IPL 2026: ವೈಭವ್ ಸೂರ್ಯವಂಶಿ Unprofessional; ಹೇಳಿಕೆ ಕುರಿತು ಸ್ಪಷ್ಟನೆ ಕೊಟ್ಟ RCB ಸ್ಟಾರ್ ಆಟಗಾರ Jitesh Sharma
ಈ ಹಿಂದೆಯೇ ಕ್ರಿಕೆಟರ್ ವೈಭವ್ ಸೂರ್ಯವಂಶಿಯನ್ನು ಅನ್ಫ್ರೊಫೆಶನಲ್ ಎಂದು ಕರೆದಿದ್ದ ಜಿತೇಶ್ ಶರ್ಮಾ ತಮ್ಮ ಹೇಳಿಕೆಗೆ ಈಗ ಕಾರಣವನ್ನು ಕೂಡ ಬಿಚ್ಚಿಟ್ಟಿದ್ದಾರೆ.

ಬೆಂಗಳೂರು: ಭಾರತೀಯ ಕ್ರಿಕೆಟ್ ನ ನೂತನ ಸೆನ್ಸೆಷನಲ್ ಆಟಗಾರ ವೈಭವ್ ಸೂರ್ಯವಂಶಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ಆಟಗಾರ ಜಿತೇಶ್ ಶರ್ಮಾ ಕೊನೆಗೂ ಸ್ಪಷ್ಟನೆ ನೀಡಿದ್ದಾರೆ.
ಈ ಹಿಂದೆಯೇ ಕ್ರಿಕೆಟರ್ ವೈಭವ್ ಸೂರ್ಯವಂಶಿಯನ್ನು ಅನ್ಫ್ರೊಫೆಶನಲ್ ಎಂದು ಕರೆದಿದ್ದ ಜಿತೇಶ್ ಶರ್ಮಾ ತಮ್ಮ ಹೇಳಿಕೆಗೆ ಈಗ ಕಾರಣವನ್ನು ಕೂಡ ಬಿಚ್ಚಿಟ್ಟಿದ್ದಾರೆ.
ಡ್ಯಾನಿಶ್ ಸೇಠ್ ನಡೆಸಿಕೊಡುವ ಆರ್ ಸಿಬಿ ಇನ್ ಸೈಡರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಜಿತೇಶ್, '15 ವರ್ಷದ ವೈಭವ್ ಸೂರ್ಯವಂಶಿ ಈಗಾಗಲೇ ಐಪಿಎಲ್ ಲೋಕದಲ್ಲಿ ಕಮಾಲ್ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ಕ್ರಿಕೆಟ್ ನ ಮೂರು ಮಾದರಿಗಳಲ್ಲಿ ಅವರು ಉತ್ತಮ ಪ್ರದರ್ಶನ ನೀಡಿ ಮಿಂಚಲಿದ್ದಾರೆ' ಎಂದು ಹೇಳಿದರು.
ಅದು ತಮಾಷೆಯ ಮಾತಾಗಿತ್ತೇ ಹೊರತು ಹೀಯಾಳಿಕೆ ಅಲ್ಲ
ಆರ್ಸಿಬಿ (RCB) ವಿಕೆಟ್ ಕೀಪರ್ ಜಿತೇಶ್ ಶರ್ಮಾ, ರಾಜಸ್ಥಾನ್ ರಾಯಲ್ಸ್ನ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು "ಅನ್ಪ್ರೊಫೆಷನಲ್" (ವೃತ್ತಿಪರತೆಯಿಲ್ಲದವನು) ಎಂದು ಕರೆದಿರುವುದು ಅವರ ನಡುವಿನ ಆತ್ಮೀಯ ಮತ್ತು ಅಣ್ಣ-ತಮ್ಮಂದಿರಂತಹ ಸಂಬಂಧದಿಂದ ಆಡಿದ ತಮಾಷೆಯ ಮಾತೇ ಹೊರತು ಬೇರೇನೂ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ ವೈಭವ್ ಮೈದಾನದ ಹೊರಗೆ ಅನ್ಪ್ರೊಫೆಷನಲ್ ಆಗಿದ್ದಾನೆ ಎಂದು ಜಿತೇಶ್ ಹೇಳಿದ್ದರೂ, ಅದು ಅವರ ವಯಸ್ಸಿಗೆ ಸಹಜವಾದ ಅಭ್ಯಾಸಗಳನ್ನು ಸೂಚಿಸುತ್ತದೆಯೇ ಹೊರತು ಕ್ರಿಕೆಟ್ ಮೇಲಿನ ಬದ್ಧತೆಯನ್ನಲ್ಲ ಎಂದು ಜಿತೇಶ್ ತಿಳಿಸಿದ್ದಾರೆ.
