Women's Asia Cup 2026: ಲಂಕಾವನ್ನು 72 ರನ್‌ಗಳಿಂದ ಬಗ್ಗುಬಡಿದು, ದಾಖಲೆಯ 8ನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡ ಭಾರತ!
ಈ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆಯೊಂದನ್ನು ಮಾಡಲಾಗಿತ್ತು. ಪ್ರತಿಕಾ ರಾವಲ್ ಅವರ ಬದಲಿಗೆ ಜಿ. ಕಮಲಿನಿ ಅವರನ್ನು ಆಡಿಸಲಾಯಿತು. ಆದರೆ, ತಂಡದ ಆರಂಭಿಕ ಜೋಡಿಯೇ ಪಂದ್ಯದ ನಿರ್ಣಾಯಕ ಹಂತದಲ್ಲಿ ಮಿಂಚಿತು.

ಚೆನ್ನೈ: ಭಾನುವಾರ ನಡೆದ ಮಹಿಳಾ ಟಿ20 ಏಷ್ಯಾ ಕಪ್ ಫೈನಲ್‌ನಲ್ಲಿ ಶಫಾಲಿ ವರ್ಮಾ (68) ಮತ್ತು ಸ್ಮೃತಿ ಮಂಧನಾ (59) ಅವರ ಅಬ್ಬರದ ಆಟದಿಂದ ಭಾರತ ತಂಡ, ಶ್ರೀಲಂಕಾವನ್ನು ಹೀನಾಯವಾಗಿ ಸೋಲಿಸಿತು.
184 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ, ಚಮರಿ ಅಥಪತ್ತು ಕ್ರೀಸ್‌ನಲ್ಲಿದ್ದವರೆಗೂ ಗೆಲುವಿನ ಭರವಸೆ ಹೊಂದಿತ್ತು. ದೀಪ್ತಿ ಶರ್ಮಾ ಅವರ ಬೌಲಿಂಗ್‌ನಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾದ ಅಥಪತ್ತು 32 ಎಸೆತಗಳಲ್ಲಿ 36 ರನ್ ಗಳಿಸಿ ಔಟಾದ ನಂತರ, ಶ್ರೀಲಂಕಾ ತಂಡವು ಕುಸಿತ ಕಂಡಿತು. ಅಂತಿಮವಾಗಿ 111 ರನ್‌ಗಳಿಗೆ ಆಲೌಟ್ ಆಗಿ 72 ರನ್‌ಗಳ ಅಂತರದಿಂದ ಸೋಲನ್ನಪ್ಪಿತು.
ಈ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆಯೊಂದನ್ನು ಮಾಡಲಾಗಿತ್ತು. ಪ್ರತಿಕಾ ರಾವಲ್ ಅವರ ಬದಲಿಗೆ ಜಿ. ಕಮಲಿನಿ ಅವರನ್ನು ಆಡಿಸಲಾಯಿತು. ಆದರೆ, ತಂಡದ ಆರಂಭಿಕ ಜೋಡಿಯೇ ಪಂದ್ಯದ ನಿರ್ಣಾಯಕ ಹಂತದಲ್ಲಿ ಮಿಂಚಿತು.
ಕಳೆದ ಕೆಲವು ವರ್ಷಗಳಲ್ಲಿ ಈ ಮಾದರಿಯಲ್ಲಿ ಶಫಾಲಿ ವರ್ಮಾ ಮತ್ತು ಮಂಧನಾ ನಿಸ್ಸಂದೇಹವಾಗಿ ಭಾರತದ ಅತ್ಯುತ್ತಮ ಬ್ಯಾಟರ್‌ಗಳಾಗಿದ್ದಾರೆ. ಭಾನುವಾರದ ಪಂದ್ಯದಲ್ಲೂ ಇದು ಸಾಬೀತಾಯಿತು. ಆರಂಭಿಕ ಆಟಗಾರ್ತಿಯರು ಅತ್ಯುತ್ತಮ ಪ್ರದರ್ಶನ ಮೂಲಕ ಉತ್ತಮ ರನ್ ಕಲೆಹಾಕಿದರು.
