'ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಇರಲಿ, ಇಲ್ಲದಿರಲಿ ಅದು ಸಮಸ್ಯೆಯಾಗಲ್ಲ': ಭಾರತದ ಮಾಜಿ ಆಟಗಾರ ಸಂದೀಪ್ ಪಾಟೀಲ್
ರೋಹಿತ್ ಮತ್ತು ಕೊಹ್ಲಿ 2027ರ ಏಕದಿನ ವಿಶ್ವಕಪ್‌ನಲ್ಲಿ ಭಾಗವಹಿಸುವುದು ಆಡುವ ಇಚ್ಛೆ, ದೈಹಿಕ ಕ್ಷಮತೆ ಮತ್ತು ಆಯ್ಕೆಗಾರರ ಚಿಂತನೆ ಸೇರಿದಂತೆ ಹಲವು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಸಂದೀಪ್ ಹೇಳಿದರು.

ಭಾರತೀಯ ಕ್ರಿಕೆಟ್ ತಂಡದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಭವಿಷ್ಯದ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. 2027ರ ಏಕದಿನ ವಿಶ್ವಕಪ್‌ಗೆ ಇನ್ನೂ ಸುಮಾರು ಒಂದು ವರ್ಷ ಬಾಕಿಯಿರುವಾಗ, ಈ ಟೂರ್ನಿಯಲ್ಲಿ ಇವರಿಬ್ಬರ ಭಾಗವಹಿಸುವಿಕೆಯ ಬಗ್ಗೆ ಅನಿಶ್ಚಿತತೆಯ ಕಾರ್ಮೋಡಗಳು ಕವಿದಿವೆ. ಈ ಬೃಹತ್ ಕೂಟ ಆರಂಭವಾಗುವ ಹೊತ್ತಿಗೆ ರೋಹಿತ್ ಅವರಿಗೆ 40 ವರ್ಷ ಮತ್ತು ಕೊಹ್ಲಿ ಅವರಿಗೆ 39 ವರ್ಷ ವಯಸ್ಸಾಗಿರುತ್ತದೆ. ಭಾರತದ ಮಾಜಿ ಆಲ್‌ರೌಂಡರ್ ಸಂದೀಪ್ ಪಾಟೀಲ್ ಅವರು ಭಾರತೀಯ ಕ್ರಿಕೆಟ್ ತಂಡದ 'ಬೆಂಚ್ ಸ್ಟ್ರೆಂತ್' ಅನ್ನು ಶ್ಲಾಘಿಸುವುದರೊಂದಿಗೆ ದಿಟ್ಟ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಹಿರಿಯ ಜೋಡಿಯ ಉಪಸ್ಥಿತಿ ಅಥವಾ ಅನುಪಸ್ಥಿತಿಯು ತಂಡದ ಮೇಲೆ ಅಥವಾ ಅದರ ಪ್ರದರ್ಶನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರೋಹಿತ್ ಮತ್ತು ಕೊಹ್ಲಿ 2027ರ ಏಕದಿನ ವಿಶ್ವಕಪ್‌ನಲ್ಲಿ ಭಾಗವಹಿಸುವುದು ಆಡುವ ಇಚ್ಛೆ, ದೈಹಿಕ ಕ್ಷಮತೆ ಮತ್ತು ಆಯ್ಕೆಗಾರರ ಚಿಂತನೆ ಸೇರಿದಂತೆ ಹಲವು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಸಂದೀಪ್ ಹೇಳಿದರು.
'ಇದು ಆ ಇಬ್ಬರು ಆಟಗಾರರ ಮೇಲೆ ಅವಲಂಬಿತವಾಗಿದೆ. ಅವರು ಆಟವನ್ನು ಮುಂದುವರಿಸಲು ಬಯಸುತ್ತಾರೆಯೇ? ತಮ್ಮ ದೈಹಿಕ ಕ್ಷಮತೆಯನ್ನು ಕಾಯ್ದುಕೊಳ್ಳಲು ಅವರಿಗೆ ಸಾಧ್ಯವಾಗುವುದೇ? ಆಯ್ಕೆಗಾರರ ತಂತ್ರವೇನು? ಅವರು ಭವಿಷ್ಯದ ದೃಷ್ಟಿಯಿಂದ ಯೋಚಿಸುತ್ತಿದ್ದಾರೆಯೇ? ಸದ್ಯದ ಆಟಗಾರರ ಜೊತೆಗೆ, ಒಂದು ವೇಳೆ ಅವರನ್ನು ತಂಡದಿಂದ ಕೈಬಿಡುವ ಪರಿಸ್ಥಿತಿ ಬಂದರೆ, ಅವರ ಸ್ಥಾನವನ್ನು ತುಂಬಬಲ್ಲ ಸಮರ್ಥ ಆಟಗಾರರು ನಮ್ಮಲ್ಲಿದ್ದಾರೆಯೇ ಎಂಬುದನ್ನು ನಾವು ಯಾವಾಗಲೂ ಪರಿಗಣಿಸಬೇಕಾಗುತ್ತದೆ. ನಾನು ಆಗಷ್ಟೇ ಪ್ರಸ್ತಾಪಿಸಿದ ಭಾರತೀಯ ತಂಡದ 'ಬೆಂಚ್ ಸ್ಟ್ರೆಂತ್' ಅನ್ನು ಗಮನಿಸಿದರೆ, ವಿರಾಟ್ ಅಥವಾ ರೋಹಿತ್ ತಂಡದಲ್ಲಿ ಇರಲಿ ಅಥವಾ ಇಲ್ಲದಿರಲಿ, ಯಾವುದೇ ಸಮಸ್ಯೆ ಉಂಟಾಗಲಿದೆ ಎಂದು ನನಗೆ ಅನ್ನಿಸುವುದಿಲ್ಲ' ಎಂದು ಭಾರತದ ಮಾಜಿ ಆಲ್‌ರೌಂಡರ್ 'ಸ್ಪೋರ್ಟ್ಸ್‌ನೆಕ್ಸ್ಟ್' (SportsNext) ಗೆ ತಿಳಿಸಿದರು.
'ಈ ಇಬ್ಬರೂ ಆಟಗಾರರು ಹಲವು ವರ್ಷಗಳಿಂದ ಆಡುತ್ತಾ ಬಂದಿದ್ದಾರೆ ಮತ್ತು ಅವರನ್ನು ದಂತಕಥೆಗಳೆಂದು ಪರಿಗಣಿಸಲಾಗುತ್ತದೆ. ರೋಹಿತ್ ಶರ್ಮಾ 'ವೈಟ್-ಬಾಲ್' ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆಟಗಾರನಾಗಿದ್ದಾರೆ. ಇನ್ನು ವಿರಾಟ್ ವಿಷಯಕ್ಕೆ ಬಂದರೆ, ಅವರ ಬಗ್ಗೆ ಎಷ್ಟೇ ಹೇಳಿದರೂ ಅದು ಕಡಿಮೆಯೇ' ಎಂದು ಅವರು ಹೇಳಿದರು.
ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡದಲ್ಲಿ ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಸ್ಥಾನ ಪಡೆದಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಏಕದಿನ ತಂಡ
ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರುತುರಾಜ್ ಗಾಯಕ್ವಾಡ್, ಕೆಎಲ್ ರಾಹುಲ್, ಧ್ರುವ್ ಜುರೆಲ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಮೊಹಮ್ಮದ್ ಸಿರಾಜ್, ಔಕಿಬ್ ನಬಿ, ಯಶಸ್ವಿ ಜೈಸ್ವಾಲ್, ನಮನ್ ಧೀರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



