ಕ್ರಿಕೆಟ್

ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಖರೀದಿಗೆ ಆಕ್ರೋಶ: 'ಅವರು ನಮ್ಮ ಆದ್ಯತೆಯಾಗಿದ್ದರು' ಎಂದ SRH ಕೋಚ್!

ಪಾಕಿಸ್ತಾನದ ಆಟಗಾರರ ಸುತ್ತಲಿನ ಊಹಾಪೋಹಗಳ ಬಗ್ಗೆ 'ಅರಿವಿದೆ'. ಆದರೆ, ಅವರನ್ನು ಖರೀಸಬಾರದು ಎಂಬುದರ ಕುರಿತು ಯಾವುದೇ ನಿರ್ದಿಷ್ಟ ಸೂಚನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಖರೀದಿಗೆ ಆಕ್ರೋಶ: 'ಅವರು ನಮ್ಮ ಆದ್ಯತೆಯಾಗಿದ್ದರು' ಎಂದ SRH ಕೋಚ್!
ಅಬ್ರಾರ್ ಅಹ್ಮದ್
Published On :

ಐಪಿಎಲ್ ತಂಡ ಸನ್‌ರೈಸರ್ಸ್ ಹೈದರಾಬಾದ್ ಮಾಲೀಕರಾದ ಚೆನ್ನೈ ಮೂಲದ ಸನ್ ಗ್ರೂಪ್ ಒಡೆತನದ ಸನ್‌ರೈಸರ್ಸ್ ಲೀಡ್ಸ್, ದಿ ಹಂಡ್ರೆಡ್ 2026 ಹರಾಜಿನ ಸಮಯದಲ್ಲಿ ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿದ್ದು, ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ. ಅಬ್ರಾರ್ ಈ ಹರಾಜಿನಲ್ಲಿ ಭಾರತೀಯ ಒಡೆತನದ ಫ್ರಾಂಚೈಸಿಯಿಂದ ಸಹಿ ಮಾಡಿದ ಮೊದಲ ಪಾಕಿಸ್ತಾನದ ಆಟಗಾರರಾದರು. ಪಾಕಿಸ್ತಾನದ ಮಿಸ್ಟರಿ ಸ್ಪಿನ್ನರ್ ಅನ್ನು 190,000 ಪೌಂಡ್‌ಗಳಿಗೆ (ಅಂದಾಜು ₹2.34 ಕೋಟಿ) ಖರೀದಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ಸಹ-ಮಾಲೀಕರಾದ ಕಾವ್ಯಾ ಮಾರನ್ ಕೂಡ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಹರಾಜಿನ ನಂತರ, ಸನ್‌ರೈಸರ್ಸ್ ಮುಖ್ಯ ಕೋಚ್ ಡೇನಿಯಲ್ ವೆಟ್ಟೋರಿ ಪಾಕಿಸ್ತಾನದ ಕ್ರಿಕೆಟಿಗನನ್ನು ಖರೀದಿಸುವ ಕ್ರಮದ ಬಗ್ಗೆ ಮಾತನಾಡಿದ್ದಾರೆ.

ಅಬ್ರಾರ್ ಅಹ್ಮದ್ ಅವರು ವಿಶೇಷ ಬೌಲರ್ ಆಗಿದ್ದಾರೆ. ಏಕೆಂದರೆ, ಅವರು ಹಲವಾರು ವಿಭಿನ್ನ ವೇರಿಯೇಷನ್ಸ್‌ಗಳನ್ನು ಹೊಂದಿದ್ದಾರೆ. ಅನೇಕ ದೇಶೀಯ ಆಟಗಾರರು ಅಬ್ರಾರ್ ಅವರನ್ನು ಮೊದಲು ಎದುರಿಸದಿರಬಹುದು. ಆದ್ದರಿಂದ ಅವರ ಅಪರಿಚಿತ ಬೌಲಿಂಗ್ ಶೈಲಿಯು ಅವರನ್ನು ರೀಡ್ ಮಾಡಲು ಮತ್ತು ಆಡಲು ಕಷ್ಟಕರವಾಗಿಸುತ್ತದೆ ಎಂದು ಡೇನಿಯಲ್ ವೆಟ್ಟೋರಿ ಬಿಬಿಸಿ ಸ್ಪೋರ್ಟ್‌ಗೆ ತಿಳಿಸಿದ್ದಾರೆ.

