ಲಂಡನ್‌ನಲ್ಲಿ ಅನುಷ್ಕಾ ಶರ್ಮಾ ಜೊತೆ ವಿರಾಟ್ ಕೊಹ್ಲಿ ಔಟಿಂಗ್; ಮಗ ಅಕಾಯ್ ಜೊತೆಗೆ ಕಾಣಿಸಿಕೊಂಡ ಸ್ಟಾರ್ ಬ್ಯಾಟರ್!
ಈ ತಿಂಗಳ ಆರಂಭದಲ್ಲಿ, ದಂಪತಿ ವೃಂದಾವನದಲ್ಲಿರುವ ಪ್ರೇಮಾನಂದ ಮಹಾರಾಜ್ ಅವರ ರಾಧಾ ಕೇಲಿ ಕುಂಜ್ ಆಶ್ರಮಕ್ಕೆ ಭೇಟಿ ನೀಡಿ ಅವರ ಆಶೀರ್ವಾದ ಪಡೆದರು.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮುಂಬೈನ ಗದ್ದಲದಿಂದ ದೂರವಾಗಿ ಲಂಡನ್‌ನಲ್ಲಿ ಶಾಂತ ಜೀವನವನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ಈ ಸ್ಟಾರ್ ದಂಪತಿ ಲಂಡನ್ ಉದ್ಯಾನದಲ್ಲಿ ವಿಹಾರದ ಸಮಯದಲ್ಲಿ ತಮ್ಮ ಮಗ ಅಕಾಯ್ ಜೊತೆ ಸಮಯ ಕಳೆಯುತ್ತಿರುವುದು ಕಂಡುಬಂದಿದೆ. ಈ ವೇಳೆ ವಿರಾಟ್ ಅಕಾಯ್ ಅನ್ನು ಎತ್ತಿಕೊಂಡು ಹೋಗುತ್ತಿರುವುದು ಫೋಟೊಗಳಲ್ಲಿ ಸೆರೆಯಾಗಿದೆ. ಅಲ್ಲದೆ, ದಂಪತಿ ಉದ್ಯಾನವನದಲ್ಲಿ ಸ್ನೇಹಿತರೊಂದಿಗೆ ಮಾತುಕತೆ ನಡೆಸುತ್ತಿರುವುದು ಕಂಡುಬರುತ್ತದೆ. ಈ ಫೋಟೊಗಳು ಇದೀಗ ಸಾಮಾಜಿಕ ಮಾಧ್ಯಮ ಬಳಕೆದಾರರ ಹೃದಯ ಗೆದ್ದಿದೆ.
ವಿಹಾರದ ವೇಳೆ ಅನುಷ್ಕಾ ಸಡಿಲವಾದ ಜೀನ್ಸ್ ಪ್ಯಾಂಟ್‌ನೊಂದಿಗೆ ಶರ್ಟ್ ಧರಿಸಿದ್ದರೆ. ವಿರಾಟ್ ಪ್ಯಾಂಟ್ ಮತ್ತು ಕಪ್ಪು ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಕಳೆದ ವಾರ ಅಹಮದಾಬಾದ್‌ನಲ್ಲಿ ಅಭಿಮಾನಿಯೊಬ್ಬರನ್ನು ಭೇಟಿಯಾದ ನಂತರ ಈ ಚಿತ್ರಗಳು ಹೊರಬಂದಿವೆ. ತಾಜ್ ಹೋಟೆಲ್‌ನ ಉದ್ಯೋಗಿಯೊಬ್ಬರು ದಂಪತಿ ಜೊತೆಗಿನ ಫೋಟೊಗಳು ಮತ್ತು ಕೈಬರಹದ ಟಿಪ್ಪಣಿಗಳ ಚಿತ್ರಗಳನ್ನು ಪೋಸ್ಟ್ ಮಾಡಿದರು. ಅವರ ಆತಿಥ್ಯಕ್ಕಾಗಿ ಸಿಬ್ಬಂದಿಗೆ ದಂಪತಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಟಿಪ್ಪಣಿಯಲ್ಲಿ, 'ಆಶಿ ಅವರಿಗೆ, ಎಲ್ಲ ಸಹಾಯಕ್ಕಾಗಿ ಧನ್ಯವಾದಗಳು. ನಮ್ಮಿಂದ ಶುಭಾಶಯಗಳು' ಎಂದು ಬರೆದಿದ್ದು, ವಿರಾಟ್ ಮತ್ತು ಅನುಷ್ಕಾ ಇಬ್ಬರೂ ಸಹಿ ಮಾಡಿದ್ದಾರೆ. ಈ ಪೋಸ್ಟ್‌ಗೆ ಆನ್‌ಲೈನ್‌ನಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಒಬ್ಬ ಬಳಕೆದಾರರು, 'ಪವರ್ ಕಪಲ್' ಎಂದು ಬರೆದರೆ, ಇನ್ನೊಬ್ಬರು, 'ಮೇಡಂ ಜಿ ಕಿ ತೋ ಲೈಫ್ ಬ್ಯಾನ್ ಗಯಿ' ಎಂದು ಕಮೆಂಟ್ ಮಾಡಿದ್ದಾರೆ.
ಈ ತಿಂಗಳ ಆರಂಭದಲ್ಲಿ, ದಂಪತಿ ವೃಂದಾವನದಲ್ಲಿರುವ ಪ್ರೇಮಾನಂದ ಮಹಾರಾಜ್ ಅವರ ರಾಧಾ ಕೇಲಿ ಕುಂಜ್ ಆಶ್ರಮಕ್ಕೆ ಭೇಟಿ ನೀಡಿ ಅವರ ಆಶೀರ್ವಾದ ಪಡೆದರು. ಅವರ ಭೇಟಿಯ ಹಲವಾರು ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.
ವೃಂದಾವನಕ್ಕೆ ಆಗಾಗ್ಗೆ ಭೇಟಿ ನೀಡುವ ವಿರಾಟ್ ಮತ್ತು ಅನುಷ್ಕಾ, ಖ್ಯಾತಿ ಮತ್ತು ಯಶಸ್ಸನ್ನು ಮೀರಿದ ಜೀವನವನ್ನು ನಡೆಸಲು ಪ್ರೇಮಾನಂದ ಮಹಾರಾಜ್ ಅವರ ಮಾರ್ಗದರ್ಶನವನ್ನು ಹೆಚ್ಚಾಗಿ ಪಡೆಯುತ್ತಾರೆ.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 2017 ರಲ್ಲಿ ವಿವಾಹವಾದರು. ದಂಪತಿಗೆ ಮಗಳು ವಮಿಕಾ ಮತ್ತು ಅಕಾಯ್ ಎಂಬ ಮಗ ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