ಸಹೋದರನಂತಹ ಬಾಂಧವ್ಯ
"ವೈಭವ್ ನನಗೆ ತಮ್ಮನಿದ್ದಂತೆ, ಅವನು ನನ್ನ ರೂಮಿಗೆ ಬಂದು ಐಸ್ ಕ್ರೀಮ್ ತಿನ್ನುತ್ತಾನೆ. ನಮಗಿರುವ ಆಪ್ತತೆಯಿಂದ ನಾನು ಅವನನ್ನು ಏನು ಬೇಕಾದರೂ ಕರೆಯಬಲ್ಲೆ" ಎಂದು ಜಿತೇಶ್ ಹೇಳಿದ್ದಾರೆ.
ಅಂತೆಯೇ ದೊಡ್ಡ ಮಟ್ಟದ ಕ್ರಿಕೆಟ್ ಆಡುತ್ತಿದ್ದರೂ ವೈಭವ್ ಇನ್ನೂ ಮಗು. ಅವನಲ್ಲಿರುವ ಆ ಬಾಲ್ಯದ ಗುಣಗಳು ಹಾಗೆಯೇ ಇರಲಿ ಎಂದು ಜಿತೇಶ್ ಅಭಿಪ್ರಾಯಪಟ್ಟಿದ್ದಾರೆ.
ಏನಿದು ವಿವಾದ?
ಎಬಿ ಡಿ ವಿಲಿಯರ್ಸ್ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಪಾಲ್ಗೊಂಡಿದ್ದ ಜಿತೇಶ್ ವೈಭವ್ ಸೂರ್ಯವಂಶಿ ಕುರಿತು ಮಾತನಾಡಿದ್ದರು. ಭವಿಷ್ಯದ ಭಾರತೀಯ ತಾರೆ ಯಾರಾಗಬಹುದು ಎಂಬ ಪ್ರಶ್ನೆಗೆ ಜಿತೇಶ್ ತಕ್ಷಣವೇ ವೈಭವ್ ಹೆಸರನ್ನು ಸೂಚಿಸಿದ್ದರು.
ವೈಭವ್ ಮೈದಾನದಲ್ಲಿ ಸಂಪೂರ್ಣ ವೃತ್ತಿಪರನಾಗಿದ್ದರೂ, ಮೈದಾನದ ಹೊರಗೆ ಆತ ಅನ್ ಪ್ರೊಫೆಷನಲ್.. ತಡರಾತ್ರಿಯಲ್ಲಿ ಐಸ್ ಕ್ರೀಮ್ ತಿನ್ನುವುದು ಮತ್ತು ಕಾರ್ಟೂನ್ ನೋಡುವುದರಲ್ಲಿ ಮಗ್ನನಾಗಿರುತ್ತಾನೆ. ಈ ಬಾಲಿಶ ಗುಣಗಳ ಕಾರಣದಿಂದ ಅವರನ್ನು ಹಾಗೆ ಕರೆದಿದ್ದಾಗಿ ಜಿತೇಶ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