ಪವರ್‌ಪ್ಲೇನಲ್ಲಿ ಆಕ್ರಮಣಕಾರಿ ಆಟವಾಡಿದ ವರ್ಮಾ, ಭಾರತದ ಮೊತ್ತವನ್ನು ಆರು ಓವರ್‌ಗಳಲ್ಲಿ 57/0 ಕ್ಕೆ ಕೊಂಡೊಯ್ದರು. ವರ್ಮಾ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ಮಂಧನಾ ಕೂಡ ಶೀಘ್ರದಲ್ಲೇ ಆ ಸಾಧನೆಯ ಹತ್ತಿರ ತಲುಪಿದರು. ನೀಲಾಕ್ಷಿಕಾ ಸಿಲ್ವಾ ಅವರ ಬೌಲಿಂಗ್‌ನಲ್ಲಿ ಸಿಕ್ಸರ್ ಮತ್ತು ಬೌಂಡರಿ ಬಾರಿಸಿದ ಮಂಧನಾ ತಮ್ಮ 36ನೇ ಅರ್ಧಶತಕವನ್ನು ಪೂರೈಸಿದರು. ಸ್ವಲ್ಪ ಸಮಯದ ನಂತರ ವರ್ಮಾ ಔಟಾದರು. ಮಂಧನಾ ಶತಕ ಗಳಿಸುವ ಅವಕಾಶವನ್ನು ಕಳೆದುಕೊಂಡರು. ಏಕೆಂದರೆ ಗೊಂದಲದ ಕಾರಣದಿಂದಾಗಿ ರನ್-ಔಟ್ ಆದರು.
ಇನ್ನೂ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ನಾಯಕಿ ಹರ್ಮನ್‌ಪ್ರೀತ್ ಕೌರ್ ರಿಚಾ ಘೋಷ್ ಜೊತೆಗೆ ಸೇರಿಕೊಂಡು ತಂಡದ ವೇಗವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿದರು. ಆದರೆ, ಘೋಷ್ (13 ಎಸೆತಗಳಲ್ಲಿ 17 ರನ್) ವಿಕೆಟ್ ಒಪ್ಪಿಸಿದರು. ಅವರ ಬೆನ್ನಲ್ಲೇ ಕೌರ್ ಮತ್ತು ಭಾರತಿ ಫುಲ್ಮಾಲಿ ಕೂಡ ಔಟಾದರು.
Women's Asia Cup 2026: ಪಾಕಿಸ್ತಾನವನ್ನು ಸೋಲಿಸಿ ಫೈನಲ್ಗೆ ಶ್ರೀಲಂಕಾ ಲಗ್ಗೆ; ಮತ್ತೊಮ್ಮೆ ಭಾರತದೊಂದಿಗೆ ಸೆಣಸಾಟ!
ಸುದೀರ್ಘ ವಿರಾಮದ ನಂತರ ತಂಡಕ್ಕೆ ಮರಳಿದ ಕಮಲಿನಿ, ತಾವು ಆಡಿದ ಈ ಟೂರ್ನಿಯ ಮೊದಲ ಪಂದ್ಯದಲ್ಲಿ 5 ಎಸೆತಗಳಲ್ಲಿ ಅಜೇಯ 15 ರನ್ ಗಳಿಸಿ ಭಾರತದ ಇನ್ನಿಂಗ್ಸ್ ಬಲವಾಗಿ ಮುಕ್ತಾಯಗೊಳ್ಳಲು ನೆರವಾದರು.
ಸಂಕ್ಷಿಪ್ತ ಸ್ಕೋರ್‌ಗಳು: ಭಾರತ 20 ಓವರ್‌ಗಳಲ್ಲಿ 183/5 (ವರ್ಮಾ 68, ಮಂಧನಾ 59; ಪ್ರಬೋದಾ 1/40); ಶ್ರೀಲಂಕಾ 20 ಓವರ್‌ಗಳಲ್ಲಿ 111 (ಅಥಪತ್ತು 36; ಶ್ರೀ ಚರಣಿ 4/20, ದೀಪ್ತಿ 3/19)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


