ಕ್ರಿಕೆಟ್

Women's T20 World Cup 2026: ಇತಿಹಾಸ ಬರೆದ Deepti Sharma; ಪಾಕಿಸ್ತಾನ ವಿರುದ್ಧ ಭಾರತಕ್ಕೆ 64 ರನ್ ಭರ್ಜರಿ ಜಯ

ಭಾರತ ನೀಡಿದ್ದ 171 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಪಾಕಿಸ್ತಾನ ತಂಡ ಕೇವಲ 106 ರನ್ ಗಳಿಗೇ ಆಲೌಟ್ ಆಗುವ ಮೂಲಕ 64 ರನ್ ಗಳ ಹೀನಾಯ ಸೋಲು ಕಂಡಿತು.

Women's T20 World Cup 2026: ಇತಿಹಾಸ ಬರೆದ Deepti Sharma; ಪಾಕಿಸ್ತಾನ ವಿರುದ್ಧ ಭಾರತಕ್ಕೆ 64 ರನ್ ಭರ್ಜರಿ ಜಯ
ದೀಪ್ತಿ ಶರ್ಮಾ ಅದ್ಭುತ ಬೌಲಿಂಗ್
Published On :

ಬರ್ಮಿಂಗ್ ಹ್ಯಾಮ್: ಐಸಿಸಿ ಟಿ20 ಮಹಿಳಾ ವಿಶ್ವಕಪ್ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಭಾರತ ತಂಡ ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 64 ರನ್ ಗಳ ಭರ್ಜರಿ ಜಯ ದಾಖಲಿಸಿದೆ.

ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 171 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಪಾಕಿಸ್ತಾನ ತಂಡ ಕೇವಲ 106 ರನ್ ಗಳಿಗೇ ಆಲೌಟ್ ಆಗುವ ಮೂಲಕ 64 ರನ್ ಗಳ ಹೀನಾಯ ಸೋಲು ಕಂಡಿತು.

ಉತ್ತಮ ಆರಂಭದ ಹೊರತಾಗಿಯೂ ಪಾಕಿಸ್ತಾನ ನಿಯಮಿತವಾಗಿ ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತು. ಮೊದಲ ವಿಕೆಟ್ ಗೆ ಮುನೀಬಾ ಅಲಿ-ಗುಲ್ ಫಿರೋಜಾ ಜೋಡಿ 38 ರನ್ ಗಳ ಜೊತೆಯಾಟವಾಡಿತು. ಆದರೆ 12 ರನ್ ಗಳಿಸಿದ್ದ ಗುಲ್ ಫಿರೋಜಾ ದೀಪ್ತಿ ಶರ್ಮಾ ಬೌಲಿಂಗ್ ನಲ್ಲಿ ಔಟಾದರು. ಬಳಿಕ ಪಾಕಿಸ್ತಾನದ ಪೆವಿಲಿಯನ್ ಪರೇಡ್ ಆರಂಭವಾಯಿತು.

ಆಯೇಷಾ ಜಾಫರ್ (12), ಸೈರಾ ಜಬೀನ್ (2), ನಟಲಾಯಿ ಫರ್ವೇಜ್ (7), ನಾಯಕಿ ಫಾತಿಮಾ ಸನಾ ಶೂನ್ಯ ಸುತ್ತಿ ನಿರಾಶೆ ಮೂಡಿಸಿದರು. 41 ರನ್ ಗಳಿ ಪಾಕಿಸ್ತಾನದ ಭರವಸೆಯಂತಿದ್ದ ಆರಂಭಿಕ ಆಟಗಾರ್ತಿ ಮುನೀಬಾ ಅಲಿ ಕೂಡ ರನೌಟ್ ಬಲಿಯಾಗಿದ್ದು ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿತು.

ಆಲಿಯಾ ರಿಯಾಜ್ 18 ರನ್ ಗಳಿಸಿದರೂ ದೀಪ್ತಿ ಶರ್ಮಾ ಪರಿಣಾಮಕಾರಿ ಬೌಲಿಂಗ್ ಗೆ ಉತ್ತರಿಸಲಾಗದೇ ವಿಕೆಟ್ ಒಪ್ಪಿಸಿದರು. ರಮೀನ್ ಶಮೀಮ್ 4, ನಶ್ರಾ ಸಂಧು 4, ತಸ್ಮಿಯಾ ರುಬಾಬ್ (0) ಬೇಗನೆ ವಿಕೆಟ್ ಒಪ್ಪಿಸಿ ಪಾಕಿಸ್ತಾನದ ಸೋಲಿಗೆ ಕಾರಣರಾದರು.

ಇನ್ನು ಭಾರತದ ಪರ ದೀಪ್ತಿ ಶರ್ಮಾ 5 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರೆ, ಶ್ರೀಚರಣಿ 3 ಮತ್ತು ಶಫಾಲಿ ವರ್ಮಾ 1 ವಿಕೆಟ್ ಪಡೆದರು.

ಇತಿಹಾಸ ಬರೆದ ದೀಪ್ತಿ ಶರ್ಮಾ

ಇನ್ನು ಈ ಪಂದ್ಯದಲ್ಲಿ ಪಾಕಿಸ್ತಾನ ಪ್ರಮುಖ 5 ವಿಕೆಟ್ ಪಡೆದ ಭಾರತದ ದೀಪ್ತಿ ಶರ್ಮಾ ಐತಿಹಾಸಿಕ ಸಾಧನೆ ಮಾಡಿದರು. ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ 350 ವಿಕೆಟ್ ಪಡೆದ ಮೊದಲ ಸ್ಪಿನ್ನರ್ ಎಂಬ ದಾಖಲೆಗೆ ದೀಪ್ತಿ ಶರ್ಮಾ ಪಾತ್ರರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.