Women's T20 World Cup 2026: ಪ್ರೇಕ್ಷಕರ ಸಂಖ್ಯೆಯಲ್ಲೂ India vs Pakistan ಪಂದ್ಯ ಐತಿಹಾಸಿಕ ದಾಖಲೆ!
ಭಾರತ ನೀಡಿದ್ದ 171 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಪಾಕಿಸ್ತಾನ ತಂಡ ಕೇವಲ 106 ರನ್ ಗಳಿಗೇ ಆಲೌಟ್ ಆಗುವ ಮೂಲಕ 64 ರನ್ ಗಳ ಹೀನಾಯ ಸೋಲು ಕಂಡಿತು.

ಬರ್ಮಿಂಗ್ ಹ್ಯಾಮ್: ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಇಂದಿನ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಐತಿಹಾಸಿಕ ದಾಖಲೆಗೆ ಪಾತ್ರವಾಯಿತು.
ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ 64 ರನ್ ಗಳ ಅಮೋಘ ಜಯಭೇರಿ ಬಾರಿಸಿತು.
ಭಾರತ ನೀಡಿದ್ದ 171 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಪಾಕಿಸ್ತಾನ ತಂಡ ಕೇವಲ 106 ರನ್ ಗಳಿಗೇ ಆಲೌಟ್ ಆಗುವ ಮೂಲಕ 64 ರನ್ ಗಳ ಹೀನಾಯ ಸೋಲು ಕಂಡಿತು.
ಭಾರತದ ಪರ ದೀಪ್ತಿ ಶರ್ಮಾ 5 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರೆ, ಶ್ರೀಚರಣಿ 3 ಮತ್ತು ಶಫಾಲಿ ವರ್ಮಾ 1 ವಿಕೆಟ್ ಪಡೆದರು.
ಪ್ರೇಕ್ಷಕರ ಸಂಖ್ಯೆಯಲ್ಲೂ ಐತಿಹಾಸಿಕ ದಾಖಲೆ
ಇನ್ನು ಈ ಹೈವೋಲ್ಟೇಜ್ ಪಂದ್ಯ ಕ್ರಿಕೆಟ್ ಮಾತ್ರವಲ್ಲದೇ ಪ್ರೇಕ್ಷಕರ ಸಂಖ್ಯೆಯಲ್ಲೂ ಐತಿಹಾಸಿಕ ದಾಖಲೆ ನಿರ್ಮಿಸಿತು. ಇಂದಿನ ಪಂದ್ಯವನ್ನು ದಾಖಲೆ ಪ್ರಮಾಣದ ಪ್ರೇಕ್ಷಕರು ಕಣ್ತುಂಬಿಕೊಂಡರು. ಇಂದಿನ ಪಂದ್ಯಕ್ಕಾಗಿ ಬರೊಬ್ಬರಿ 18814 ಪ್ರೇಕ್ಷಕರು ಕ್ರೀಡಾಂಗಣಕ್ಕೆ ಆಗಮಿಸಿದ್ದು,
ಮಹಿಳಾ ಟಿ20 ವಿಶ್ವಕಪ್‌ನ ಯಾವುದೇ ಗುಂಪು ಹಂತದ ಪಂದ್ಯದಲ್ಲಿ ಇದುವರೆಗಿನ ಅತ್ಯಧಿಕ ಹಾಜರಾತಿಯಾಗಿದೆ.
ಈ ಹಿಂದಿನ ಅತ್ಯಧಿಕ ಹಾಜರಾತಿ ದಾಖಲೆ ಎಂದರೆ ಅದು 15935 ಪ್ರೇಕ್ಷಕರು. 2024ರ ಅಕ್ಟೋಬರ್ 6ರಂದು ದುಬೈನಲ್ಲಿ ನಡೆದ ಭಾರತ vs ಪಾಕಿಸ್ತಾನ ಪಂದ್ಯಕ್ಕೆ 15935 ಪ್ರೇಕ್ಷಕರು ಹಾಜರಿದ್ದರು.
ಇದೀಗ ಬರ್ಮಿಂಗ್ ಹ್ಯಾಮ್ ಕ್ರೀಡಾಂಗಣ ಈ ದಾಖಲೆ ಮುರಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



