ವಿಸ್ಡನ್ ದಶಕದ ಕ್ರಿಕೆಟಿಗರ ಸಾಲಿಗೆ ವಿರಾಟ್ ಕೊಹ್ಲಿ!ಕ್ರಿಕೆಟ್ ಆಸ್ಟ್ರೇಲಿಯಾ ದಶಕದ ಟೆಸ್ಟ್ ತಂಡದ ನಾಯಕ ಗೌರವಕ್ಕೆ ಪಾತ್ರರಾಗಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದೀಗ ದಶಕದ ವಿಸ್ಡನ್ ಐದು ಕ್ರಿಕೆಟಿಗರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಕ್ರಿಕೆಟ್ ಮೇಲೂ ಗ್ರಹಣ ಎಫೆಕ್ಟ್: ತಡವಾಗಿ ಆರಂಭವಾಗಲಿದೆ ರಣಜಿ ಪಂದ್ಯಗಳುದಶಕಕದ ಕಟ್ಟಕಡೆಯ ಸೂರ್ಯಗ್ರಹಣದ ಎಫೆಕ್ಟ್ ಕ್ರಿಕೆಟ್ ಪಂದ್ಯಗಳ ಮೇಲೂ ಆಗಿದ್ದು, ಗ್ರಹಣದ ಪರಿಣಾಮ ಭಾರತದಲ್ಲಿ ನಡೆಯುತ್ತಿರುವ ರಣಜಿ ಪಂದ್ಯಗಳ ವೇಳಾಪಟ್ಟಿಯನ್ನೇ ಬದಲಿಸಲಾಗಿದೆ.
ಸೌರವ್ ಗಂಗೂಲಿ ಆಲೋಚನೆ ಫ್ಲಾಪ್ ಐಡಿಯಾ: ಪಾಕ್ ಮಾಜಿ ಕ್ರಿಕೆಟಿಗ ರಶೀದ್ ಲತೀಫ್'ನಾಲ್ಕು ಬಲಿಷ್ಟ ತಂಡಗಳ ಸೂಪರ್ ಸೀರೀಸ್' ಕ್ರಿಕೆಟ್ ಸರಣಿ ಆಯೋಜಿಸುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಆಲೋಚನೆಯನ್ನು ಪಾಕಿಸ್ತಾನದ ಮಾಜಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ರಶೀದ್ ಲತೀಫ್ 'ಫ್ಲಾಪ್ ಐಡಿಯಾ' ಎಂದು ಟೀಕಿಸಿದ್ದಾರೆ.
ಕೋಲಾರದಲ್ಲಿ ಕ್ಯಾಚ್ ಹಿಡಿಯುವ ವೇಳೆ ಆಟಗಾರರಿಬ್ಬರು ಮುಖಾಮುಖಿ ಡಿಕ್ಕಿ, ಕುಸಿದು ಬಿದ್ದ ಫೀಲ್ಡರ್ಸ್!ಧೋನಿ ಪ್ರೀಮಿಯರ್ ಲೀಗ್(ಡಿಪಿಎಲ್)ನಲ್ಲಿ ಕ್ಯಾಚ್ ಹಿಡಿಯುವ ವೇಳೆ ಇಬ್ಬರು ಆಟಗಾರರು ಮುಖಾಮುಖಿ ಡಿಕ್ಕಿಯಾಗಿ ಕುಸಿದು ಬಿದ್ದಿರುವ ವಿಡಿಯೋ ವೈರಲ್ ಆಗಿದೆ.
ಅಕ್ರಮ ಬೌಲಿಂಗ್ ಶೈಲಿ: ಪಾಕ್ನ ಮೊಹಮ್ಮದ್ ಹಫೀಜ್ ಇಸಿಬಿಯಿಂದ ಅಮಾನತು!ಇಂಗ್ಲೆಂಡ್ ಹಾಗೂ ವೇಲ್ಸ್ ಆತಿಥ್ಯದಲ್ಲಿ ನಡೆಯುವ ಎಲ್ಲ ಸ್ಪರ್ಧೆಗಳಿಂದ ಪಾಕಿಸ್ತಾನ ಆಲ್ರೌಂಡರ್ ಮೊಹಮ್ಮದ್ ಹಫೀಜ್ ಅವರನ್ನು ಅಮಾನತುಗೊಳಿಸಲಾಗಿದೆ.
