PBKS ವಿರುದ್ಧ ಗೆದ್ದು ಬೀಗಿದ MI: ಮುಂಬೈ ಇಂಡಿಯನ್ಸ್ ಕೋಚ್ ಕೀರನ್ ಪೊಲಾರ್ಡ್ಗೆ BCCI ದಂಡ!
ಪೊಲಾರ್ಡ್ ವಿರುದ್ಧ ಆಟಗಾರರು ಮತ್ತು ತಂಡದ ಅಧಿಕಾರಿಗಳಿಗೆ ಸಂಬಂಧಿಸಿದ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.3ರ ಅಡಿಯಲ್ಲಿ ಆರೋಪ ಹೊರಿಸಲಾಯಿತು.
ಗುರುವಾರ ನಡೆದ ಪಂಜಾಬ್ ಕಿಂಗ್ಸ್ (PBKS) ವಿರುದ್ಧದ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ (MI) ಬ್ಯಾಟಿಂಗ್ ಕೋಚ್ ಕೀರನ್ ಪೊಲಾರ್ಡ್ ಐಪಿಎಲ್ ನೀತಿ ಸಂಹಿತೆಯ ಲೆವೆಲ್ 1 ಉಲ್ಲಂಘನೆ ಮಾಡಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಡಳಿತ ಮಂಡಳಿ ದಂಡ ವಿಧಿಸಿದೆ. ಪಂದ್ಯದ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ ನಂತರ ವೆಸ್ಟ್ ಇಂಡೀಸ್ನ ಮಾಜಿ ಆಲ್ರೌಂಡರ್ಗೆ ಅವರ ಪಂದ್ಯ ಶುಲ್ಕದ ಶೇ 15 ರಷ್ಟು ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ನೀಡಲಾಯಿತು. ಮುಂಬೈ ಪಂದ್ಯವನ್ನು ಗೆದ್ದು, ಅಭಿಯಾನದಲ್ಲಿ ತಮ್ಮ 4ನೇ ಜಯವನ್ನು ದಾಖಲಿಸಿದರೂ, ಕೋಚ್ ಪೊಲಾರ್ಡ್ ಅವರ ನಡವಳಿಕೆಯು ಪಂದ್ಯದ ರೆಫರಿಗೆ ಇಷ್ಟವಾಗಲಿಲ್ಲ.
ಎರಡನೇ ಇನಿಂಗ್ಸ್ನ 19ನೇ ಓವರ್ನಲ್ಲಿ ಈ ಉಲ್ಲಂಘನೆ ಸಂಭವಿಸಿದೆ. ಐಪಿಎಲ್ ಹೊರಡಿಸಿದ ಪ್ರಕಟಣೆ ಪ್ರಕಾರ, ಪೊಲಾರ್ಡ್ ನಾಲ್ಕನೇ ಅಂಪೈರ್ ಅನ್ನು ಗುರಿಯಾಗಿಸಿಕೊಂಡು ಅಶ್ಲೀಲ ಪದಗಳನ್ನು ಬಳಸಿದ ಆರೋಪದಲ್ಲಿ ತಪ್ಪಿತಸ್ಥರೆಂದು ಕಂಡುಬಂದಿದೆ.
ಪೊಲಾರ್ಡ್ ವಿರುದ್ಧ ಆಟಗಾರರು ಮತ್ತು ತಂಡದ ಅಧಿಕಾರಿಗಳಿಗೆ ಸಂಬಂಧಿಸಿದ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.3ರ ಅಡಿಯಲ್ಲಿ ಆರೋಪ ಹೊರಿಸಲಾಯಿತು. ಇದು ಪಂದ್ಯದ ಸಮಯದಲ್ಲಿ 'ಅಶ್ಲೀಲ ಪದ ಬಳಕೆ'ಯನ್ನು ಒಳಗೊಂಡಿದೆ.
ಐಪಿಎಲ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, 'ಮುಂಬೈ ಇಂಡಿಯನ್ಸ್ನ ಬ್ಯಾಟಿಂಗ್ ಕೋಚ್ ಕೀರನ್ ಪೊಲಾರ್ಡ್ ಅವರಿಗೆ ಐಪಿಎಲ್ ನೀತಿ ಸಂಹಿತೆಯ ಲೆವೆಲ್ 1 ಅನ್ನು ಉಲ್ಲಂಘಿಸಿದ್ದಕ್ಕಾಗಿ ಪಂದ್ಯ ಶುಲ್ಕದ ಶೇ 15 ರಷ್ಟು ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ' ಎಂದಿದೆ.
'ಪಂದ್ಯದ ಸಮಯದಲ್ಲಿ ಅಶ್ಲೀಲ ಪದ ಬಳಕೆಯನ್ನು ಉಲ್ಲೇಖಿಸುವ ಐಪಿಎಲ್ ನೀತಿ ಸಂಹಿತೆಯ 2.3ನೇ ವಿಧಿಯನ್ನು ಪೊಲಾರ್ಡ್ ಉಲ್ಲಂಘಿಸಿದ್ದಾರೆ ಎಂದು ಕಂಡುಬಂದಿದೆ. ಪೊಲಾರ್ಡ್ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಮತ್ತು ಪಂದ್ಯದ ರೆಫರಿ ಪಂಕಜ್ ಧರ್ಮಣಿ ವಿಧಿಸಿದ ಶಿಕ್ಷೆಯನ್ನು ಒಪ್ಪಿಕೊಂಡಿದ್ದಾರೆ. ಎರಡನೇ ಇನಿಂಗ್ಸ್ನ 19ನೇ ಓವರ್ನಲ್ಲಿ ಪೊಲಾರ್ಡ್ ನಾಲ್ಕನೇ ಅಂಪೈರ್ಗೆ ನಿಂದನೀಯ ಭಾಷೆ ಬಳಸಿದ್ದಾರೆ' ಎಂದು ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