ಮಾಜಿ ನ್ಯೂಜಿಲೆಂಡ್ ನಾಯಕ, ಪಾಕಿಸ್ತಾನದ ಆಟಗಾರರ ಸುತ್ತಲಿನ ಊಹಾಪೋಹಗಳ ಬಗ್ಗೆ 'ಅರಿವಿದೆ' ಎಂದು ಹೇಳಿದರು. ಆದರೆ, ಅವರನ್ನು ಖರೀಸಬಾರದು ಎಂಬುದರ ಕುರಿತು ಯಾವುದೇ ನಿರ್ದಿಷ್ಟ ಸೂಚನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

'ನಮಗೆ ಲಭ್ಯವಿರುವ ಪ್ರತಿಯೊಬ್ಬ ಆಟಗಾರರೊಂದಿಗೆ ನಾವು ಹರಾಜಿಗೆ ಬಂದಿದ್ದೇವೆ. ಈ ಆಯ್ಕೆಯು ಲಭ್ಯವಾದ ತಕ್ಷಣ ಅಂತರರಾಷ್ಟ್ರೀಯ ತಂಡಗಳಿಂದ ಹಲವಾರು ಉತ್ತಮ ಸ್ಪಿನ್ನರ್‌ಗಳು ಇದ್ದರು. ಆದರೆ, ಅಬ್ರಾರ್ ಅವರಿಗೆ ಆದ್ಯತೆ ನೀಡಲಾಯಿತು' ಎಂದು ಅವರು ಹೇಳಿದರು.

ಮತ್ತೊಬ್ಬ ಸ್ಪಿನ್ನರ್ ಉಸ್ಮಾನ್ ತಾರಿಕ್ ಅವರನ್ನು ಬರ್ಮಿಂಗ್ಹ್ಯಾಮ್ ಫೀನಿಕ್ಸ್ GBP 140,000 (ಅಂದಾಜು ₹1.72 ಕೋಟಿ) ಗೆ ಖರೀದಿಸಿದ ನಂತರ ಹರಾಜಿನ ಸಮಯದಲ್ಲಿ ಮಾರಾಟವಾದ ಎರಡನೇ ಪಾಕಿಸ್ತಾನದ ಆಟಗಾರ ಅಬ್ರಾರ್ ಆಗಿದ್ದರು.

ಆದಾಗ್ಯೂ, ಫೀನಿಕ್ಸ್ ಯಾವುದೇ IPL ಸಂಪರ್ಕವನ್ನು ಹೊಂದಿಲ್ಲ.

ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್, ಆಫ್ ಸ್ಪಿನ್ ಆಲ್ ರೌಂಡರ್ ಸೈಮ್ ಅಯೂಬ್ ಮತ್ತು ಸ್ಪಿನ್ನರ್ ಶಾದಾಬ್ ಖಾನ್ ಮಾರಾಟವಾಗದೆ ಉಳಿದರು. ಅನುಭವಿ ಎಡಗೈ ಸೀಮರ್ ಶಾಹೀನ್ ಶಾ ಆಫ್ರಿದಿ ಈ ಹಿಂದೆ ಹರಾಜಿನಿಂದ ಹಿಂದೆ ಸರಿದಿದ್ದರು.

ಬುಧವಾರದ ಮಹಿಳಾ ಹರಾಜಿನಲ್ಲಿ ಕೇವಲ ಇಬ್ಬರು ಪಾಕಿಸ್ತಾನದ ಆಟಗಾರರಾದ ಫಾತಿಮಾ ಸನಾ ಮತ್ತು ಸಾದಿಯಾ ಇಕ್ಬಾಲ್ ಕೂಡ ಮಾರಾಟವಾಗದೆ ಉಳಿದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.