ಐಸಿಸಿ ಟೆಸ್ಟ್ ರ್ಯಾಂಕಿಂಗ್: ಅಗ್ರ ಸ್ಥಾನದಲ್ಲಿ ಕಿಂಗ್ ಕೊಹ್ಲಿ, 7ನೇ ಸ್ಥಾನಕ್ಕೆ ಕುಸಿದ ರಹಾನೆಶ್ರೇಷ್ಠ ಪ್ರದರ್ಶನದೊಂದಿಗೆ ಟೀಂ ಇಂಡಿಯಾ 2019ನೇ ಕ್ರಿಕೆಟ್ ವರ್ಷವನ್ನು ಪೂರ್ಣಗೊಳಿಸಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ ವರ್ಷದ ಕಟ್ಟಕಡೆಯ ಟೆಸ್ಟ್ ರ್ಯಾಂಕಿಂಗ್ ಬಿಡುಗಡೆ ಮಾಡಿದೆ.
ಕ್ರಿಕೆಟ್ ಆಸ್ಟ್ರೇಲಿಯಾ ದಶಕದ ಏಕದಿನ ತಂಡಕ್ಕೆ ಎಂ.ಎಸ್ ಧೋನಿ ನಾಯಕ !ಅನುಭವಿ ವಿಕೆಟ್ಕೀಪರ್-ಬ್ಯಾಟ್ಸ್ಮನ್ ಎಂ.ಎಸ್.ಧೋನಿ ಅವರನ್ನು ದಶಕದ ಕ್ರಿಕೆಟ್ ಆಸ್ಟ್ರೇಲಿಯಾ ಏಕದಿನ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಮಂಗಳವಾರ ಕ್ರಿಕೆಟ್ ಆಸ್ಟ್ರೇಲಿಯಾ ಘೋಷಿಸಿದ ಈ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇತರ ಇಬ್ಬರು ಭಾರತೀಯ ಆಟಗಾರರು ಸ್ಥಾನ ಪಡೆದಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾದ ದಶಕದ ಟೆಸ್ಟ್ ತಂಡಕ್ಕೆ ಭಾರತದ ವಿರಾಟ್ ಕೊಹ್ಲಿ ನಾಯಕವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ಜಯಿಸಿ ಯಶಸ್ವಿಯಾಗಿ 2019ರ ಕ್ರಿಕೆಟ್ ಖುತುವನ್ನು ಪೂರೈಸಿದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದ್ದು, ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ದಶಕದ ಟೆಸ್ಟ್ ತಂಡಕ್ಕೆ ಕೊಹ್ಲಿಯನ್ನು ನಾಯಕನನ್ನಾಗಿ ಆಯ್ಕೆ ಮಾಡಿದೆ.
ಶ್ರೀಲಂಕಾ ಟಿ20 .ಆಸ್ಟ್ರೇಲಿಯಾ ಏಕದಿನಕ್ಕೆ ಟೀಂ ಇಂಡಿಯಾ ಪ್ರಕಟ: ಬುಮ್ರಾ ಕಂ ಬ್ಯಾಕ್, ರೋಹಿತ್ ಗೆ ರೆಸ್ಟ್2020 ರ ಜನವರಿಯಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ 20 ಐ ಸರಣಿ ಮತ್ತು ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಭಾರತದ ತಂಡಗಳನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ಪ್ರಕಟಿಸಿದೆ.
ಕಟಕ್ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್: ಐಸಿಸಿ ರ್ಯಾಂಕಿಂಗ್ ಅಗ್ರಸ್ಥಾನದಲ್ಲಿ ಕೊಹ್ಲಿ!ವಿಂಡೀಸ್ ವಿರುದ್ಧದ ಸರಣಿ ನಿರ್ಣಾಯಕ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ಪಂದ್ಯದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದೀಗ ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.