ಇರಲಿ. ಉಪಮೇಯರ್, ಉಪ ಕಮಿಷನರ್ಗಳನ್ನು ಹೆಚ್ಚು ಮಾಡಿಕೊಳ್ಳಲಿ. ಇಲ್ಲದಿದ್ದರೆ ನಾವು ಹೋರಾಟಗಳನ್ನು ರೂಪಿಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.